8 ನೇ ತರಗತಿ ಅಧ್ಯಾಯ 1 ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ
1. ಬೆಳೆ ಎಂದರೇನು?
ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ.
ಉದಾಹರಣೆಗೆ, ಗೋಧಿಯ ಬೆಳೆ ಎಂದರೆ, ಒಂದು ಜಮೀನಿನಲ್ಲಿ ಬೆಳೆಯುವ ಎಲ್ಲ ಸಸ್ಯಗಳು ಗೋಧಿಯ ಸಸ್ಯಗಳು ಎಂದರ್ಥ.
2. ಬೆಳೆಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು?
ಬೆಳೆಗಳಲ್ಲಿ ಮೂರು ವಿಧಗಳಿವೆ. ಅವು ಯಾವುವೆಂದರೆ- ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳು.
3. ಯಾವ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು?
ಭತ್ತದ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು.
4. ಕೃಷಿ ಪದ್ಧತಿಗಳು ಎಂದರೇನು?
ಬೆಳೆಗಳ ಕೃಷಿಗಾಗಿ ರೈತರು ಕೈಗೊಳ್ಳುವ ಚಟುವಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ್ಧತಿಗಳು ಎನ್ನುವರು.
5 ಕೃಷಿ ಪದ್ಧತಿ ಗಳನ್ನು ಹೆಸರಿಸಿ.
ಎ. ಮಣ್ಣನ್ನು ಹದಗೊಳಿಸುವಿಕೆ
ಬಿ. ಬಿತ್ತನೆ
ಸಿ. ಸಾವಯವ ಗೊಬ್ಬರಗಳು ಮತ್ತು ರಸಗೊಬ್ಬರಗಳನ್ನು ಸೇರಿಸುವುದು.
ಡಿ. ನೀರಾವರಿ.
ಇ. ಕಳೆಗಳಿಂದ ರಕ್ಷಣೆ
ಎಫ್. ಕೊಯ್ಲು.
ಜಿ. ಸಂಗ್ರಹಣೆ.
6. ಮಣ್ಣು ಒಳಗೊಂಡಿರುವ ಅಂಶಗಳನ್ನು ಹೆಸರಿಸಿ.
ಖನಿಜಗಳು, ನೀರು, ಗಾಳಿ ಮತ್ತು ಕೆಲವು ಜೀವಿಗಳನ್ನು ಮಣ್ಣು ಒಳಗೊಂಡಿದೆ.
7. ಕೃಷಿಯ ಮೊದಲ ಹಂತ ಯಾವುದು?
ಮಣ್ಣನ್ನು ಹದಗೊಳಿಸುವುದು.
8. ಕೃಷಿಯಲ್ಲಿನ ಬಹು ಮುಖ್ಯ ಕಾರ್ಯ ಯಾವುದು?
ಕೃಷಿಯಲ್ಲಿನ ಬಹು ಮುಖ್ಯ ಕಾರ್ಯ ಯಾವುದೆಂದರೆ, ಮಣ್ಣನ್ನು ತಿರುವಿ ಹಾಕುವುದು ಮತ್ತು ಅದನ್ನು ಸಡಿಲಗೊಳಿಸುವುದು. ಇದರಿಂದ ಬೇರುಗಳು ಮಣ್ಣಿನ ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ. ಬೇರುಗಳು ಅತ್ಯಂತ ಆಳಕ್ಕೆ ಹೋದರೂ ಸಡಿಲವಾದ ಮಣ್ಣು ಅವುಗಳ ಸುಲಭ ಉಸಿರಾಟಕ್ಕೆ ಅನುವು ಮಾಡಿಕೊಡುತ್ತದೆ.
9. ಸಡಿಲವಾದ ಮಣ್ಣಿನ ಪ್ರಾಮುಖ್ಯತೆಯನ್ನು ತಿಳಿಸಿ.
ಸಡಿಲವಾದ ಮಣ್ಣು ಎರೆಹುಳುಗಳ ಮತ್ತು ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
10. ರೈತನ ಮಿತ್ರ ಯಾರು?
ಎರೆಹುಳು ಮತ್ತು ಮಣ್ಣಿನಲ್ಲಿ ವಾಸಿಸುವ ಕೆಲವು ಸೂಕ್ಷ್ಮಾಣುಜೀವಗಳು.
11. ಎರೆಹುಳುಗಳ ಕಾರ್ಯವೇನು?
ಎರೆಹುಳುಗಳು ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುತ್ತವೆ ಮತ್ತು ಅದಕ್ಕೆ ಹ್ಯೂಮಸ್ ಅನ್ನು ಸೇರಿಸುತ್ತವೆ.
12. ಉಳುಮೆ ಮಾಡುವುದು ಎಂದರೇನು?
ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುವ ಪ್ರಕ್ರಿಯೆಯನ್ನು ಉಳುಮೆ ಮಾಡುವುದು ಎನ್ನುತ್ತಾರೆ.
13. ಉಳುಮೆ ಮಾಡಲು ಬಳಸುವ ಸಾಧನ ಯಾವುದು?
ನೇಗಿಲು.
14. ಜಮೀನನ್ನು ಮಟ್ಟ ಮಾಡಲು ಉಪಯೋಗಿಸುವ ಸಾಧನ ಯಾವುದು?
ಲೆವೆಲ್ಲರ್ (leveller)
15. ನೇಗಿಲಿನ ಬಗ್ಗೆ ಟಿಪ್ಪಣಿ ಬರೆಯಿರಿ.
ಮಣ್ಣನ್ನು ಉಳುಮೆ ಮಾಡಲು, ಬೆಳೆಗೆ ಗೊಬ್ಬರಗಳನ್ನು ಹಾಕಲು, ಕಳೆಗಳನ್ನು ತೆಗೆಯಲು ಮಣ್ಣನ್ನು ಪುಡಿ ಮಾಡಲು ಮುಂತಾದ ಕೆಲಸಗಳಿಗೆ ಅನಾದಿಕಾಲದಿಂದ ನೇಗಿಲನ್ನು ಬಳಸಲಾಗುತ್ತಿದೆ. ಈ ಸಲಕರಣೆಯನ್ನು ಮರದಿಂದ ಮಾಡಲಾಗಿದ್ದು ಎತ್ತುಗಳಿಂದ ಅಥವಾ ಇತರ ಪ್ರಾಣಿಗಳಿಂದ (ಕುದುರೆಗಳು ಒಂಟೆಗಳು ಇತ್ಯಾದಿ) ಎಳೆಯಲಾಗುತ್ತದೆ. ಇದು ಬಲಯುತವಾದ ತ್ರಿಕೋನಾಕಾರದ ಕಬ್ಬಿಣದ ಚೂರನ್ನು ಹೊಂದಿದ್ದು ಅದನ್ನು ನೇಗಿಲಿನ ಕುಳ ಕರೆಯುತ್ತಾರೆ. ಉದ್ದನೆಯ ಮರದ ತುಂಡು ನೇಗಿಲಿನ ಮುಖ್ಯ ಭಾಗವಾಗಿದ್ದು ಅದನ್ನು ಎಂದು ಈಚು ಎಂದು ಕರೆಯುತ್ತಾರೆ. ಈಚಿನ ಒಂದು ತುದಿಯಲ್ಲಿ ಹಿಡಿಕೆ (ಮೇಳಿ) ಇರುತ್ತದೆ. ಇನ್ನೊಂದು ತುದಿಯನ್ನು ಎತ್ತುಗಳ ಕುತ್ತಿಗೆಯ ಮೇಲಿಡುವ ನೊಗಕ್ಕೆ ಕಟ್ಟಲಾಗುತ್ತದೆ. ಒಂದು ಜೊತೆ ಎತ್ತುಗಳು ಮತ್ತು ಒಬ್ಬ ಮನುಷ್ಯ ಸುಲಭವಾಗಿ ನೇಗಿಲನ್ನು ಬಳಸಬಹುದು.
Comments
Post a Comment