SCIENCE NOTES, KANNADA MEDIUM, II LESSON, 9TH STANDARD.

                                     

👋


ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ?


1.ಸಾಮಾನ್ಯ ಮನುಷ್ಯನಿಗೆ 'ಶುದ್ಧಎಂಬ ಪದದ ಅರ್ಥವೇನು?

                       ಕಲಬೆರಕೆ ಇಲ್ಲದಿರುವುದು.

2. ವೈಜ್ಞಾನಿಕವಾಗಿ ಹಾಲು ಶುದ್ಧ ವಸ್ತುವಲ್ಲಕಾರಣ ಕೊಡಿ

ಹಾಲು ವಾಸ್ತವವಾಗಿ ನೀರು, ಕೊಬ್ಬು, ಪ್ರೊಟೀನ್ ಮುಂತಾದವುಗಳ ಮಿಶ್ರಣ. ಆದ್ದರಿಂದ ಹಾಲು ವೈಜ್ಞಾನಿಕ ದೃಷ್ಟಿಯಿಂದ ಶುದ್ಧ ವಸ್ತುವಲ್ಲ.

3.ವೈಜ್ಞಾನಿಕವಾಗಿ ಶುದ್ಧ ವಸ್ತು ಎಂದರೇನು?

ಯಾವುದೇ ವಸ್ತುವಿನಲ್ಲಿರುವ ಘಟಕಾಂಶಗಳು ಒಂದೇ ರೀತಿಯ ರಾಸಾಯನಿಕ ಸ್ವಭಾವವನ್ನು ಹೊಂದಿದ್ದರೆ ಅಂತಹ ವಸ್ತುವನ್ನು ವೈಜ್ಞಾನಿಕವಾಗಿ ಶುದ್ಧ ವಸ್ತು ಎನ್ನುವರು. ಶುದ್ಧ ವಸ್ತು ಒಂದೇ ರೀತಿಯ ಕಣಗಳನ್ನು ಹೊಂದಿರುತ್ತದೆ. ಶುದ್ಧ ವಸ್ತುವು ದ್ರವ್ಯದ ಶುದ್ಧ ರೂಪವಾಗಿದೆ.

4.ಮಿಶ್ರಣಗಳು ಎಂದರೇನು?

ಒಂದಕ್ಕಿಂತ ಹೆಚ್ಚು ಶುದ್ಧ ರೂಪದ ವಸ್ತು ಎನ್ನಲಾಗುವ ದ್ರವ್ಯದಿಂದ ಮಾಡಲ್ಪಟ್ಟಿರುವ ವಸ್ತುಗಳನ್ನು ಮಿಶ್ರಣಗಳು ಎನ್ನುವರು.

 

5.ಮಿಶ್ರಣಗಳಿಗೆ ಉದಾಹರಣೆ ಕೊಡಿ.

ಸಮುದ್ರದ ನೀರು, ಖನಿಜಗಳು, ಮಣ್ಣು ಇತ್ಯಾದಿ.

 

6.ಸೋಡಿಯಂ ಕ್ಲೋರೈಡ್ ಅನ್ನು ನೀರಿನಿಂದ ಬೇರ್ಪಡಿಸಲು ಅಳವಡಿಸಿಕೊಳ್ಳುವ ಭೌತ ಪ್ರಕ್ರಿಯೆಯನ್ನು ಹೆಸರಿಸಿ.

ಆವೀಕರಣ

 

7.ಒಂದೇ ರೀತಿಯ ಶುದ್ಧ ದ್ರವ್ಯವನ್ನು ಹೊಂದಿರುವ ವಸ್ತುವಿಗೆ ಒಂದು ಉದಾಹರಣೆ ಕೊಡಿ.

ಸಕ್ಕರೆ - ಇದರ ಸಂಯೋಜನೆಯು  ವಸ್ತುವಿನಲ್ಲಿ ಎಲ್ಲೆಡೆಯೂ ಒಂದೇ ಆಗಿರುತ್ತದೆ

*ಮಿಶ್ರಣ-- ಒಂದಕ್ಕಿಂತ ಹೆಚ್ಚು ವಸ್ತುಗಳನ್ನು ಹೊಂದಿದೆ.

 

8.ದ್ರಾವಣ ಎಂದರೇನು

ಎರಡು ಅಥವಾ ಎರಡಕ್ಕಿಂತ ಹೆಚ್ಚು ವಸ್ತುಗಳ ಸಮರೂಪ ಮಿಶ್ರಣವೇ ದ್ರಾವಣ.

             or

 ಎರಡು ಅಥವಾ ಹೆಚ್ಚು ವಸ್ತುಗಳ ಸಮರೂಪ ಮಿಶ್ರಣವೇ ದ್ರಾವಣ.

 

9.ದ್ರಾವಣಗಳಿಗೆ ಉದಾಹರಣೆ ಕೊಡಿ

ಲಿಮೋನೆಡ್, ಸೋಡಾ ನೀರು

 

10.ದ್ರವರೂಪದ ದ್ರಾವಣಗಳಿಗೆ ಉದಾಹರಣೆ ಕೊಡಿ.

ಲಿಮೋನೇಡ್, ಸೋಡಾ ನೀರು.

 

11.ಘನರೂಪದ ದ್ರಾವಣಗಳಿಗೆ ಉದಾಹರಣೆ ಕೊಡಿ.

ಮಿಶ್ರಲೋಹಗಳು

 

12ಅನಿಲರೂಪದ ದ್ರಾವಣಗಳಿಗೆ ಉದಾಹರಣೆ ಕೊಡಿ.

ಗಾಳಿ

 

13ಮಿಶ್ರಲೋಹಗಳು ಎಂದರೇನು

ಎರಡು ಅಥವಾ ಹೆಚ್ಚು ಲೋಹ ಅಥವಾ ಲೋಹ ಮತ್ತು ಅಲೋಹಗಳ ಮಿಶ್ರಣವನ್ನು ಮಿಶ್ರಲೋಹಗಳು ಎನ್ನುವರು.

 

*****(ಮಿಶ್ರಲೋಹಗಳ ಘಟಕಾಂಶಗಳನ್ನು ಭೌತವಿಧಾನದಲ್ಲಿ ಬೇರ್ಪಡಿಸಲಾಗುವುದಿಲ್ಲ.)******

 

14.ಮಿಶ್ರಲೋಹಕ್ಕೊಂದು ಉದಾಹರಣೆ ಕೊಡಿ.

ಹಿತ್ತಾಳೆ

 

15.ಹಿತ್ತಾಳೆಯಲ್ಲಿರುವ ಘಟಕಾಂಶಗಳನ್ನು ಶೇಕಡಾವಾರು ಪ್ರಮಾಣದೊಂದಿಗೆ ಹೆಸರಿಸಿ.

30% ಸತು ಮತ್ತು 70% ತಾಮ್ರ

 

16.ದ್ರಾವಣದ ಘಟಕಾಂಶಗಳನ್ನು ಹೆಸರಿಸಿ.

ದ್ರಾವಕ ಮತ್ತು ದ್ರಾವ್ಯ

 

17.ದ್ರಾವಕ ಎಂದರೇನು

ತನ್ನಲ್ಲಿ  ಇತರ ಘಟಕಾಂಶಗಳನ್ನು ಕರಗಿಸಿಕೊಳ್ಳುವ ದ್ರಾವಣದ ಪ್ರಧಾನ ಘಟಕಾಂಶವನ್ನು ದ್ರಾವಕ ಎನ್ನುತ್ತಾರೆ. (ಸಾಮಾನ್ಯವಾಗಿ ದ್ರಾವಕದ ಪ್ರಮಾಣ ದ್ರಾವಣದಲ್ಲಿ ಹೆಚ್ಚಿರುತ್ತದೆ)

 

 

18.ದ್ರಾವ್ಯ ಎಂದರೇನು

ದ್ರಾವಕದಲ್ಲಿ ಕರಗುವ ದ್ರಾವಣದ ಘಟಕಾಂಶವನ್ನು ದ್ರಾವ್ಯ ಎನ್ನುತ್ತಾರೆ. (ಸಾಮಾನ್ಯವಾಗಿ ದ್ರಾವ್ಯದ ಪ್ರಮಾಣ ದ್ರಾವಣದಲ್ಲಿ ಕಡಿಮೆ ಇರುತ್ತದೆ)

 

19.ದ್ರವದಲ್ಲಿರುವ ಘನದ ದ್ರಾವಣಕ್ಕೆ ಉದಾಹರಣೆ ಕೊಡಿ.

ನೀರಿನಲ್ಲಿನ ಸಕ್ಕರೆಯ ದ್ರಾವಣ

20.ನೀರಿನಲ್ಲಿನ ಸಕ್ಕರೆಯ ದ್ರಾವಣದಲ್ಲಿನ ದ್ರಾವಕ ಮತ್ತು ದ್ರಾವ್ಯವನ್ನು ಹೆಸರಿಸಿ.

ದ್ರಾವಕ- ನೀರು, ದ್ರಾವ್ಯ- ಸಕ್ಕರೆ.

 

21.ಆಲ್ಕೋಹಾಲ್ ನಲ್ಲಿರುವ ಅಯೋಡಿನ್ ದ್ರಾವಣವನ್ನು ಏನೆನ್ನುತ್ತಾರೆ?

ಆಲ್ಕೋಹಾಲ್ ನಲ್ಲಿರುವ ಅಯೋಡಿನ್ ದ್ರಾವಣವನ್ನು ಟಿಂಚರ್ ಆಫ್ ಅಯೋಡಿನ್ ಎಂದು ಕರೆಯುತ್ತಾರೆ.

 

22.ಟಿಂಚರ್ ಆಫ್ ಅಯೋಡಿನ್ ನಲ್ಲಿರುವ ದ್ರಾವ್ಯ ಮತ್ತು ದ್ರಾವಕವನ್ನು ಹೆಸರಿಸಿ.

 

ದ್ರಾವಕ-ಆಲ್ಕೋಹಾಲ್ (ದ್ರವ)

ದ್ರವ್ಯ-ಅಯೋಡಿನ್ (ಘನ).

 

23.ದ್ರವದಲ್ಲಿರುವ ಅನಿಲ ದ್ರಾವಣಕ್ಕೆ ಉದಾಹರಣೆ ಕೊಡಿ.

ಸೋಡಾ ನೀರು.

 

24.ಸೋಡಾ ನೀರಿನಲ್ಲಿರುವ ದ್ರಾವಕ ಮತ್ತು ದ್ರಾವ್ಯವನ್ನು ಹೆಸರಿಸಿ.

ದ್ರಾವಕ-ನೀರು (ದ್ರವ)

ದ್ರಾವ್ಯ-ಕಾರ್ಬನ್ ಡೈಯಾಕ್ಸೈಡ್ (ಅನಿಲ)

 

25.ಅನಿಲದಲ್ಲಿ ಅನಿಲದ ಮಿಶ್ರಣಕ್ಕೆ ಉದಾಹರಣೆ ಕೊಡಿ.

ವಾಯು (ವಾಯು ಹಲವು ಅನಿಲಗಳ ಸಮರೂಪದ ಮಿಶ್ರಣ)

 

26.ವಾಯುವಿನಲ್ಲಿರುವ ಎರಡು ಪ್ರಮುಖ ಘಟಕಾಂಶಗಳನ್ನು ಹೆಸರಿಸಿ.

ಆಕ್ಸಿಜನ್ (21%) ಮತ್ತು ನೈಟ್ರೋಜನ್ (78%)

 

27. ದ್ರಾವಣದ ಗುಣಗಳನ್ನು ಪಟ್ಟಿ ಮಾಡಿ.

ದ್ರಾವಣವು ಸಮರೂಪ ಮಿಶ್ರಣವಾಗಿದೆ ದ್ರಾವಣದಲ್ಲಿರುವ ಕಣಗಳ ವ್ಯಾಸವು ಒಂದು ನ್ಯಾನೋಮೀಟರ್ ಗಿಂತ ಕಡಿಮೆ ಇರುತ್ತದೆ ಆದುದರಿಂದ ಇವು ಬರಿಗಣ್ಣಿಗೆ ಕಾಣಿಸುವುದಿಲ್ಲ.

ದ್ರಾವಣದ ಕಣಗಳ ಗಾತ್ರವು ಬಹಳ ಸಣ್ಣದಾಗಿರುವುದರಿಂದ  ತನ್ನಲ್ಲಿ ಹಾದುಹೋಗುವ ಬೆಳಕಿನ ಕಿರಣವನ್ನು ಚದುರಿಸುವುದಿಲ್ಲ.  ಆದುದರಿಂದ, ಬೆಳಕಿನ ಪಥವು ದ್ರಾವಣದಲ್ಲಿ ಕಂಡುಬರುವುದಿಲ್ಲ.

ಸೋಸುವಿಕೆ ವಿಧಾನದಿಂದ ದ್ರಾವಣ ದಲ್ಲಿರುವ ದ್ರಾವ್ಯ ಕಣಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ದ್ರಾವಣವನ್ನು ಅಲುಗಾಡಿಸದಿದ್ದರೂ ದ್ರಾವ್ಯ ಕಣಗಳು ತಳ ಸೇರುವುದಿಲ್ಲ. ಅಂದರೆ ದ್ರಾವಣವು ಸ್ಥಿರವಾಗಿದೆ.  1nm (10-9m)

 

 

 

 

Comments

Post a Comment

Popular posts from this blog

Chemistry definition

ನಮ್ಮ ಪರಿಸರ ಹತ್ತನೇ ತರಗತಿ