3 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.
01/05/2021
WINNERS RULE THE WORLD
LOVE CHEMISTRY BECAUSE
Hydrogen being a highly inflammable gas and oxygen being a supporter of combustion, yet water which is a compound made up of hydrogen and oxygen is used to extinguish fire.
I LOVE SCIENCE AND S. S. L. C.
ವಿಜ್ಞಾನ ವಿಷಯ ನಮ್ಮದು! ಎಸ್. ಎಸ್. ಎಲ್. ಸಿ. ಪರೀಕ್ಷೆ ನಮ್ಮದು!
ಧಾತುಗಳ ಆವರ್ತನೀಯ ವರ್ಗೀಕರಣ
1. ಧಾತು ಎಂದರೇನು?
ಉತ್ತರ:- ಒಂದೇ ರೀತಿಯ ಪರಮಾಣುಗಳಿಂದಾದ ವಸ್ತುವನ್ನು ಧಾತು ಎನ್ನುವರು.
2. ವೈಜ್ಞಾನಿಕವಾಗಿ ಪರಿಶುದ್ಧ ವಸ್ತುಗಳು ಯಾವುವು?
ಉತ್ತರ:- ಧಾತುಗಳು ಅಥವಾ ಮೂಲವಸ್ತುಗಳೆಲ್ಲವೂ ಪರಿಶುದ್ಧ ವಸ್ತುಗಳು.
3. ಧಾತುಗಳಿಗೆ ಉದಾಹರಣೆ ಕೊಡಿ.
ಉತ್ತರ:- ಹೈಡ್ರೋಜನ್, ಕಾರ್ಬನ್, ಆಕ್ಸಿಜನ್, ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ಮೆಗ್ನೀಸಿಯಂ ಇತ್ಯಾದಿ.
4. ಆವರ್ತಕ ಕೋಷ್ಟಕ ಎಂದರೇನು?
ಉತ್ತರ:- ಧಾತುಗಳನ್ನು ಅವುಗಳ ಪ್ರಮುಖ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸಲ್ಪಟ್ಟಿರುವ ಧಾತುಗಳ ಗುಂಪು.
5. ಡೋಬರೈನರ್ ನ ತ್ರಿವಳಿಗಳ ನಿಯಮ ಬರೆಯಿರಿ.
ಉತ್ತರ:- ಮೂರು ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ ಅವುಗಳಲ್ಲಿ ಮಧ್ಯದ ಧಾತುವಿನ ಪರಮಾಣು ರಾಶಿಯು ಉಳಿದೆರಡು ಧಾತುಗಳ ಪರಮಾಣು ರಾಶಿಗಳ ಸರಿಸುಮಾರು ಸರಾಸರಿಯಷ್ಟಿಯಿರುತ್ತದೆ.
6. ನ್ಯೂಲ್ಯಾಂಡ್ಸ್ ರವರ ಅಷ್ಟಕಗಳ ನಿಯಮ ಬರೆಯಿರಿ.
ಉತ್ತರ:- ಧಾತುಗಳನ್ನು ಗುಂಪು ಗೂಡಿಸಿ, ಅವುಗಳ ಪರಮಾಣುರಾಶಿಯ ಏರಿಕೆಯ ಕ್ರಮದಲ್ಲಿ ಜೋಡಿಸಿದಾಗ ಆ ಗುಂಪಿನ ಎಂಟನೇ ಧಾತುವಿನ ಲಕ್ಷಣಗಳು ಮೊದಲನೆಯ ಧಾತುವಿನ ಲಕ್ಷಣಗಳನ್ನು ಹೋಲುತ್ತವೆ.
7. ಮಂಡಲೀವ್ ರವರ ಆವರ್ತಕ ನಿಯಮವನ್ನು ಬರೆಯಿರಿ.
ಉತ್ತರ:- "ಧಾತುಗಳ ಲಕ್ಷಣಗಳು ಅವುಗಳ ಪರಮಾಣು ರಾಶಿಯ ಆವರ್ತನೀಯ ಪುನರಾವರ್ತನೆಗಳು"
8. ಆವರ್ತಗಳು ಎಂದರೇನು?
ಉತ್ತರ:- ಆವರ್ತಕ ಕೋಷ್ಟಕದ ಅಡ್ಡ ಸಾಲುಗಳನ್ನು ಆವರ್ತಗಳು ಎನ್ನುವರು.
9. ಗುಂಪುಗಳು/ವರ್ಗಗಳು ಎಂದರೇನು?
ಉತ್ತರ:- ಆವರ್ತಕ ಕೋಷ್ಟಕದ ಕಂಬಸಾಲುಗಳನ್ನು ಗುಂಪುಗಳು/ ವರ್ಗಗಳು ಎನ್ನುವರು.
10. ಆಧುನಿಕ ಆವರ್ತಕ ನಿಯಮವನ್ನು ಬರೆಯಿರಿ.
ಉತ್ತರ:- "ಧಾತುಗಳ ಗುಣಲಕ್ಷಣಗಳು ಅವುಗಳ ಪರಮಾಣು ಸಂಖ್ಯೆಯ ಆವರ್ತನೀಯ ಪುನರಾವರ್ತನೆಗಳು".
ಉತ್ತರ:- ಆಧುನಿಕ ಆವರ್ತಕ ಕೋಷ್ಟಕದಲ್ಲಿ 7 ಆವರ್ತಗಳು ಮತ್ತು 18 ವರ್ಗಗಳು/ಗುಂಪುಗಳು ಕಂಡುಬರುತ್ತವೆ?
Comments
Post a Comment