ವಿದ್ಯುಚ್ಛಕ್ತಿ
ವಿದ್ಯುಚ್ಛಕ್ತಿ
ಆಧುನಿಕ ಸಮಾಜದಲ್ಲಿ ವಿದ್ಯುಚ್ಛಕ್ತಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಗಳು, ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು ಮತ್ತು ಇನ್ನಿತರ ಸ್ಥಳಗಳಲ್ಲಿ ವಿದ್ಯುಚ್ಛಕ್ತಿ ಬಹು ಅನುಕೂಲಕರವಾದ ಶಕ್ತಿಯ ಒಂದು ರೂಪವಾಗಿದೆ.
*** ವಿದ್ಯುಚ್ಛಕ್ತಿಯು ಹೇಗೆ ರೂಪುಗೊಂಡಿದೆ?
*** ವಿದ್ಯುನ್ಮಂಡಲದ ಮೂಲಕ ಹರಿಯುವ ವಿದ್ಯುಚ್ಛಕ್ತಿಯನ್ನು ನಿಯಂತ್ರಿಸುವ ಅಂಶಗಳು ಯಾವುವು?
*** ವಿದ್ಯುತ್ ಪ್ರವಾಹದ ಉಷ್ಣ ಪರಿಣಾಮ ಗಳು ಮತ್ತು ಅದರ ಅನ್ವಯಗಳು.
ಕವನ:
ಹರಿಯುವ ನೀರು ನದಿಗಳಲ್ಲಿ ನೀರಿನ ಪ್ರವಾಹವನ್ನು ರೂಪಿಸುತ್ತದೆ.
ಹರಿಯುವ ನೀರು ನದಿಗಳಲ್ಲಿ ನೀರಿನ ಪ್ರವಾಹವನ್ನು ರೂಪಿಸುತ್ತದೆ.
ವ್ಹಾ! ವ್ಹಾ! ವ್ಹಾ! ವ್ಹಾ!
ವಿದ್ಯುದಾವೇಶವು ವಾಹಕದ ಮೂಲಕ ಹರಿಯುವಾಗ ವಾಹಕದಲ್ಲಿ ವಿದ್ಯುತ್ ಪ್ರವಾಹವನ್ನು ರೂಪಿಸುತ್ತದೆ.
ವಿದ್ಯುದಾವೇಶ ( electric charge)
ವಾಹಕ--ಒಂದು ಲೋಹದ ತಂತಿ. (CONDUCTOR) --- A metallic wire.
ಟಾರ್ಚ್ ನಲ್ಲಿ ಸೆಲ್ ಗಳನ್ನು (ಶುಷ್ಕಕೋಶ) ಸರಿಯಾದ ಕ್ರಮದಲ್ಲಿ ಇರಿಸಿದಾಗ ಟಾರ್ಚ್ ಬಲ್ಬ್ ಬೆಳಗಲು ಆದೇಶಗಳ ಪ್ರವಾಹಅಥವಾ ವಿದ್ಯುತ್ ಪ್ರವಾಹವನ್ನು ಶುಷ್ಕಕೋಶ ಒದಗಿಸುತ್ತದೆ. ಟಾರ್ಚಿನ ಸ್ವಿಚ್ ಆನ್ ಆಗಿದ್ದಾಗ ಮಾತ್ರ ಟಾರ್ಚ್ ಬೆಳಕನ್ನು ನೀಡುತ್ತದೆ. ***( ಸ್ವಿಚ್, ಕೋಶ ಮತ್ತು ಬಲ್ಬ್ ಗಳು ನಡುವೆ ಸಂಪರ್ಕ ಕೊಂಡಿಯಂತೆ ಕೆಲಸ ಮಾಡುತ್ತದೆ)
***ವಿದ್ಯುತ್ ಮಂಡಲ ಎಂದರೇನು?
ವಿದ್ಯುತ್ಪ್ರವಾಹದ ನಿರಂತರ ಮತ್ತು ಅವೃತ ಮಾರ್ಗವನ್ನು ವಿದ್ಯುತ್ ಮಂಡಲ ಎನ್ನುವರು.
ವಿದ್ಯುತ್ ಮಂಡಲ ಎಲ್ಲಿಯಾದರೂ ಕಡಿತಗೊಂಡರೆ, *** ಉದಾಹರಣೆಗೆ ಟಾರ್ಚ್ ನ ಸ್ವಿಚ್ ಅನ್ನು ಆರಿಸಿದರೆ ವಿದ್ಯುತ್ ಪ್ರವಾಹದ ಹರಿವು ನಿಲ್ಲುತ್ತದೆ ಮತ್ತು ಬಲ್ಬ್ ಬೆಳಗುವುದಿಲ್ಲ.
***ವಿದ್ಯುತ್ ಪ್ರವಾಹ ಎಂದರೇನು?
ಒಂದು ಏಕಮಾನ ಸಮಯದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಮಾಣವನ್ನು ವಿದ್ಯುತ್ ಪ್ರವಾಹ ಎನ್ನುವರು.
ಅಥವಾ
***ವಿದ್ಯುತ್ ಪ್ರವಾಹ ಎಂದರೇನು?
ವಿದ್ಯುದಾವೇಶಗಳ ಪ್ರವಾಹದ ದರವನ್ನು ವಿದ್ಯುತ್ಪ್ರವಾಹ ಎನ್ನುವರು.
***Flow of electrons is nothing but electricity.
***ಲೋಹದ ತಂತಿಗಳನ್ನು ಬಳಸುವ ವಿದ್ಯುನ್ಮಂಡಲಗಳಲ್ಲಿ ಇಲೆಕ್ಟ್ರಾನ್ ಗಳು ಏನನ್ನು ಉಂಟುಮಾಡುತ್ತವೆ?
ಲೋಹದ ತಂತಿಗಳನ್ನು ಬಳಸುವ ವಿದ್ಯುನ್ಮಂಡಲಗಳಲ್ಲಿ ಇಲೆಕ್ಟ್ರಾನ್ ಗಳು ಆವೇಶಗಳ ಹರಿವನ್ನು ಉಂಟುಮಾಡುತ್ತವೆ?
*** ವಿದ್ಯುತ್ ವಿದ್ಯಮಾನವನ್ನು ಪ್ರಪ್ರಥಮ ಬಾರಿ ವೀಕ್ಷಣೆ ಮಾಡಲಾದ ಸಮಯದಲ್ಲಿ ಇಲೆಕ್ಟ್ರಾನ್ ಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದ್ದರಿಂದ ವಿದ್ಯುತ್ಪ್ರವಾಹವನ್ನು ಧನಾತ್ಮಕ ಆವೇಶಗಳ ಹರಿವು ಎಂದು ಪರಿಗಣಿಸಲಾಗಿತ್ತು ಮತ್ತು ಧನಾತ್ಮಕ ವಿದ್ಯುದಾವೇಶದ ಹರಿವಿನ ದಿಕ್ಕನ್ನು ವಿದ್ಯುತ್ಪ್ರವಾಹದ ದಿಕ್ಕು ಎಂದು ತೆಗೆದುಕೊಳ್ಳುತ್ತಿದ್ದರು.
*** ಸಾಂಪ್ರದಾಯಿಕವಾಗಿ ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಎಲೆಕ್ಟ್ರಾನ್ ಗಳ ಹರಿವಿನ ದಿಕ್ಕಿಗೆ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತದೆ ಅವು ಋಣಾತ್ಮಕ ಆವೇಶಗಳಾಗಿವೆ.
*** ವಾಹಕದ ಯಾವುದೇ ಅಡ್ಡಕೊಯ್ತ ದ ಮೂಲಕ t ಸಮಯದಲ್ಲಿ Q ಪ್ರಮಾಣದ ಒಟ್ಟು ಆವೇಶ ಚಲಿಸಿದಾಗ, ವಾಹಕದ ಅಡ್ಡಕೊಯ್ತ ದಲ್ಲಿ ಪ್ರವಹಿಸುವ ವಿದ್ಯುತ್ಪ್ರವಾಹ I ಯು
I=Q/t ಅಥವಾ Q=It
***ವಿದ್ಯುತ್ ಮಂಡಲದ ರೇಖಾಚಿತ್ರ ಬರೆದು ಭಾಗಗಳನ್ನು ಗುರುತಿಸಿ.
*** ವಿದ್ಯುದಾವೇಶವನ್ನು Q ಎಂಬ ಅಕ್ಷರದಿಂದ ಸೂಚಿಸುತ್ತಾರೆ.
*** ವಿದ್ಯುದಾವೇಶದ SI ಏಕಮಾನ ಕೂಲಮ್ C (coulomb)
***ಒಂದು ಕೂಲಮ್ 6x10 18 ಎಲೆಕ್ಟ್ರಾನ್ ಗಳ ವಿದ್ಯುದಾವೇಶಕ್ಕೆ ಸಮನಾಗಿರುತ್ತದೆ.
*** ಇಲೆಕ್ಟ್ರಾನ್ 1.6x10-19 C ಋಣಾತ್ಮಕ ಆವೇಶವನ್ನು ಹೊಂದಿದೆ.
*** ವಿದ್ಯುತ್ ಪ್ರವಾಹವನ್ನು ಆಂಪಿಯರ್ (A) ಎಂಬ ಏಕಮಾನದಿಂದ ವ್ಯಕ್ತಪಡಿಸಲಾಗುತ್ತದೆ.
*** ಒಂದು ಆಂಪಿಯರ್ (A) ವಿದ್ಯುತ್ಪ್ರವಾಹದ ರಚನೆಯು ಪ್ರತಿ ಸೆಕೆಂಡಿಗೆ ಒಂದು ಕೂಲಮ್ ಆವೇಶದ ಪ್ರವಾಹವಾಗಿದೆ.
*** 1A=1C/1s.
*** ಅಲ್ಪ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಮಿಲಿಆಂಪೀರ್ (1mA=10-3A) ಅಥವಾ ಮೈಕ್ರೋ ಆಂಪೀರ್ (1µA=10-6) ನಿಂದ ವ್ಯಕ್ತಪಡಿಸಲಾಗುತ್ತದೆ.
*** ವಿದ್ಯುತ್ ಮಂಡಲದಲ್ಲಿನ ವಿದ್ಯುತ್ಪ್ರವಾಹದ ದರವನ್ನು ಅಳೆಯಲು ಉಪಯೋಗಿಸುವ ಉಪಕರಣವನ್ನು ಅಮ್ಮೀಟರ್ ಎಂದು ಕರೆಯುತ್ತಾರೆ.
ಇದರಿಂದ ವಿದ್ಯುತ್ ಮಂಡಲದಲ್ಲಿ ನ ವಿದ್ಯುತ್ ಪ್ರವಾಹವನ್ನು ಅಳೆಯುತ್ತಾರೆ. ಮತ್ತು ಇದನ್ನು ಯಾವಾಗಲೂ ಸರಣಿ ಕ್ರಮದಲ್ಲಿ ಜೋಡಿಸಿರುತ್ತಾರೆ.
Comments
Post a Comment