2 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.
30/04/2021
I LOVE SCIENCE AND S. S. L. C.
ವಿಜ್ಞಾನ ವಿಷಯ ನಮ್ಮದು! ಎಸ್. ಎಸ್. ಎಲ್. ಸಿ. ಪರೀಕ್ಷೆ ನಮ್ಮದು!
1. ವಿದ್ಯುತ್ ಮಂಡಲ ಎಂದರೇನು?
ಉತ್ತರ:- ವಿದ್ಯುತ್ ಪ್ರವಾಹದ ನಿರಂತರ ಮತ್ತು ಆವೃತ ಮಾರ್ಗವನ್ನು ವಿದ್ಯುತ್ ಮಂಡಲ ಎನ್ನುವರು.
2. ವಿದ್ಯುತ್ ಪ್ರವಾಹ ಎಂದರೇನು?
ಉತ್ತರ:- ಒಂದು ಏಕಮಾನ ಕಾಲದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಮಾಣ ಅಥವಾ ವಿದ್ಯುದಾವೇಶಗಳ ಪ್ರವಾಹದ ದರವನ್ನು ವಿದ್ಯುತ್ಪ್ರವಾಹ ಎನ್ನುವರು.
3. ವಿದ್ಯುತ್ ಪ್ರವಾಹದ SI ಏಕಮಾನ ಏನು?
ಉತ್ತರ:- ಆಂಪೇರ್
4 ವಿದ್ಯುತ್ ಪ್ರವಾಹವನ್ನು ಅಳೆಯುವ ಉಪಕರಣ ಯಾವುದು?
ಉತ್ತರ:- ವಿದ್ಯುತ್ ಪ್ರವಾಹವನ್ನು ಅಳೆಯುವ ಉಪಕರಣ ಅಮ್ಮೀಟರ್
5 ಅಮ್ಮೀಟರ್ ಅನ್ನು ವಿದ್ಯುನ್ಮಂಡಲದಲ್ಲಿ ಹೇಗೆ ಜೋಡಿಸುತ್ತಾರೆ?
ಉತ್ತರ:- ಅಮ್ಮೀಟರ್ ಅನ್ನು ವಿದ್ಯುನ್ಮಂಡಲದಲ್ಲಿ ಸರಣಿಯಲ್ಲಿ ಜೋಡಿಸುತ್ತಾರೆ.
6 ವಿದ್ಯುತ್ ಆವೇಶದ SI ಏಕಮಾನ ಏನು?
ಉತ್ತರ:- ಕೂಲಮ್ (C)
7 ಒಂದು ಕೂಲಮ್ (C) ಎಷ್ಟು ಇಲೆಕ್ಟ್ರಾನ್ ಗಳಿಗೆ ಸಮ?
ಉತ್ತರ:- ಒಂದು ಕೂಲಮ್ (C) 6X1018 ಇಲೆಕ್ಟ್ರಾನ್ ಗಳಿಗೆ ಸಮ?
8 ವಿದ್ಯುತ್ ವಿಭವಾಂತರ ಎಂದರೇನು?
ಉತ್ತರ:- ಒಂದು ಏಕಮಾನ ಆವೇಶವನ್ನು ವಿದ್ಯುನ್ಮಂಡಲದಲ್ಲಿ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಆಗವ ಕೆಲಸವನ್ನು ವಿದ್ಯುತ್ ವಿಭವಾಂತರ ಎನ್ನುವರು.
9 ವಿದ್ಯುತ್ ವಿಭವಾಂತರ SI ಏಕಮಾನ ಏನು?
ಉತ್ತರ:- ವೋಲ್ಟ್ (V)
10. ವಿದ್ಯುತ್ ವಿಭವಾಂತರ ವನ್ನು ಅಳೆಯುವ ಉಪಕರಣ ಯಾವುದು?
ಉತ್ತರ:- ವೋಲ್ಟ್ ಮೀಟರ್
Comments
Post a Comment