ಅಭ್ಯಾಸ ಮಾಡಿ -- 2
ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ, ಭದ್ರಾವತಿ. -577 245
1. ಸೌಮ್ಯ ಪ್ರತ್ಯಾಮ್ಲಕ್ಕೆ ಒಂದು ಉದಾಹರಣೆ ಕೊಡಿ.
ಮೆಗ್ನೀಷಿಯಂ ಹೈಡ್ರಾಕ್ಸೈಡ್
2.ನಮ್ಮ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ ಯಾವುದು?
ಹೈಡ್ರೋಕ್ಲೋರಿಕ್ ಆಮ್ಲ
3. ಜಠರದಲ್ಲಿ ಅಗತ್ಯಕ್ಕಿಂತ ಅಧಿಕ ಆಮ್ಲ ಯಾವ
ಸಂದರ್ಭದಲ್ಲಿ ಉತ್ಪತ್ತಿಯಾಗುತ್ತದೆ?
ಜಠರದಲ್ಲಿ ಅಗತ್ಯಕ್ಕಿಂತ ಅಧಿಕ ಆಮ್ಲ ಅಜೀರ್ಣತೆಯ ಸಂದರ್ಭದಲ್ಲಿ ಉತ್ಪತ್ತಿಯಾಗುತ್ತದೆ
4. 'X' ಎಂಬ ಹೆಸರಿನ ಹೊಟ್ಟೆಬಾಕ ವ್ಯಕ್ತಿಯು ವಿಶೇಷವಾದ ಭೋಜನವನ್ನು ಸೇವಿಸಿದ ನಂತರ ಹೊಟ್ಟೆನೋವು ಮತ್ತು ಹೊಟ್ಟೆಉರಿಯಿಂದ ಬಳಲುತ್ತಿದ್ದಾನೆ. ಏಕೆ?
ಅಜೀರ್ಣತೆಯ ಸಂದರ್ಭದಲ್ಲಿ ಜಠರವು ಅಗತ್ಯಕ್ಕಿಂತ ಅಧಿಕ ಆಮ್ಲ ಉತ್ಪಾದಿಸುತ್ತದೆ. ಇದು ಹೊಟ್ಟೆನೋವು ಹಾಗೂ ಹೊಟ್ಟೆ ಉರಿಗೆ ಕಾರಣವಾಗುತ್ತದೆ.
5. ಅಜೀರ್ಣತೆ ಮತ್ತು ಆಮ್ಲೀಯತೆಯಿಂದಾದ ನೋವಿನಿಂದ ಮುಕ್ತಿ ಪಡೆಯಲು ಜನರು ಏನನ್ನು ಬಳಸುತ್ತಾರೆ?
ಅಜೀರ್ಣತೆ ಮತ್ತು ಆಮ್ಲೀಯತೆಯಿಂದ ಆದ ನೋವಿನಿಂದ ಮುಕ್ತಿ ಪಡೆಯಲು ಜನರು ಆಮ್ಲ ಶಾಮಕ ಎಂದು ಕರೆಯಲ್ಪಡುವ ಪ್ರತ್ಯಾಮ್ಲಗಳನ್ನು ಬಳಸುತ್ತಾರೆ.
6. ಜೀರ್ಣನಾಳದಲ್ಲಿ ಆಮ್ಲಶಾಮಕಗಳ ಕಾರ್ಯವೇನು?
ಆಮ್ಲಶಾಮಕಗಳು ಹೆಚ್ಚುವರಿ ಆಮ್ಲವನ್ನು ತಟಸ್ಥಗೊಳಿಸುತ್ತವೆ.
7. ಆಮ್ಲಶಾಮಕ ಕ್ಕೊಂದು ಉದಾಹರಣೆ ಕೊಡಿ.
ಮೆಗ್ನೀಷಿಯಂ ಹೈಡ್ರಾಕ್ಸೈಡ್
8. ನಮ್ಮ ದೇಹವು ಯಾವ pH ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ?
ನಮ್ಮ ದೇಹವು 7.0 ಇಂದ 7.8 pH ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
9. ಆಮ್ಲಮಳೆ ಎಂದರೇನು?
ಮಳೆ ನೀರಿನ pH ಮೌಲ್ಯ 5.6 ಕ್ಕಿಂತ ಕಡಿಮೆ ಆದಾಗ ಅದನ್ನು ಆಮ್ಲಮಳೆ ಎನ್ನುತ್ತಾರೆ.
10. ಆಮ್ಲಮಳೆ ನದಿಯ ನೀರಿನ pH ಅನ್ನು ಏನು ಮಾಡುತ್ತದೆ? ಜಲಚರಗಳ ಮೇಲೆ ಆಮ್ಲಮಳೆಯ ಪರಿಣಾಮವೇನು?
ಆಮ್ಲಮಳೆ ನದಿಯ ನೀರಿನ pH ಅನ್ನು ಕಡಿಮೆ ಮಾಡುತ್ತದೆ. ಆಮ್ಲ ಮಳೆಯಿಂದ ಜಲಚರಗಳ ಉಳಿವು ದುಸ್ತರವಾಗುತ್ತದೆ.
..……………….
Comments
Post a Comment