ನಮ್ಮ ಪರಿಸರ ಹತ್ತನೇ ತರಗತಿ
1.ಪರಿಸರ ಎಂದರೇನು?
ನಮ್ಮ ಸುತ್ತಮುತ್ತಲಿನ ಎಲ್ಲ ವಸ್ತುಗಳು, ಜೀವಿಗಳು ಮತ್ತು ಪ್ರಾಕೃತಿಕ ಅಂಶಗಳನ್ನು ಒಟ್ಟಾಗಿ ಪರಿಸರ ಎಂದು ಕರೆಯುತ್ತಾರೆ.
2. ಪರಿಸರ ವ್ಯವಸ್ಥೆ ಎಂದರೇನು?
ಪ್ರಕೃತಿಯಲ್ಲಿನ ಎಲ್ಲಾ ಜೈವಿಕ (ಸಜೀವ) ಮತ್ತು ಅಜೈವಿಕ (ನಿಷ್ಕ್ರಿಯ) ಘಟಕಗಳು ಮತ್ತು ಅವುಗಳ ಪರಸ್ಪರ ಸಂಬಂಧಗಳ ಒಂದು ವ್ಯವಸ್ಥೆಯೇ ಪರಿಸರ ವ್ಯವಸ್ಥೆ.
3. ಪರಿಸರ ವ್ಯವಸ್ಥೆಯಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು? ಅವುಗಳಿಗೆ ಉದಾಹರಣೆ ಕೊಡಿ.
ಪರಿಸರ ವ್ಯವಸ್ಥೆಯನ್ನು ಮುಖ್ಯವಾಗಿ 2 ವಿಧಗಳಾಗಿ ವಿಂಗಡಿಸಲಾಗಿದೆ:
1. ನೈಸರ್ಗಿಕ ಪರಿಸರ ವ್ಯವಸ್ಥೆ: ಉದಾಹರಣೆ:-
1.ಅರಣ್ಯಗಳು
2.ಸರೋವರಗಳು
3.ಕೊಳಗಳು
2. ಕೃತಕ ಪರಿಸರ ವ್ಯವಸ್ಥೆ:
1.ಉದ್ಯಾನ
2.ಪೈರು ಗದ್ದೆಗಳು
3.ಅಕ್ವೇರಿಯಂ.
4. ಪರಿಸರದಲ್ಲಿ ಜೀವಿಗಳು ಮತ್ತು ನಿರ್ಜೀವ ಅಂಶಗಳು ಪರಸ್ಪರ ತೊಡಗಿಕೊಂಡು ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಈ ಸಂಬಂಧವನ್ನು ವಿವರಿಸುವುದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ:-
1. ಸಸ್ಯಗಳು ಮತ್ತು ಸೂರ್ಯನ ಬೆಳಕು: ಸಸ್ಯಗಳು ಸೂರ್ಯನ ಬೆಳಕನ್ನು ಬಳಸಿಕೊಂಡು ಆಹಾರ (ಜೀವಸತ್ವ) ತಯಾರಿಸುತ್ತವೆ ಹಾಗಾಗಿ ಆಟೋಟ್ರೋಫ್ಸ್ ಎಂದು ಕರೆಸಿಕೊಳ್ಳುತ್ತವೆ ಈ ಪ್ರಕ್ರಿಯೆಯನ್ನು ದ್ಯುತಿ ಸಂಶ್ಲೇಷಣೆ ಅಥವಾ ಪೋಟೋಸಿಂಥಿಸಿಸ್ ಎಂದು ಕರೆಯಲಾಗುತ್ತದೆ. ಈ ಆಹಾರ ಸಸ್ಯಗಳನ್ನು ಆಹಾರವಾಗಿ ಬಳಸುವ ಪ್ರಾಣಿಗಳಿಗೆ (ಹರ್ಬಿವೋರ್ಸ್) ಎನ್ನುವರು ಮುಖ್ಯ ಆಹಾರವಾಗುತ್ತದೆ.
2. ಪ್ರಾಣಿಗಳು ಮತ್ತು ಆಮ್ಲಜನಕ: ಪ್ರಾಣಿಗಳು ಉಸಿರಾಟಕ್ಕೆ ಸಸ್ಯಗಳಿಂದ ಬಿಡುಗಡೆಗೊಂಡ ಆಮ್ಲಜನಕವನ್ನು ಬಳಸುತ್ತವೆ. ಸಸ್ಯಗಳು ಕೂಡ ಪ್ರಾಣಿಗಳ ಉಸಿರಾಟದಿಂದ ಬಿಡುಗಡೆಗೊಳ್ಳುವ ಕಾರ್ಬನ್ ಡೈಆಕ್ಸೈಡ್ ಅನ್ನು ಆಹಾರ ತಯಾರಿಕೆಗೆ ಬಳಸುತ್ತವೆ. ಇದರಿಂದ ಸಸ್ಯ ಮತ್ತು ಪ್ರಾಣಿಗಳ ನಡುವೆ ಕಾರ್ಬನ್ ಡೈಆಕ್ಸೈಡ್ ಹಾಗೂ ಆಮ್ಲಜನಕದ ವಿನಿಮಯ ಪ್ರಕ್ರಿಯೆ ಸಮತೋಲನದಲ್ಲಿರುತ್ತದೆ.
3. ಮಣ್ಣಿನ ಪೋಷಕಾಂಶಗಳು: ಸಸ್ಯಗಳು ಬೆಳೆಯಲು ಮಣ್ಣು ಮತ್ತು ಅದರಲ್ಲಿ ಇರುವ ಪೋಷಕಾಂಶಗಳನ್ನು ಅವಲಂಬಿಸುತ್ತವೆ. ಸಸ್ಯಗಳು ಸಾಯುವಾಗ ಅಥವಾ ಪ್ರಾಣಿಗಳು ಸಾಯುವಾಗ ಅವುಗಳ ದೇಹಗಳು ಕೊಳೆಯುವಿಕೆ ಅಥವಾ ಜೈವಿಕ ವಿಘಟನೆಯ ಮೂಲಕ ಸಸ್ಯಾಂಶ, ಸತ್ತ ಪ್ರಾಣಿಯ ದೇಹದಿಂದ ಪೋಷಕಾಂಶಗಳನ್ನು ಮಣ್ಣಿಗೆ ನೀಡುತ್ತವೆ. ಈ ಮಣ್ಣು ಆಮೇಲೆ ಮತ್ತೊಮ್ಮೆ ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ.
4. ಒಂದು ಪರಿಸರ ವ್ಯವಸ್ಥೆಯಲ್ಲಿ ಜೀವಿಗಳು ಮತ್ತು ನಿರ್ಜೀವಿಗಳು ಪರಸ್ಪರ ಕಾರ್ಯ ನಿರ್ವಹಿಸುತ್ತಿರುತ್ತವೆ. ಇದು ಸರಿಯೇ?
ಹೌದು, ಇದು ಸರಿಯಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಜೀವಿಗಳು ಮತ್ತು ನಿರ್ಜೀವಿಗಳು ಪರಸ್ಪರ ಕಾರ್ಯ ನಿರ್ವಹಿಸುತ್ತವೆ.
ಜೀವಿಗಳು (ಪಶು-ಪಕ್ಷಿಗಳು, ಸಸ್ಯಗಳು, ಮಾನವರು) ನಿರ್ಜೀವ ಅಂಶಗಳಾದ ನೀರು, ಮಣ್ಣು, ಗಾಳಿ, ಬೆಳಕು ಮುಂತಾದವುಗಳೊಂದಿಗೆ ಸಂವಹನದಲ್ಲಿರುತ್ತವೆ. ಇವುಗಳ ನಡುವೆ ಪರಸ್ಪರ ಸಂಬಂಧ, ಬದಲಾವಣೆ ಮತ್ತು ಆದಾನ ಪ್ರಕ್ರಿಯೆಗಳು ನಡೆಯುತ್ತವೆ, ಇದರಿಂದ ಪರಿಸರದ ಸಮತೋಲನ ಕಾಪಾಡಲ್ಪಡುತ್ತದೆ.
ನೀರು: ನೀರು ಎಲ್ಲ ಜೀವಿಗಳಿಗೆ ಅಗತ್ಯ. ಸಸ್ಯಗಳು ಮಣ್ಣಿನಿಂದ ನೀರನ್ನು ಹೀರುತ್ತವೆ, ಪ್ರಾಣಿಗಳು ನೇರವಾಗಿ ಅಥವಾ ಸಸ್ಯಗಳ ಮೂಲಕ ನೀರನ್ನು ಸ್ವೀಕರಿಸುತ್ತವೆ. ನೀರು ಪರಿಸರದಲ್ಲಿ ನದಿ, ತಟಗಳು, ಸಮುದ್ರ, ನದೀ ತೀರಗಳಲ್ಲಿ ಸಂಚರಿಸುತ್ತಿದ್ದು, ಬಾಷ್ಪೀಭವನದಿಂದ ಮೋಡವಾಯಿತು ಮತ್ತೆ ಮಳೆಯಾಗಿ ನೆಲಕ್ಕೆ ಬಿದ್ದು ಪರಿಸರದ ಜಲ ಚಕ್ರವನ್ನು ನಿರ್ವಹಿಸುತ್ತದೆ.
ಈ ಎಲ್ಲ ಅಂಶಗಳು ಪರಸ್ಪರ ನಿರೀಕ್ಷಿತವಾಗಿ ಬದಲಾವಣೆಗೊಳ್ಳುತ್ತವೆ ಮತ್ತು ಒಟ್ಟಾಗಿ ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡುತ್ತವೆ.
5. ಉತ್ಪಾದಕಗಳು ಎಂದರೇನು?
ದ್ಯುತಿ ಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರವನ್ನು ತಯಾರಿಸುವ ಎಲ್ಲಾ ಹಸಿರು ಸಸ್ಯಗಳು, ಶೈವಲಗಳು ಮತ್ತು ಕೆಲವು ಬ್ಯಾಕ್ಟೀರಿಯಾಗಳು ಉತ್ಪಾದಕಗಳು.
6. ಭಕ್ಷಕರು ಎಂದರೇನು? ಉತ್ಪಾದಕರು ಉತ್ಪಾದಿಸಿದ ಆಹಾರವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಭಕ್ಷಿಸುವ ಜೀವಿಗಳು.
7. ಉತ್ಪಾದಕರನ್ನು ಪರೋಕ್ಷವಾಗಿ ಭಕ್ಷಿಸುವುದು ಪರೋಕ್ಷವಾಗಿ ಭಕ್ಷಿಸುವುದು ಎಂದರೇನು?
ಉತ್ಪಾದಕರನ್ನು ಭಕ್ಷಿಸುವ ಸಸ್ಯಾಹಾರಿಗಳನ್ನು ಮಾಂಸಾಹಾರಿಗಳು ಭಕ್ಷಿಸುವುದನ್ನು ಪರೋಕ್ಷವಾಗಿ ಭಕ್ಷಿಸುವುದು ಎನ್ನುವರು.
8. ವಿಘಟಕಗಳು ಎಂದರೇನು? ಸಂಕೀರ್ಣ ಸಾವಯವ ಪದಾರ್ಥಗಳನ್ನು ಸರಳ ನಿರವಯವ ಪದಾರ್ಥಗಳನ್ನಾಗಿ ವಿಘಟಿಸುವ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳನ್ನು ಒಳಗೊಂಡ ಸೂಕ್ಷ್ಮಜೀವಿಗಳನ್ನು ವಿಘಟಕಗಳು ಎನ್ನುವರು.
9. ವಿಘಟಕಗಳಿಗೆ ಉದಾಹರಣೆ ಕೊಡಿ.
ಬ್ಯಾಕ್ಟೀರಿಯಾ ಮತ್ತು ಫಂಗೈ ಅಥವಾ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು.
10. ಆಹಾರ ಸರಪಳಿ ಎಂದರೇನು?
ಜೀವಿಗಳು ಆಹಾರಕ್ಕಾಗಿ ಒಂದನ್ನೊಂದು ಅವಲಂಬಿಸಿರುವುದರಿಂದ ಅವುಗಳ ನಡುವೆ ಏರ್ಪಡುವ ಸಂಬಂಧವೇ ಆಹಾರ ಸರಪಳಿ.
11. ಒಂದು ಸರಳ ಆಹಾರ ಸರಪಳಿಗೆ ಉದಾಹರಣೆ ಕೊಡಿ. ಉದಾಹರಣೆ: ಹುಲ್ಲು-> ಮಿಡತೆ -> ಕಪ್ಪೆ ಹಾವು ಹದ್ದು
12. ಪೋಷಣಾಸ್ತರ ಎಂದರೇನು? ಆಹಾರ ಸರಪಳಿಯ ಪ್ರತಿಯೊಂದು ಹಂತವನ್ನು ಪೋಷಣಾಸ್ತರ ಎನ್ನುವರು.
Comments
Post a Comment