10ತರಗತಿಯ ಪ್ರಶ್ನೆ ಪತ್ರಿಕೆ, ಮೊದಲನೇ ರೂಪಣಾತ್ಮಕ ಮೌಲ್ಯಮಾಪನ

 

ಮೊದಲನೇ ರೂಪನಾತ್ಮಕ  ಪರೀಕ್ಷೆ

ವಿಷಯ ವಿಜ್ಞಾನ

ತರಗತಿ 10ನೇ ತರಗತಿ           ಒಟ್ಟು ಅಂಕಗಳು 20

 

 

I ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.                                                             3X1=3

 

1. Fe2O3+ 2Al à Al2O3+2Fe ಈ ಕ್ರಿಯೆಯು ಯಾವ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ?

 

ಎ. ಸಂಯೋಗ ಕ್ರಿಯೆ                                ಬಿ.ವಿಭಜನ ಕ್ರಿಯೆ             ಸಿ. ಸ್ಥಾನಪಲ್ಲಟ ಕ್ರಿಯೆ                        ಡಿ. ದ್ವಿಸ್ಥಾನಪಲ್ಲಟ ಕ್ರಿಯೆ

2. ಯಾವ ರಾಸಾಯನಿಕಗಳ ತಯಾರಿಕೆಯಲ್ಲಿ ಸಾಮಾನ್ಯ ಉಪ್ಪನ್ನು ಬಳಸುವರು?

a. ವಾಷಿಂಗ್‌ ಸೋಡಾ                               b. ಅಡಿಗೆ ಸೋಡಾ              c. ಚೆಲುವೆ ಪುಡಿ               d. ಅರಳಿದ ಸುಣ್ಣ

 

 

3. ಅವಾಯುವಿಕ ಉಸಿರಾಟದ ಉತ್ಪನ್ನಗಳು_______________

ಎ. ಕಾರ್ಬನ್ ಡೈಆಕ್ಸೈಡ್ ಮತ್ತು ನೀರು

ಬಿ. ಎಥನಾಲ್, ಕಾರ್ಬನ್ ಡೈಯಾಕ್ಸೈಡ್ ಮತ್ತು ಶಕ್ತಿ.

ಸಿ. ಲ್ಯಾಕ್ಟಿಕ್ ಆಮ್ಲ ಮತ್ತು ಶಕ್ತಿ ಡಿ.carbon-dioxide ಮತ್ತು ಶಕ್ತಿ

II ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.                                                                                2X1=2

4. LPG ಯ ದಹನ ಕ್ರಿಯೆ ಒಂದು ಬಹಿರುಷ್ಣಕ ಕ್ರಿಯೆ. ಈ ಹೇಳಿಕೆಯನ್ನು ವೈಜ್ಞಾನಿಕ ಕಾರಣ ದೊಂದಿಗೆ ಸಮರ್ಥಿಸಿ.

5. ಪ್ಲಾಸ್ಟರ್ ಆಫ್ ಪ್ಯಾರೀಸ್ ಅನ್ನು ತೇವಾಂಶ ನಿರೋಧಕ ಸಂಗ್ರಾಹಕದಲ್ಲಿ ಸಂಗ್ರಹಿಸಿಡಬೇಕು ಏಕೆ?

III ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.                          4X2=8

6. ತಾಮ್ರದ ಚೂರುಗಳನ್ನು ಸಾರೀಕೃತ ಸಲ್ಫ್ಯೂರಿಕ್ ಆಮ್ಲದೊಂದಿಗೆ ಕಾಯಿಸಿದಾಗ ತಾಮ್ರದ ಸಲ್ಫೇಟ್, ಸಲ್ಫರ್ ಡೈಆಕ್ಸೈಡ್ ಮತ್ತು ನೀರು ಉಂಟಾಗುತ್ತದೆ.  ಇಲ್ಲಿ ನಡೆದ ರಾಸಾಯನಿಕ ಕ್ರಿಯೆಯ  

1. ಪದ ಸಮೀಕರಣ  2. ಸರಿದೂಗಿಸಿದ ಸಮೀಕರಣ ಬರೆಯಿರಿ.

7. ವಾಷಿಂಗ್ ಸೋಡಾ ಮತ್ತು ಅಡುಗೆ ಸೋಡಾ ಗಳ ಎರಡೆರಡು ಉಪಯೋಗಗಳನ್ನು ಬರೆಯಿರಿ.

8. ಪಚನ ಗ್ರಂಥಿಗಳು ಮತ್ತು ಅವುಗಳ ಕಾರ್ಯದ ಬಗ್ಗೆ ಓದಿದ ವಿದ್ಯಾರ್ಥಿಯೊಬ್ಬನಿಗೆ ಕೆಲವು ಸಂಗತಿಗಳು ಅರ್ಥವಾಗದ ಗೊಂದಲಕ್ಕೆ ಒಳಗಾಗಿದ್ದಾನೆ ಆ ಸಂಗತಿಗೆ ಸಂಬಂಧಿಸಿದಂತೆ ಈ ಕೆಳಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ.

ಎ. ನಾವು ಪ್ರಾಣಿಗಳಂತೆ ಹಸಿರು ಹುಲ್ಲನ್ನು ಸೇವಿಸಿ      ಜೀರ್ಣಿಸಿಕೊಳ್ಳಲು ಏಕೆ ಸಾಧ್ಯವಿಲ್ಲ?

ಬಿ. ಹೈಡ್ರೋಕ್ಲೋರಿಕ್ ಆಮ್ಲ ಒಂದು ಆಮ್ಲ ವಾಗಿದ್ದು ನಮ್ಮ ಆಹಾರದಲ್ಲಿ ಇರಬಹುದಾದ ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತದೆ ಆದರೆ ಅದು ಜಠರದ ಗೋಡೆಗಳಿಗೆ ಯಾವ ಹಾನಿಯನ್ನುಂಟುಮಾಡುವುದಿಲ್ಲ. ಏಕೆ?

9. ರೆಡಾಕ್ಸ್‌ ಕ್ರಿಯೆ ಎಂದರೇನು? ಒಂದು ಉದಾಹರಣೆ. ಕೊಡಿ.

IV. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ                                            1X3=3

10. A,B,C,D ಮತ್ತು E ಈ ಐದು ದ್ರಾವಣಗಳನ್ನು ಸಾರ್ವತ್ರಿಕ ಸೂಚಕದಿಂದ ಪರೀಕ್ಷಿಸಿದಾಗ ಅನುಕ್ರಮವಾಗಿ 7,4,9 ,11, ಮತ್ತು 0 ತೋರಿಸಿವೆ. ಯಾವ ದ್ರಾವಣ ತಟಸ್ಥ? ಪ್ರಬಲವಾಗಿ ಪ್ರತ್ಯಾಮ್ಲೀಯ? ಪ್ರಬಲವಾಗಿ ಆಮ್ಲೀಯ? ದುರ್ಬಲ ಆಮ್ಲೀಯ? ಮತ್ತು ದುರ್ಬಲವಾಗಿ  ಪ್ರತ್ಯಾಮ್ಲೀಯ ? ಎನ್ನುವುದನ್ನು ಹೈಡ್ರೋಜನ್‌ ಅಯಾನ್‌ ಗಳ ಏರಿಕೆ ಕ್ರಮದಲ್ಲಿ ಬರೆಯಿರಿ.

 

V. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

11. ಹೃದಯದ ಅಂದವಾದ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.

 

$$$$$$$$$$$$$$$$$$$



Comments

Popular posts from this blog

Chemistry definition

ನಮ್ಮ ಪರಿಸರ ಹತ್ತನೇ ತರಗತಿ