Posts

Showing posts from January, 2021

8th 1ನೇ ಅಧ್ಯಾಯ

 1.. ಭತ್ತವನ್ನು ಚಳಿಗಾಲದಲ್ಲಿ ಬೆಳೆಯದಿರಲು ಕಾರಣವೇನು? ಭತ್ತದ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು ಆದ್ದರಿಂದ ಇದನ್ನು ಮಳೆಗಾಲದಲ್ಲಿ ಮಾತ್ರ ಬೆಳೆಯಲಾಗುತ್ತದೆ. 2. ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಯಾವುವು? ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಕುರ್ಪಿ, ಕುಡುಗೋಲು ಸಲಿಕೆ, ನೇಗಿಲು ಇತ್ಯಾದಿ. 3. ಬೆಳೆ ಎಂದರೇನು? ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ. 4. ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯ ಇದೆಯೇ? ಹೌದು, ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯವಿದೆ. 5. ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಅಧ್ಯಾಯದಲ್ಲಿ ಬರುವ ಪ್ರಮುಖ ಪದಗಳನ್ನು ಹೆಸರಿಸಿ. ಕೃಷಿ ಪದ್ಧತಿಗಳು, ಪಶುಸಂಗೋಪನೆ ಬೆಳೆ  ರಸಗೊಬ್ಬರಗಳು ಗೋದಾಮುಗಳು  ಕೊಯ್ಲು  ನೀರಾವರಿ  ಖಾರಿಫ್  ಸಾವಯವ ಗೊಬ್ಬರ  ನೇಗಿಲು  ರಬಿ ಬೀಜಗಳು ಸಂಗ್ರಹಾಗಾರ ಬಿತ್ತನೆ  ಸಂಗ್ರಹಣೆ  ಒಕ್ಕಣೆ  ಕಳೆಗಳು  ಕಳೆನಾಶಕ  ತೂರುವಿಕೆ. 6. ಕೃಷಿ ಪದ್ಧತಿಗಳು ಎಂದರೇನು?   ಬೆಳೆಗಳ ಕೃಷಿಯು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ರೈತರು ಕೈಗೊಳ್ಳುವ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ, ಈ ಚಟುವಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ್ಧತಿಗಳು ಎನ್ನುವರು. 7. ಕೃಷಿ ಪದ್ಧತಿಗಳನ್ನು ಪಟ್ಟಿ ಮಾಡಿ. ಮಣ್ಣನ್ನು ಹದಗೊಳಿಸುವಿಕೆ...

ವಿದ್ಯುಚ್ಛಕ್ತಿ

 ವಿದ್ಯುಚ್ಛಕ್ತಿ ಆಧುನಿಕ ಸಮಾಜದಲ್ಲಿ ವಿದ್ಯುಚ್ಛಕ್ತಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಗಳು, ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು ಮತ್ತು ಇನ್ನಿತರ ಸ್ಥಳಗಳಲ್ಲಿ ವಿದ್ಯುಚ್ಛಕ್ತಿ ಬಹು ಅನುಕೂಲಕರವಾದ ಶಕ್ತಿಯ ಒಂದು ರೂಪವಾಗಿದೆ. *** ವಿದ್ಯುಚ್ಛಕ್ತಿಯು ಹೇಗೆ ರೂಪುಗೊಂಡಿದೆ? *** ವಿದ್ಯುನ್ಮಂಡಲದ ಮೂಲಕ ಹರಿಯುವ ವಿದ್ಯುಚ್ಛಕ್ತಿಯನ್ನು ನಿಯಂತ್ರಿಸುವ ಅಂಶಗಳು ಯಾವುವು? *** ವಿದ್ಯುತ್ ಪ್ರವಾಹದ ಉಷ್ಣ ಪರಿಣಾಮ ಗಳು ಮತ್ತು ಅದರ ಅನ್ವಯಗಳು. ಕವನ: ಹರಿಯುವ ನೀರು ನದಿಗಳಲ್ಲಿ ನೀರಿನ ಪ್ರವಾಹವನ್ನು ರೂಪಿಸುತ್ತದೆ.  ಹರಿಯುವ ನೀರು ನದಿಗಳಲ್ಲಿ ನೀರಿನ ಪ್ರವಾಹವನ್ನು ರೂಪಿಸುತ್ತದೆ.  ವ್ಹಾ! ವ್ಹಾ! ವ್ಹಾ! ವ್ಹಾ! ವಿದ್ಯುದಾವೇಶವು ವಾಹಕದ ಮೂಲಕ ಹರಿಯುವಾಗ ವಾಹಕದಲ್ಲಿ ವಿದ್ಯುತ್ ಪ್ರವಾಹವನ್ನು ರೂಪಿಸುತ್ತದೆ. ವಿದ್ಯುದಾವೇಶ ( electric charge) ವಾಹಕ--ಒಂದು ಲೋಹದ ತಂತಿ. (CONDUCTOR) --- A metallic wire. ಟಾರ್ಚ್ ನಲ್ಲಿ ಸೆಲ್ ಗಳನ್ನು (ಶುಷ್ಕಕೋಶ) ಸರಿಯಾದ ಕ್ರಮದಲ್ಲಿ ಇರಿಸಿದಾಗ ಟಾರ್ಚ್ ಬಲ್ಬ್ ಬೆಳಗಲು ಆದೇಶಗಳ ಪ್ರವಾಹಅಥವಾ ವಿದ್ಯುತ್ ಪ್ರವಾಹವನ್ನು ಶುಷ್ಕಕೋಶ ಒದಗಿಸುತ್ತದೆ. ಟಾರ್ಚಿನ ಸ್ವಿಚ್ ಆನ್ ಆಗಿದ್ದಾಗ ಮಾತ್ರ ಟಾರ್ಚ್ ಬೆಳಕನ್ನು ನೀಡುತ್ತದೆ. ***( ಸ್ವಿಚ್, ಕೋಶ ಮತ್ತು ಬಲ್ಬ್ ಗಳು ನಡುವೆ ಸಂಪರ್ಕ ಕೊಂಡಿಯಂತೆ ಕೆಲಸ ಮಾಡುತ್ತದೆ) ***ವಿದ್ಯುತ್ ಮಂಡಲ ಎಂದರೇನು? ವಿದ್ಯುತ್ಪ್ರ...