ಸರ್ಕಾರಿ ಪ್ರೌಢಶಾಲೆ ಮಾವಿನಕೆರೆ ಕಾಲೋನಿ ಭದ್ರಾವತಿ
- 577 245
ದಿನಾಂಕ:07/05/2021
ಅಧ್ಯಾಯ:- ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ಒಟ್ಟು ಅಂಕಗಳು: 20
1. P, Q, R, S ಎಂಬ ನಾಲ್ಕು ದ್ರಾವಣಗಳ pH ಮೌಲ್ಯಗಳು ಕ್ರಮವಾಗಿ
11.0, 3.8, 2.8 ಮತ್ತು 8.9 ಆಗಿವೆ. ಈ ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ಹೈಡ್ರೋಜನ್ ಅಯಾನು ಸಾರತೆಯನ್ನು ಹೊಂದಿರುವ ದ್ರಾವಣ.
1
ಅ)
R ಬ)
P ಕ)
Q ಡ)S
2. ಟೊಮ್ಯಾಟೋ ಹಣ್ಣಿನಲ್ಲಿರುವ ಆಮ್ಲ 1
ಅ) ಆಕ್ಸಾಲಿಕ್ ಆಮ್ಲ ಬ) ಮೆಥನಾಯಿಕ್ ಆಮ್ಲ
ಕ) ಅಸಿಟಿಕ್ ಆಮ್ಲ
ಡ)
ಲ್ಯಾಕ್ಟಿಕ್ ಆಮ್ಲ
3. ತಟಸ್ಥೀಕರಣ ಕ್ರಿಯೆ ಎಂದರೇನು?
1
4. ದುರ್ಬಲ ಆಮ್ಲ ಎಂದರೇನು? 1
5. ಶುಷ್ಕ HCl ಅನಿಲ ಶುಷ್ಕ ಲಿಟ್ಮಸ್ ಕಾಗದದ ಬಣ್ಣವನ್ನು ಏಕೆ
ಬದಲಾಯಿಸುವುದಿಲ್ಲ? 1
6. ಹಲ್ಲಿನ ಸವಕಳಿಗೆ ಕಾರಣವೇನು? ಅದನ್ನು ಹೇಗೆ ತಡೆಗಟ್ಟಬಹುದು? 2
7. ಆಮ್ಲವನ್ನು ಸಾರರಿಕ್ತಗೊಳಿಸುವಾಗ ನೀರನ್ನು ಆಮ್ಲಕ್ಕೆ ಸೇರಿಸಬಾರದು.
ಏಕೆ? 2
8 ನೀರಿನಲ್ಲಿ ಆಮ್ಲೀಯ ದ್ರಾವಣ ವಿದ್ಯುತ್ತನ್ನು ಪ್ರವಹಿಸುತ್ತದೆ
ಎಂಬುದನ್ನು ತೋರಿಸಲು ಉಪಯೋಗಿಸುವ ಉಪಕರಣದ ಚಿತ್ರವನ್ನು ಬರೆದು ಭಾಗಗಳನ್ನು ಗುರುತಿಸಿ. 2
9. ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ ಯಾವುದು? ಅದರ ಕಾರ್ಯವೇನು? ಅತಿ ಹೆಚ್ಚು ಆಮ್ಲ ಬಿಡುಗಡೆಯಾದಾಗ ಯಾವ ಪರಿಣಾಮಗಳುಂಟಾಗುತ್ತವೆ?
ಈ ಪರಿಸ್ಥಿತಿಗೆ ಪರಿಹಾರವನ್ನುಸೂಚಿಸಿ. 3
10. ಒಂದು ಆಮ್ಲವು ಲೋಹದ ಕಾರ್ಬೋನೇಟ್ ನೊಂದಿಗೆ ವರ್ತಿಸಿದಾಗ
ಬಿಡುಗಡೆಯಾಗುವ ಅನಿಲ ವನ್ನು ಹೆಸರಿಸಿ. ಈ ಅನಿಲವನ್ನು ಸುಣ್ಣದ ತಿಳಿ ನೀರಿನ ಮೂಲಕ ಹಾಯಿಸಿದಾಗ ಬಿಳಿ
ಪ್ರಕ್ಷೇಪ ಉಂಟಾಗುತ್ತದೆ. ಇಲ್ಲಿ ನಡೆದ ರಾಸಾಯನಿಕ ಕ್ರಿಯೆಯ ಸಮೀಕರಣ ಬರೆಯಿರಿ. ಈ ಅನಿಲವನ್ನು ಅಧಿಕ
ಪ್ರಮಾಣದಲ್ಲಿ ಸುಣ್ಣದ ತಿಳಿ ನೀರಿನ ಮೂಲಕ ಹಾಯಿಸಿದರೆ ಪ್ರಕ್ಷೇಪ ಉಂಟಾಗುವುದಿಲ್ಲ. ಏಕೆ? 3
11. ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದೊಂದಿಗೆ ಸತುವಿನ ಚೂರುಗಳ
ವರ್ತನೆ ಮತ್ತು ಉರಿಸುವಿಕೆಯ ಮೂಲಕ ಹೈಡ್ರೋಜನ್ ಅನಿಲದ ಪರೀಕ್ಷೆ ಮಾಡುವ ಉಪಕರಣಗಳ ಜೋಡಣೆಯ ಚಿತ್ರ
ಬರೆದು
ಅ) ಹೈಡ್ರೋಜನ್ ತುಂಬಿದ ಸಾಬೂನಿನ ಗುಳ್ಳೆ ಆ)
ಸತುವಿನ ಚೂರುಗಳನ್ನು ಗುರುತಿಸಿ. 3
Comments
Post a Comment