8 ನೇ ತರಗತಿ ಅಧ್ಯಾಯ-1 ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಭಾಗ-2
WINNERS RULE THE WORLD
LIKE SCIENCE
LEARN SCIENCE
LOVE SCIENCE
1.. ಭತ್ತವನ್ನು ಚಳಿಗಾಲದಲ್ಲಿ ಬೆಳೆಯದಿರಲು ಕಾರಣವೇನು?
ಭತ್ತದ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು ಆದ್ದರಿಂದ ಇದನ್ನು ಮಳೆಗಾಲದಲ್ಲಿ ಮಾತ್ರ ಬೆಳೆಯಲಾಗುತ್ತದೆ.
2. ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಯಾವುವು?
ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಕುರ್ಪಿ, ಕುಡುಗೋಲು, ಸಲಿಕೆ, ನೇಗಿಲು ಇತ್ಯಾದಿ.
3. ಬೆಳೆ ಎಂದರೇನು?
ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ.
4. ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯ ಇದೆಯೇ?
ಹೌದು, ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯವಿದೆ.
5. ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಅಧ್ಯಾಯದಲ್ಲಿ ಬರುವ ಪ್ರಮುಖ ಪದಗಳನ್ನು ಹೆಸರಿಸಿ.
ಕೃಷಿ ಪದ್ಧತಿಗಳು,
ಪಶುಸಂಗೋಪನೆ
ಬೆಳೆ
ರಸಗೊಬ್ಬರಗಳು
ಗೋದಾಮುಗಳು
ಕೊಯ್ಲು
ನೀರಾವರಿ
ಖಾರಿಫ್
ಸಾವಯವ ಗೊಬ್ಬರ
ನೇಗಿಲು
ರಬಿ
ಬೀಜಗಳು
ಸಂಗ್ರಹಾಗಾರ
ಬಿತ್ತನೆ
ಸಂಗ್ರಹಣೆ
ಒಕ್ಕಣೆ
ಕಳೆಗಳು
ಕಳೆನಾಶಕ
ತೂರುವಿಕೆ.
6. ಕೃಷಿ ಪದ್ಧತಿಗಳು ಎಂದರೇನು?
ಬೆಳೆಗಳ ಕೃಷಿಯು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ರೈತರು ಕೈಗೊಳ್ಳುವ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ, ಈ ಚಟುವಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ್ಧತಿಗಳು ಎನ್ನುವರು.
7. ಕೃಷಿ ಪದ್ಧತಿಗಳನ್ನು ಪಟ್ಟಿ ಮಾಡಿ.
ಮಣ್ಣನ್ನು ಹದಗೊಳಿಸುವಿಕೆ
ಬಿತ್ತನೆ
ಸಾವಯವ ಗೊಬ್ಬರಗಳು ಮತ್ತು ರಸಗೊಬ್ಬರಗಳನ್ನು ಸೇರಿಸುವುದು ನೀರಾವರಿ
ಕಳೆಗಳಿಂದ ರಕ್ಷಣೆ
ಕೊಯ್ಲು
ಸಂಗ್ರಹಣೆ
8. ಕೃಷಿಯಲ್ಲಿನ ಮೊದಲ ಹಂತ ಯಾವುದು?
ಮಣ್ಣನ್ನು ಹದಗೊಳಿಸುವುದು
9. ಕೃಷಿಯಲ್ಲಿನ ಬಹು ಮುಖ್ಯ ಕಾರ್ಯ ಯಾವುದು?
ಮಣ್ಣನ್ನು ತಿರುವಿ ಹಾಕುವುದು ಮತ್ತು ಅದನ್ನು ಸಡಿಲಗೊಳಿಸುವುದು.
10. ಮಣ್ಣನ್ನು ತಿರುವಿ ಹಾಕುವುದು ಮತ್ತು ಸಡಿಲಗೊಳಿಸುವುದರ ಪ್ರಾಮುಖ್ಯತೆಯನ್ನು ತಿಳಿಸಿ.
ಮಣ್ಣನ್ನು ತಿರುವಿ ಹಾಕುವುದು ಮತ್ತು ಸಡಿಲಗೊಳಿಸುವುದರಿಂದ ಬೇರುಗಳು ಮಣ್ಣಿನ ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ. ಬೇರುಗಳು ಅತ್ಯಂತ ಆಳಕ್ಕೆ ಹೋದರೂ ಸಡಿಲವಾದ ಮಣ್ಣು ಅವುಗಳ ಸುಲಭ ಉಸಿರಾಟಕ್ಕೆ ಅನುವುಮಾಡಿಕೊಡುತ್ತದೆ.
11. ಸಡಿಲವಾದ ಮಣ್ಣಿನಿಂದ ರೈತನಿಗೆ ಏನು ಪ್ರಯೋಜನ?
ಸಡಿಲವಾದ ಮಣ್ಣು ಎರೆಹುಳುಗಳ ಮತ್ತು ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಜೀವಿಗಳು ರೈತನ ಮಿತ್ರ.
12. ಸಡಿಲವಾದ ಮಣ್ಣಿನಲ್ಲಿ ಎರೆಹುಳುಗಳು ಮತ್ತು ಸೂಕ್ಷ್ಮಜೀವಿಗಳ ಪಾತ್ರವನ್ನು ತಿಳಿಸಿ.
ಸಡಿಲವಾದ ಮಣ್ಣಿನಲ್ಲಿ ವಾಸಿಸುವ ಎರೆಹುಳುಗಳು ಮತ್ತು ಸೂಕ್ಷ್ಮಾಣು ಜೀವಿಗಳು ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುತ್ತವೆ ಹಾಗೂ ಅದಕ್ಕೆ ಹ್ಯೂಮಸ್ಸನ್ನು ಸೇರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.
13. ಮಣ್ಣಿಗೆ ಪೋಷಕಾಂಶಗಳು ಹೇಗೆ ಮರಳಿ ಸೇರಿಸಲ್ಪಡುತ್ತದೆ?
ಮಣ್ಣು, ಖನಿಜಗಳು, ನೀರು, ಗಾಳಿ ಮತ್ತು ಕೆಲವು ಜೀವಿಗಳನ್ನು ಒಳಗೊಂಡಿದೆ. ಸತ್ತ ಸಸ್ಯಗಳು ಮತ್ತು ಪ್ರಾಣಿಗಳು ಮಣ್ಣಿನಲ್ಲಿರುವ ವಿಘಟಕ ಸೂಕ್ಷ್ಮಜೀವಿಗಳಾದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ವಿಘಟನೆಗಳ್ಳುತ್ತವೆ. ಹೀಗೆ ಪೋಷಕಾಂಶಗಳು ಮರಳಿ ಮಣ್ಣಿಗೆ ಸೇರಿಸಲ್ಪಡುತ್ತವೆ. ಈ ಪೋಷಕಾಂಶಗಳು ಪುನಹ ಸಸ್ಯಗಳಿಂದ ಹೀರಲ್ಪಡುತ್ತವೆ.
14. ಉಳುಮೆ ಮಾಡುವುದು ಎಂದರೇನು?
ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುವ ಪ್ರಕ್ರಿಯೆಯನ್ನು ಉಳುಮೆ ಮಾಡುವುದು ಎನ್ನುತ್ತಾರೆ.
15. ಉಳುಮೆ ಮಾಡಲು ಬಳಸುವ ಉಪಕರಣ ಯಾವುದು?
ನೇಗಿಲು
16. ಉಳುಮೆ ಮಾಡುವ ಮೊದಲು ಮಣ್ಣು ಬಹಳಷ್ಟು ಒಣಗಿದ್ದರೆ ಏನು ಮಾಡುತ್ತಾರೆ?
ಉಳುಮೆ ಮಾಡುವ ಮೊದಲು ಮಣ್ಣು ಬಹಳಷ್ಟು ಒಣಗಿದ್ದರೆ ನೀರನ್ನು ಹಾಯಿಸುತ್ತಾರೆ.
17. ಹೆಂಟೆಗಳು ಎಂದರೇನು?
ಉಳುಮೆ ಮಾಡಿದ ಜಮೀನು ಮಣ್ಣಿನ ದೊಡ್ಡ ಚೂರುಗಳನ್ನು ಹೊಂದಿರಬಹುದು ಇವುಗಳನ್ನು ಹೆಂಟೆಗಳೆನ್ನುವರು.
18. ಜಮೀನನ್ನು ಏಕೆ ಮಟ್ಟ ಮಾಡಬೇಕು?
ಜಮೀನನ್ನು ಬಿತ್ತನೆ ಮಾಡಲು ಮತ್ತು ನೀರಾವರಿ ಉದ್ದೇಶಗಳಿಗಾಗಿ ಮಟ್ಟಮಾಡಬೇಕು.
19. ಜಮೀನನ್ನು ಮಟ್ಟ ಮಾಡಲು ಬಳಸುವ ಉಪಕರಣ ಯಾವುದು?
ಲೆವೆಲ್ಲರ್(leveller)
20. ಉಳುಮೆಗೆ ಮೊದಲು ಮಣ್ಣಿಗೆ ಏನನ್ನು ಹಾಕಲಾಗುತ್ತದೆ?
ಉಳುಮೆಗೆ ಮೊದಲು ಮಣ್ಣಿಗೆ ಗೊಬ್ಬರವನ್ನು ಹಾಕಲಾಗುತ್ತದೆ. ಗೊಬ್ಬರವು ಮಣ್ಣಿನೊಂದಿಗೆ ಸರಿಯಾಗಿ ಮಿಶ್ರಣವಾಗಲು ಉಳುಮೆ ಸಹಾಯಮಾಡುತ್ತದೆ. ಬಿತ್ತನೆಗೆ ಮೊದಲು ಮಣ್ಣನ್ನು ತೇವಪೂರಿತಗೊಳಿಸಲಾಗುತ್ತದೆ.
Comments
Post a Comment