8 ನೇ ತರಗತಿ,ಅಧ್ಯಾಯ -1 ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ

 WINNERS RULE THE WORLD.

LIKE SCIENCE

 LEARN SCIENCE

LOVE SCIENCE 

1.ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆಯೇ?

ಹೌದು, ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.


2. ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ಹೇಗೆ ತಯಾರಿಸಿಕೊಳ್ಳುತ್ತವೆ?

ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ದ್ಯುತಿಸಂಶ್ಲೇಷಣೆ ಎಂಬ ಪ್ರಕ್ರಿಯೆಯ ಮೂಲಕ ತಯಾರಿಸಿಕೊಳ್ಳುತ್ತವೆ.


3. ನಾವು ಆಹಾರವನ್ನು ಏಕೆ ಸೇವಿಸಬೇಕು?

ನಾವು ಆಹಾರವನ್ನು ಶಕ್ತಿಗಾಗಿ ಸೇವಿಸಬೇಕು.


4. ನಮ್ಮ ದೇಹದಲ್ಲಿನ ವಿವಿಧ ಜೀವ ಕ್ರಿಯೆಗಳನ್ನು ಹೆಸರಿಸಿ.

ಜೀರ್ಣಕ್ರಿಯೆ, ಶ್ವಾಸಕ್ರಿಯೆ, ವಿಸರ್ಜನಾ ಕ್ರಿಯೆ, ಇತ್ಯಾದಿ.


5. ಆಹಾರ ಸೇವನೆಯಿಂದ ದೊರೆಯುವ ಶಕ್ತಿಯನ್ನು ಜೀವಿಗಳು ಯಾವುದಕ್ಕಾಗಿ ಬಳಸಿಕೊಳ್ಳುತ್ತವೆ?

ಆಹಾರ ಸೇವನೆಯಿಂದ ದೊರೆಯುವ ಶಕ್ತಿಯನ್ನು ಜೀವಿಗಳು ಜೀವ ಕ್ರಿಯೆಗಳನ್ನು ನಡೆಸಲು ಬಳಸಿಕೊಳ್ಳುತ್ತವೆ.


6. ನಮ್ಮ ಆಹಾರದ ಆಕರಗಳು ಯಾವುವು?

ನಮ್ಮ ಆಹಾರದ ಆಕರಗಳು ಸಸ್ಯಗಳು ಪ್ರಾಣಿಗಳು ಅಥವಾ ಸಸ್ಯಗಳು ಮತ್ತು ಪ್ರಾಣಿಗಳು.


7. ಪ್ರಸ್ತುತ ನಮ್ಮ ದೇಶದ ಜನಸಂಖ್ಯೆ ಎಷ್ಟು?

1,380,004,385




8. ಅತ್ಯಧಿಕ ಸಂಖ್ಯೆಯಲ್ಲಿರುವ ನಮ್ಮ ದೇಶದ ಜನರಿಗೆ ನಾವು ಆಹಾರವನ್ನು ಒದಗಿಸುವುದು ಹೇಗೆ?


ಆಹಾರವನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸಬೇಕಾಗುತ್ತದೆ.


9 ಹೆಚ್ಚಿನ ಜನ ಸಮೂಹಕ್ಕೆ ಆಹಾರವನ್ನು ಒದಗಿಸಬೇಕಾದರೆ ನಾವು ಏನೇನು ಮಾಡಬೇಕು?

 

ಆಹಾರದ ನಿಯಮಿತ ಉತ್ಪಾದನೆ, 

ಸಮರ್ಪಕ ನಿರ್ವಹಣೆ, ಮತ್ತು

ವಿತರಣೆ


10. ಬೆಳೆ ಎಂದರೇನು?

ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ.


11. ಗೋಧಿಯ ಬೆಳೆ ಎಂದರೇನು?


ಗೋಧಿಯ ಬೆಳೆ ಎಂದರೆ ಒಂದು ಜಮೀನಿನಲ್ಲಿ ಬೆಳೆಯುವ ಎಲ್ಲಾ ಸಸ್ಯಗಳು ಗೋಧಿಯ ಸಸ್ಯಗಳು ಎಂದರ್ಥ.


12. ಬೆಳೆಗಳ ವಿಭಿನ್ನ ವಿಧಗಳನ್ನು ಹೆಸರಿಸಿ.

ಧಾನ್ಯಗಳು ತರಕಾರಿಗಳು ಹಣ್ಣುಗಳು.



13. ಭಾರತ ಒಂದು ವಿಶಾಲವಾದ ದೇಶವಾಗಿದ್ದು ಕೆಲವು ಹವಾಮಾನ ಪರಿಸ್ಥಿತಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತವೆ ಅಂತಹ ಬದಲಾಗುವ ಹವಾಮಾನ ಪರಿಸ್ಥಿತಿಗಳನ್ನು ಹೆಸರಿಸಿ.


ಉಷ್ಣಾಂಶ ತೇವಾಂಶ ಮತ್ತು ಮಳೆಯ ಪ್ರಮಾಣ.


14. ಭಾರತ ದೇಶದಲ್ಲಿ ಕಂಡುಬರುವ ಎರಡು ರೀತಿಯ ಬೆಳೆಗಳನ್ನು ಹೆಸರಿಸಿ.


ಭಾರತ ದೇಶದಲ್ಲಿ ಕಂಡು ಬರುವ ಎರಡು ರೀತಿಯ ಬೆಳೆಗಳು ಯಾವುವೆಂದರೆ ಒಂದು ಖಾರಿಫ್ ಬೆಳೆಗಳು. 

ಎರಡನೆಯದು ರಬಿ ಬೆಳೆಗಳು.


15. ಖಾರಿಫ್ ಬೆಳೆಗಳು ಎಂದರೇನು?

ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆಗಳಿಗೆ ಖಾರಿಫ್ ಬೆಳೆಗಳು ಎನ್ನುವರು.


16. ಭಾರತ ದೇಶದಲ್ಲಿ ಮಳೆಗಾಲವು ಸಾಮಾನ್ಯವಾಗಿ ಯಾವ ಅವಧಿಯಲ್ಲಿ ಕಂಡುಬರುತ್ತದೆ?

ಭಾರತ ದೇಶದಲ್ಲಿ ಮಳೆಗಾಲವು ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಕಂಡುಬರುತ್ತದೆ.


17. ಖಾರಿಫ್ ಬೆಳೆಗಳಿಗೆ ಉದಾಹರಣೆ ಕೊಡಿ.


ಭತ್ತ ಜೋಳ ಸೋಯಾಬೀನ್ ನೆಲಗಡಲೆ ಹತ್ತಿ ಇತ್ಯಾದಿಗಳು ಖಾರಿಫ್ ಬೆಳೆಗಳು


18 ರಬಿ ಬೆಳೆಗಳು ಎಂದರೇನು?

ಚಳಿಗಾಲದಲ್ಲಿ ಬೆಳೆಯುವ ಬೆಳೆಗಳಿಗೆ ರಬಿ ಬೆಳೆಗಳು ಎನ್ನುವರು.

19 ರಬಿ ಬೆಳೆಗಳ ಕಾಲಾವಧಿಯನ್ನು ತಿಳಿಸಿ.

ರಬಿ ಬೆಳೆಗಳ ಕಾಲಾವಧಿ ಸಾಮಾನ್ಯವಾಗಿ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಇರುತ್ತದೆ. 

 

20. ರಬಿ ಬೆಳೆಗಳಿಗೆ ಉದಾಹರಣೆ ಕೊಡಿ.

ಗೋಧಿ, ಕಡಲೆ, ಸಾಸಿವೆ, ಬಟಾಣಿ, ಅಗಸೆ ರಬಿ ಬೆಳೆಗಳಿಗೆ ಉದಾಹರಣೆಗಳಾಗಿವೆ.




Comments

Popular posts from this blog

Chemistry definition

ನಮ್ಮ ಪರಿಸರ ಹತ್ತನೇ ತರಗತಿ