ಅಭ್ಯಾಸ ಮಾಡಿ - 3
ಸರ್ಕಾರಿ ಪ್ರೌಢಶಾಲೆ ಮಾವಿನಕೆರೆ ಕಾಲೋನಿ ಭದ್ರಾವತಿ -577 245
1.ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಯಾವುವು?
ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಆಮ್ಲಗಳು.
2. ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಯಾವುವು?
ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಪ್ರತ್ಯಾಮ್ಲಗಳು.
3. ನೈಸರ್ಗಿಕ ಸೂಚಕಗಳಿಗೆ ಎರಡು ಉದಾಹರಣೆ ಕೊಡಿ.
ಲಿಟ್ಮಸ್
ಅರಿಷಿಣ
4. ಸಂಶ್ಲೇಷಿತ ಸೂಚಕಗಳಿಗೆ ಎರಡು ಉದಾಹರಣೆ ಕೊಡಿ.
ಮೀಥೈಲ್ ಆರೆಂಜ್ ಮತ್ತು ಫೀನಾಫ್ತಲೀನ್
5. ಹೈಡ್ರೋಕ್ಲೋರಿಕ್ ಆಮ್ಲದ ಅಣುಸೂತ್ರ ಬರೆಯಿರಿ.
HCl
6 ಸಲ್ಫ್ಯೂರಿಕ್ ಆಮ್ಲದ ಅಣುಸೂತ್ರ ಬರೆಯಿರಿ.
H2SO4
7. ಗಂಧಕಾಮ್ಲದ ಅಣುಸೂತ್ರ ಬರೆಯಿರಿ.
H2SO4
8. ನೈಟ್ರಿಕ್ ಆಮ್ಲದ ಅಣುಸೂತ್ರ ಬರೆಯಿರಿ.
HNO3
9. ಅಸಿಟಿಕ್ ಆಮ್ಲದ ಅಣುಸೂತ್ರ ಬರೆಯಿರಿ.
CH3COOH
10. ಸೋಡಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ.
NaOH
11. ಪೊಟ್ಯಾಷಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ.
KOH
12. ಮೆಗ್ನೀಷಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ.
Mg(OH)2
13. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ.
Ca(OH)2
14. ಪ್ರತ್ಯಾಮ್ಲ ಗಳಿಗೆ ಉದಾಹರಣೆ ಕೊಡಿ.
ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ಸೋಡಿಯಂ ಹೈಡ್ರಾಕ್ಸೈಡ್
ಪೊಟ್ಯಾಷಿಯಂ ಹೈಡ್ರಾಕ್ಸೈಡ್
ಮೆಗ್ನೀಸಿಯಂ ಹೈಡ್ರಾಕ್ಸೈಡ್
15. ಘ್ರಾಣ ಸೂಚಕಗಳು ಎಂದರೇನು?
ಕೆಲವು ವಸ್ತುಗಳ ವಾಸನೆ ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಮಾಧ್ಯಮಗಳಲ್ಲಿ ಬದಲಾಗುತ್ತದೆ. ಇವುಗಳನ್ನು ಘ್ರಾಣ ಸೂಚಕಗಳು ಎನ್ನುವರು.
16. ಘ್ರಾಣ ಸೂಚಕಗಳಿಗೆ ಉದಾಹರಣೆ ಕೊಡಿ.
ವೆನಿಲ್ಲಾ
ಈರುಳ್ಳಿ
ಲವಂಗದ ಎಣ್ಣೆ.
17. ಲೋಹವು ಆಮ್ಲದೊಂದಿಗೆ ಪ್ರತಿವರ್ತಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು?
ಹೈಡ್ರೋಜನ್ ಅನಿಲ
18. ಲೋಹವು ಆಮ್ಲದೊಂದಿಗೆ ಪ್ರತಿವರ್ತಿಸಿದಾಗ ಉಂಟಾಗುವ ಉತ್ಪನ್ನಗಳನ್ನು ಹೆಸರಿಸಿ.
ಲೋಹವು ಆಮ್ಲದೊಂದಿಗೆ ಪ್ರತಿವರ್ತಿಸಿದಾಗ ಉಂಟಾಗುವ ಉತ್ಪನ್ನಗಳು ಲವಣ ಮತ್ತು ಹೈಡ್ರೋಜನ್ ಅನಿಲ.
19. ಸತುವು ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ಪ್ರತಿವರ್ತಿಸಿದಾಗ ಉಂಟಾಗುವ ಉತ್ಪನ್ನಗಳನ್ನು ಹೆಸರಿಸಿ.
ಸೋಡಿಯಂ ಝಿಂಕೇಟ್ ಮತ್ತು ಹೈಡ್ರೋಜನ್ ಅನಿಲ.
20. ಸೋಡಿಯಂ ಝಿಂಕೇಟ್ ನ ಅಣುಸೂತ್ರ ಬರೆಯಿರಿ.
Na2ZnO2.
******
Comments
Post a Comment