1. ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.
I LOVE SCIENCE AND S. S. L. C.
ವಿಜ್ಞಾನ ವಿಷಯ ನಮ್ಮದು! ಎಸ್. ಎಸ್. ಎಲ್. ಸಿ. ಪರೀಕ್ಷೆ ನಮ್ಮದು!
1. ನೈಸರ್ಗಿಕ ಸಂಪನ್ಮೂಲಗಳು ಎಂದರೇನು? 29/04/2021
ಉತ್ತರ:- ಪಕೃತಿಯಲ್ಲಿ ದೊರಕುವ ಮಾನವನಿಗೆ ಉಪಯುಕ್ತವಾದ ವಸ್ತುಗಳನ್ನು ನೈಸರ್ಗಿಕ ಸಂಪನ್ಮೂಲಗಳು ಎನ್ನುವರು.
2. ನೈಸರ್ಗಿಕ ಸಂಪನ್ಮೂಲಗಳಲ್ಲಿ ಎಷ್ಟು ವಿಧ? ಅವು ಯಾವುವು?
ಉತ್ತರ:- ನೈಸರ್ಗಿಕ ಸಂಪನ್ಮೂಲಗಳಲ್ಲಿ 2 ವಿಧ.
ಅವು ಯಾವುವೆಂದರೆ- 1. ಮುಗಿದು ಹೋಗುವ ಸಂಪನ್ಮೂಲಗಳು, ಉದಾಹರಣೆ:-
1ಕಲ್ಲಿದ್ದಲು, 2. ಪೆಟ್ರೋಲಿಯಂ, 3. ಖನಿಜಗಳು.
2. ಮುಗಿದು ಹೋಗದ ಸಂಪನ್ಮೂಲಗಳು, ಉದಾಹರಣೆ:-
1. ಸೌರಶಕ್ತಿ, 2.ಗಾಳಿ, 3.ನೀರು, 4.ಸಸ್ಯಗಳು.
3. ಪರಿಸರ ರಕ್ಷಿಸುವ 5 R ಗಳು ಯಾವುವು?
ಉತ್ತರ:- 1. (REFUSE)ನಿರಾಕರಣೆ,
2. (REDUCE)ಮಿತ ಬಳಕೆ,
3. (REUSE)ಮರುಬಳಕೆ,
4. (REPURPOSE)ಮರು ಉದ್ದೇಶ,
5. (RECYCLE)ಮರು ಚಕ್ರೀಕರಣ.
4. ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳ ಇರುವಿಕೆಯು ಏನನ್ನು ಸೂಚಿಸುತ್ತದೆ?
ಉತ್ತರ:- ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳ ಇರುವಿಕೆಯು ನೀರು ಮಲಿನಗೊಂಡಿರುವುದನ್ನು ಸೂಚಿಸುತ್ತದೆ.
5. (REFUSE)ನಿರಾಕರಣೆ ಎಂದರೇನು?
ಉತ್ತರ:- ಪರಿಸರಕ್ಕೆ ಹಾನಿ ಉಂಟುಮಾಡುವ ವಸ್ತುಗಳನ್ನು ಕೊಂಡುಕೊಳ್ಳುವುದನ್ನು ನಿರಾಕರಿಸುವುದನ್ನು ನಿರಾಕರಣೆ ಎನ್ನುವರು.
ಉದಾಹರಣೆ:- ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಕೈ ಚೀಲಗಳು
6. (REDUCE) ಮಿತ ಬಳಕೆ ಎಂದರೇನು?
ಉತ್ತರ:- ಸಂಪನ್ಮೂಲಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಬಳಸುವುದನ್ನು ಮಿತಬಳಕೆ ಎನ್ನುವರು.
ಉದಾಹರಣೆ:- ವಿದ್ಯತ್, ನೀರು, ಕಾಗದ, ಆಹಾರ, ಪಳೆಯುಳಿಕೆ ಇಂಧನಗಳು.
7. (REUSE)ಮರುಬಳಕೆ ಎಂದರೇನು?
ಉತ್ತರ:- ಒಮ್ಮೆ ಬಳಸಿದ ವಸ್ತುಗಳನ್ನು ಪುನಃ ಇತರೆ ಕೆಲಸಗಳಿಗೆ ಬಳಸುವುದನ್ನು ಮರುಬಳಕೆ ಎನ್ನುವರು.
ಉದಾಹರಣೆ:- ಒಡೆದ ಬಕೆಟ್ ಗಳನ್ನು ಕುಂಡಗಳಾಗಿ ಬಳಸುವುದು, ಒಂದು ಕಡೆ ಬರೆದಿರುವ ಅನುಪಯುಕ್ತ ಕಾಗದಗಳನ್ನು ಲಕೋಟೆ ತಯಾರಿಸಲು ಬಳಸುವುದು.
8. (REPURPOSE)ಮರು ಉದ್ದೇಶ ಎಂದರೇನು?
ಉತ್ತರ:- ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಇದ್ದರೆ, ಅದನ್ನು ಬೇರೆ ಯಾವುದೇ ಉಪಯುಕ್ತ ಉದ್ದೇಶಕ್ಕೆ ಬಳಸುವುದನ್ನು ಮರು ಉದ್ದೇಶ ಎನ್ನುವರು.
ಉದಾಹರಣೆ:- ಹಿಡಿಕೆ ಮುರಿದ ಲೋಟಗಳನ್ನು ಸಣ್ಣ ಸಸ್ಯಗಳನ್ನು ಬೆಳೆಸಲು ಮತ್ತು ಪಕ್ಷಿಗಳಿಗೆ ಆಹಾರ ಮತ್ತು ನೀರು ಉಣಿಸಲು ಬಳಸಬಹುದು.
9. (RECYCLE)ಮರು ಚಕ್ರೀಕರಣ ಎಂದರೇನು?
ಉತ್ತರ:- ತ್ಯಾಜ್ಯಗಳನ್ನು ಬೇರ್ಪಡಿಸಿ ಅವುಗಳಿಂದ ಪುನಃ ಹೊಸ ವಸ್ತುಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಮರುಚಕ್ರೀಕರಣ ಎನ್ನುವರು.
ಉದಾಹರಣೆ:- 1. ಪ್ಲಾಸ್ಟಿಕ್
2. ಗಾಜು
3. ಕಾಗದ
10. ನೀರಿನ ಕೊಯ್ಲು ಎಂದರೇನು?
ಉತ್ತರ:- ಮಳೆ ನೀರನ್ನು ವಿವಿಧ ವಿಧಾನಗಳಿಂದ ಸಂಗ್ರಹಿಸುವುದನ್ನು ನೀರಿನ ಕೊಯ್ಲು ಎನ್ನುವರು.
11. ಬಹುಕೋಟಿ ಯೋಜನೆಯ ಗಂಗಾ ಕಾರ್ಯ ಯೋಜನೆ (GANGA ACTION PLAN) ಜಾರಿಗೆ ಬಂದ ವರ್ಷ ಯಾವುದು?
ಉತ್ತರ:- 1985.
12. ನದಿ ನೀರು ಮಲಿನಗೊಳ್ಳಲು ಕಾರಣವಾದ ಮಾನವನ ಸಣ್ಣ ಕರುಳಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಯಾವುದು?
ಉತ್ತರ:- ಕಾಲಿಫಾರ್ಮ್ ಬ್ಯಾಕ್ಟೀರಿಯಾ.
13. ರಾಜಸ್ಥಾನದಲ್ಲಿನ ಪುರಾತನ ನೀರು ಕೊಯ್ಲು ರಚನೆಗಳು ಯಾವುವು?
ಉತ್ತರ:- ಖಾದಿನ್, ಕೆರೆಗಳು ಮತ್ತು ನಾದಿಸ್ ಗಳು.
14. ಮಹಾರಾಷ್ಟ್ರದಲ್ಲಿನ ಪುರಾತನ ನೀರು ಕೊಯ್ಲು ರಚನೆಗಳು ಯಾವುವು?
ಉತ್ತರ:- ಬಾಂದಾರಗಳು ಮತ್ತು ತಾಲ್ ಗಳು
15. ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶಗಳ ಪುರಾತನ ನೀರು ಕೊಯ್ಲು ರಚನೆಗಳು ಯಾವುವು?
ಉತ್ತರ:- ಬುಂಧೀಸ್ ಗಳು
16. ಬಿಹಾರದ ಪುರಾತನ ನೀರು ಕೊಯ್ಲು ರಚನೆಗಳು ಯಾವುವು?
ಉತ್ತರ:- ಅಹರ್ ಗಳು ಮತ್ತು ಪೈನ್ ಗಳು.
17. ಹಿಮಾಚಲ ಪ್ರದೇಶದ ಪುರಾತನ ನೀರು ಕೊಯ್ಲು ರಚನೆಗಳು ಯಾವುವು?
ಉತ್ತರ:-ಕುಲ್ಸ್ ಗಳು
18. ಜಮ್ಮುವಿನ ಪುರಾತನ ನೀರು ಕೊಯ್ಲು ರಚನೆಗಳು ಯಾವುವು?
ಉತ್ತರ:- ಕಂದಿ ಪಟ್ಟಿಗಳು
19. ತಮಿಳುನಾಡಿನ ಪುರಾತನ ನೀರು ಕೊಯ್ಲು ರಚನೆಗಳು ಯಾವುವು?
ಉತ್ತರ:- ಎರಿಗಳು (ಕೆರೆಗಳು)
20. ಕೇರಳದ ಪುರಾತನ ನೀರು ಕೊಯ್ಲು ರಚನೆಗಳು ಯಾವುವು?
ಉತ್ತರ:- ಸುರಂಗಗಳು
21. ಕರ್ನಾಟಕದ ಪುರಾತನ ನೀರು ಕೊಯ್ಲು ರಚನೆಗಳು ಯಾವುವು?
ಉತ್ತರ:- ಕಟ್ಟೆಗಳು
22. ನೀರಿನ ಕೊಯ್ಲು ಎಂದರೇನು?
ಉತ್ತರ:- ಮಳೆಯ ನೀರನ್ನು ವಿವಿಧ ವಿಧಾನಗಳ ಮೂಲಕ ಸಂಗ್ರಹಿಸುವುದನ್ನು ನೀರಿನ ಕೊಯ್ಲು ಎನ್ನುವರು.
23. ಪ್ಲಾಸ್ಟಿಕ್ ಉತ್ಪನ್ನಗಳ ಮರುಬಳಕೆ ಮರುಚಕ್ರೀಕರಣ ವಿಧಾನಕ್ಕಿಂತ ಉತ್ತಮ. ಏಕೆ?
ಉತ್ತರ:- ಮರುಚಕ್ರೀಕರಣದಲ್ಲಿ ಶಕ್ತಿ ಬಳಕೆಯಾಗುತ್ತದೆ. ಆದರೆ, ಮರುಬಳಕೆ ವಿಧಾನಕ್ಕೆ ಶಕ್ತಿಯ ಅವಶ್ಯಕತೆ ಇಲ್ಲ.
24. ಅಂತರ್ಜಲವನ್ನು ಉಳಿಸಿಕೊಳ್ಳುವಲ್ಲಿ ಉಂಟಾಗಿರುವ ವೈಫಲ್ಯಕ್ಕೆ ಕಾರಣಗಳನ್ನು ಪಟ್ಟಿ ಮಾಡಿ.
ಉತ್ತರ:- 1. ತೀವ್ರತರದ ಅರಣ್ಯನಾಶ,
2. ಹೆಚ್ಚು ನೀರು ಬೇಡುವ ತಳಿಗಳನ್ನು ಬೆಳೆಸುವುದು
3. ಕೈಗಾರಿಕಾ ತ್ಯಾಜ್ಯಗಳಿಂದಾದ ಮಾಲಿನ್ಯ
4. ನಗರ ತ್ಯಾಜ್ಯಗಳಿಂದಾದ ಮಾಲಿನ್ಯ
25. "ಸ್ಥಳೀಯ ಜನರು ಅರಣ್ಯ ಸಂಪನ್ಮೂಲಗಳ ಪಾಲುದಾರರು". ವಿವರಿಸಿ.
ಉತ್ತರ:- ಸ್ಥಳೀಯ ಜನರು ಅರಣ್ಯ ಸಂಪನ್ಮೂಲಗಳನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಅವಲಂಬಿಸಿದ್ದಾರೆ. ಆದ್ದರಿಂದ ಸ್ಥಳೀಯ ಜನರು ಅರಣ್ಯ ಸಂಪನ್ಮೂಲಗಳ ಪಾಲುದಾರರು.
1. ಮರಮುಟ್ಟು ಮತ್ತು ಹುಲ್ಲು ಗಳಿಗಾಗಿ.
2. ಗುಡಿಸಿಲಿನ ಮೇಲ್ಚಾವಣಿ ಮತ್ತು ಬುಟ್ಟಿ ತಯಾರಿಕೆಯ ಬಿದಿರಿಗಾಗಿ
3. ಕೃಷಿ ಮೀನುಗಾರಿಕೆ ಮತ್ತು ಬೇಟೆಗೆ ಬಳಸುವ ಉಪಕರಣಗಳಿಗಾಗಿ
4. ಹಣ್ಣುಗಳು, ಬೀಜಗಳು ಮತ್ತು ಔಷಧಗಳ ಸಂಗ್ರಹಕ್ಕಾಗಿ
5. ದನಕರುಗಳ ಮೇವಿಗಾಗಿ.
26. ನಾವು ಅರಣ್ಯ ಮತ್ತು ವನ್ಯಜೀವಿಗಳನ್ನು ಏಕೆ ಸಂರಕ್ಷಿಸಬೇಕು?
ಉತ್ತರ:- 1. ಅರಣ್ಯಗಳು ಜೀವವೈವಿಧ್ಯತೆಯ ಸೂಕ್ಷ್ಮ ತಾಣಗಳು.
2. ಪರಿಸರ ಸಮತೋಲನದಲ್ಲಿ ಜೀವವೈವಿಧ್ಯತೆಯ ಪಾತ್ರ ಪ್ರಮುಖವಾಗಿದೆ.
3. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಯಿಂದ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಿ ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ.
27. ಕಾಡುಗಳ ಸಂರಕ್ಷಣೆಗಾಗಿ ಕೆಲವು ಸಲಹೆಗಳನ್ನು ನೀಡಿ.
ಉತ್ತರ:- 1. ಅರಣ್ಯಗಳಿಂದಾಗುವ ಪ್ರಯೋಜನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು.
2. ಅರಣ್ಯ ನಾಶದಿಂದ ಆಗುವ ತೊಂದರೆಗಳ ಬಗ್ಗೆ ಮನದಟ್ಟು ಮಾಡಿಸುವುದು.
3. ಅರಣ್ಯಗಳನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಯೋಜನೆಗಳನ್ನು ರೂಪಿಸುವುದು.
4. ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ, ಗ್ರಾಮಸ್ಥರಲ್ಲಿ ತಿಳುವಳಿಕೆ ಮೂಡಿಸುವುದು.
28. ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ ನ ಅಲ್ಪೈನ್ ಹುಲ್ಲುಗಾವಲಿನಲ್ಲಿ ಕುರಿಗಳ ನಿಯಮಿತ ಮೇಯುವಿಕೆಯ ಪದ್ಧತಿಯನ್ನು ಅಂತ್ಯಗೊಳಿಸಲಾಯಿತು. ಈ ಕ್ರಮದಿಂದ ಹುಲ್ಲುಗಾವಲಿನ ಮೇಲೆ ಉಂಟಾದ ಪರಿಣಾಮಗಳೇನು?
ಉತ್ತರ:- ಕುರಿಗಳ ನಿಯಮಿತ ಮೇಯುವಿಕೆ ಇಲ್ಲದೇ ಹುಲ್ಲು ಮೊದಲು ಅತಿ ಎತ್ತರವಾಗಿ ಬೆಳೆದು ನಂತರ ಚಿಗುರುಗಳ ಮೇಲೆ ಒರಗಿ, ಅಲ್ಲಿ ಹೊಸ ಬೆಳವಣಿಗೆಯನ್ನು ತಡೆಗಟ್ಟುತ್ತಿದೆ.
29. ಸಮತಟ್ಟಾದ ಭೂ ಭಾಗಗಳಲ್ಲಿ ಅರ್ಧಚಂದ್ರಾಕಾರದ ಮಣ್ಣಿನ ಒಡ್ಡುಗಳನ್ನು ನಿರ್ಮಿಸುವುದರಿಂದ ನದಿಗಳಿಗೆ ಬೃಹತ್ ಅಣೆಕಟ್ಟೆಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವುದು ಕ್ಕಿಂತ ಸೂಕ್ತ ಈ ಹೇಳಿಕೆಯನ್ನು ಅವುಗಳ ಪರಿಣಾಮಗಳೊಂದಿಗೆ ವಿಶ್ಲೇಷಿಸಿ.
ಉತ್ತರ:- ಸಾಮಾಜಿಕ ಸಮಸ್ಯೆಗಳು: ನದಿಗಳಿಗೆ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವುದರಿಂದ ಉಂಟಾಗುತ್ತವೆ.
ಆರ್ಥಿಕ ಸಮಸ್ಯೆಗಳು: ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರ ಹಣವನ್ನು ಬಳಸುತ್ತವೆ.
ಪರಿಸರದ ಸಮಸ್ಯೆಗಳು: ಬೃಹತ್ ಪ್ರಮಾಣದ ಅರಣ್ಯ ನಾಶ ಮತ್ತು ಜೀವವೈವಿಧ್ಯತೆಯ ನಾಶಕ್ಕೆ ಕಾರಣವಾಗುತ್ತದೆ.
30. ಅರ್ಧಚಂದ್ರಾಕಾರದ ಮಣ್ಣಿನಿಂದ ನಿರ್ಮಿತವಾದ ಒಡ್ಡುಗಳ ಪ್ರಯೋಜನಗಳು ಏನೇನು?
ಇವುಗಳು ಅಂತರ್ಜಲವನ್ನು ಮರುಪೂರಣ ಮಾಡುತ್ತವೆ.
ಇಲ್ಲಿ ನೀರು ಆವಿಯಾಗುವುದರ ಬದಲು ವಿಸ್ತರಣೆಗೊಂಡು ಬಾವಿಗಳನ್ನು ಮರು ಪೂರ್ಣಗೊಳಿಸುತ್ತದೆ.
ಹೊಂಡಗಳಲ್ಲಿ ಅಥವಾ ಕೃತಕ ಕೆರೆಗಳಲ್ಲಾಗುವಂತೆ ಸೊಳ್ಳೆಗಳಿಗೆ ಮೊಟ್ಟೆಗಳನ್ನಿಟ್ಟು ಮರಿ ಮಾಡಲು ಬ್ರೀಡಿಂಗ್ ಪ್ರದೇಶಗಳನ್ನು ಒದಗಿಸುವುದಿಲ್ಲ.
31. ಪರಿಸರ ಸಂರಕ್ಷಣೆಯಲ್ಲಿ ಮಿತ ಬಳಕೆ ಮತ್ತು ಮರುಬಳಿಕೆಯಿಂದ ಆಗುವ ಅನುಕೂಲಗಳನ್ನು ಪಟ್ಟಿಮಾಡಿ.
ಉತ್ತರ:- ಮಿತ ಬಳಕೆಯ ಅಭ್ಯಾಸದಿಂದ ವಿದ್ಯುತಕ್ತಿ ನೀರು ಆಹಾರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಬಹುದು.
ಮರುಬಳಕೆಯ ಅಭ್ಯಾಸದಿಂದ
ಎ. ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು
ಬಿ. ತಕ್ಷಣದ ಬಳಕೆಗೆ ವಸ್ತುಗಳು ಲಭ್ಯವಿರುತ್ತವೆ
ಸಿ. ಶಕ್ತಿಯ ರಕ್ಷಣೆಯಾಗುತ್ತದೆ.
ಡಿ. ಕಚ್ಚಾ ವಸ್ತುಗಳ ಬಳಕೆಯನ್ನು ಮಿತಗೊಳಿಸಬಹುದು.
32. ಸಂಪನ್ಮೂಲಗಳು ನ್ಯಾಯಸಮ್ಮತವಾಗಿ ಹಂಚಿಕೆಯಾಗಬೇಕೆದು ನೀವೇಕೆ ಭಾವಿಸುತ್ತೀರಿ? ನಮ್ಮ ಸಂಪನ್ಮೂಲಗಳ ನ್ಯಾಯಸಮ್ಮತ ಹಂಚಿಕೆಯ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳು ಯಾವುವು?
ಉತ್ತರ:- ಸಂಪನ್ಮೂಲಗಳು ನ್ಯಾಯಸಮ್ಮತವಾಗಿ ಹಂಚಿಕೆಯಾಗದಿದ್ದರೆ ಕೇವಲ ಶ್ರೀಮಂತರಿಗೆ ಮಾತ್ರ ಸಂಪನ್ಮೂಲಗಳು ದೊರೆಯುತ್ತವೆ. ಹಣಕಾಸು ಇರುವ ಜನ, ರಾಜಕೀಯ ಹಿತಾಸಕ್ತಿಗಳು ನಮ್ಮ ಸಂಪನ್ಮೂಲಗಳ ನ್ಯಾಯಸಮ್ಮತ ಹಂಚಿಕೆಯ ವಿರುದ್ಧ ಕೆಲಸ ಮಾಡುತ್ತಿವೆ.
33. ಅಲ್ಪಾವಧಿಯ ಅನುಕೂಲಗಳು ನಮ್ಮ ಸಂಪನ್ಮೂಲಗಳ ನಿರ್ವಹಣೆಯಲ್ಲಿ ದೀರ್ಘಾವಧಿ ದೃಷ್ಟಿಕೋನವನ್ನು ಬಳಸುವುದರಿಂದ ಉಂಟಾಗುವ ಅನುಕೂಲಗಳಿಗಿಂತ ಹೇಗೆ ಭಿನ್ನವಾಗಿವೆ?
ಉತ್ತರ:- ಸಂಪನ್ಮೂಲಗಳ ಸಂರಕ್ಷಣೆಯಾಗುತ್ತದೆ ಮತ್ತು ಪರಿಸರವನ್ನು ಉತ್ತಮಗೊಳಿಸುತ್ತದೆ.
34. ಅಲ್ಪಾವಧಿಯ ಗುರಿಗಳೊಂದಿಗೆ ಪರಿಸರವನ್ನು ದುರ್ಬಳಕೆ ಮಾಡಿಕೊಳ್ಳುವುದರ ಅನುಕೂಲಗಳೇನು?
ಉತ್ತರ:- ಅಲ್ಪಾವಧಿಯ ಗುರಿಗಳು ತೃಪ್ತಿ ಮತ್ತು ಲಾಭ ತಂದುಕೊಡುತ್ತವೆಯಾದರೂ ಪರಿಸರ ಮಾಲಿನ್ಯ ಉಂಟಾಗುವುದಲ್ಲದೇ, ಸಂಪನ್ಮೂಲಗಳ ದೊರೆಯುವಿಕೆಯ ಪ್ರಮಾಣ ದಿನೇ ದಿನೇ ಕ್ಷೀಣಿಸುತ್ತದೆ.
35. ನೀವು ಹೆಚ್ಚು ಪರಿಸರಸ್ನೇಹಿ ಆಗಲು ನಿಮ್ಮ ಹವ್ಯಾಸಗಳಲ್ಲಿ ಮಾಡಿಕೊಳ್ಳಬಹುದಾದ ಬದಲಾವಣೆಗಳೇನು?
ಉತ್ತರ:- 1. ಶಾಲೆಗೆ ನಡೆದುಕೊಂಡು ಅಥವಾ ಬೈಸಿಕಲ್ ನಲ್ಲಿ ಬರುವುದು.
2. ದೂರದ ಸ್ಥಳಗಳಿಗೆ ಹೋಗಲು ಸಾರ್ವಜನಿಕ ಸಾರಿಗೆ ಬಳಸುವುದು.
3. ಹಗಲಿನಲ್ಲಿ ವಿದ್ಯುತ್ ಬಲ್ಬ್ ಅನ್ನು ಬಳಸುವ ಬದಲು ಸೌರಬೆಳಕನ್ನು ಬಳಸುವ ವ್ಯವಸ್ಥೆ ಮಾಡಿಕೊಳ್ಳುವುದು
4.ಸಂಪನ್ಮೂಲಗಳ ಮಿತ ಬಳಕೆ, ಮರುಚಕ್ರೀಕರಣ ಮತ್ತು ಪುನರ್ ಬಳಕೆ ಮಾಡುವುದನ್ನು ಅನುಸರಿಸುವುದು.
36. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಮರು ಉದ್ದೇಶ ಇದರ ಅರ್ಥವೇನು?
ಉತ್ತರ:- ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಇದ್ದರೆ ಅದನ್ನು ಬೇರೆ ಯಾವುದೇ ಉಪಯುಕ್ತ ಉದ್ದೇಶಕ್ಕೆ ಬಳಸುವುದನ್ನು ಮರು ಉದ್ದೇಶ ಎನ್ನುವರು.
37. ಬಳಸಿದ ಕಾಗದದ ಲಕೋಟೆಗಳ ನಿರ್ವಹಣಾ ವಿಧಾನ: ಮರುಬಳಕೆ:: ಇಂಧನಗಳ ನಿರ್ವಹಣಾ ವಿಧಾನ:
A) ಮರುಚಕ್ರೀಕರಣ
B) ಮರುಉದ್ದೇಶ ಬಳಕೆ
C) ಮಿತಬಳಕೆ
D) ಬಳಕೆ ಮಾಡಲು ನಿರಾಕರಿಸುವುದು
ಉತ್ತರ:- C) ಮಿತ ಬಳಕೆ.
38. ಜಲಾನಯನ ಪ್ರದೇಶದ ನಿರ್ವಹಣೆಯು
A) ಬರಗಾಲ ಮತ್ತು ಪ್ರವಾಹ ಗಳನ್ನು ಹೆಚ್ಚಿಸುತ್ತದೆ
B) ಜಲಾನಯನ ಪ್ರದೇಶದ ಜನರ (ಸಮುದಾಯದ) ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ.
C)ಜಲಾಶಯದ ಕೆಳ ಪ್ರದೇಶದ ಜೀವವೈವಿಧ್ಯವನ್ನು ಕಡಿಮೆ ಮಾಡುತ್ತದೆ.
D. ಅರಣ್ಯನಾಶವನ್ನುನು ಹೆಚ್ಚಿಸುತ್ತದೆ.
ಉತ್ತರ:- B) ಜಲಾನಯನ ಪ್ರದೇಶದ ಜನರ (ಸಮುದಾಯದ) ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ.
39. ಸಮತಟ್ಟಾದ ಭೂ ಪ್ರದೇಶಗಳಲ್ಲಿ ಖಾದಿನ್ ಒಡ್ಡುಗಳನ್ನು ನಿರ್ಮಿಸುವುದರಿಂದ
A) ಅಂತರ್ಜಲ ಮಟ್ಟವು ಕಡಿಮೆಯಾಗುತ್ತದೆ.
B) ಅಂತರ್ಜಲ ಮಟ್ಟವು ಹೆಚ್ಚಾಗುತ್ತದೆ.
C) ಸಮೀಪದ ಪ್ರದೇಶದ ಸಸ್ಯಗಳು ಅಧಿಕ ತೇವಾಂಶದಿಂದ ನಶಿಸುತ್ತವೆ.
D)ಅಂತರ್ಜಲವು ಮಲಿನವಾಗುತ್ತದೆ.
ಉತ್ತರ:- B) ಅಂತರ್ಜಲ ಮಟ್ಟವು ಹೆಚ್ಚಾಗುತ್ತದೆ.
40. ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಒಂದು ಸಾಂಪ್ರದಾಯಿಕ ವಿಧಾನವೆಂದರೆ
A) ನೀರಿನ ಕೊಯ್ಲು ವಿಧಾನವನ್ನು ಅನುಸರಿಸುವುದು
B) ಕೈಗಾರಿಕೆಗಳ ಸ್ಥಾಪನೆಯನ್ನು ಕಡಿತಗೊಳಿಸುವುದು
C) ಪಳೆಯುಳಿಕೆ ಇಂಧನಗಳನ್ನು ಯಥೇಚ್ಛವಾಗಿ ಬಳಸುವುದು.
D)ಅರಣ್ಯಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವುದು ನಿಲ್ಲಿಸುವುದು
ಉತ್ತರ:- A) ನೀರಿನ ಕೊಯ್ಲು ವಿಧಾನವನ್ನು ಅನುಸರಿಸುವುದು
41. ಅಪ್ಪಿಕೋ ಚಳುವಳಿ ಆರಂಭವಾದ ವರ್ಷ
A) 1970 B) 1975 C) 1990 D) 1991
ಉತ್ತರ:- 1970
ಅಪ್ಪಿಕೋ ಚಳುವಳಿ:- ಮರಗಳ ರಕ್ಷಣೆಗಾಗಿ ಅವುಗಳನ್ನು ತಬ್ಬಿಕೊಂಡು ಪ್ರತಿಭಟಿಸಿದ ಚಳುವಳಿ 1970 ರಲ್ಲಿ ಘರ್ ವಾಲ್ ನ ರೆನಿ ಗ್ರಾಮದಲ್ಲಿ ಜರುಗಿತು.
42. ಅಣೆಕಟ್ಟುಗಳನ್ನು ಏಕೆ ಕಟ್ಟಲಾಗುತ್ತದೆ?
ದೊಡ್ಡ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಲು ಮತ್ತು ವಿದ್ಯುತ್ ಶಕ್ತಿ ಉತ್ಪಾದಿಸಲು ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟಲಾಗುತ್ತದೆ.
ಗಂಗಾ ನದಿ - ತೆಹ್ರಿ ಅಣೆಕಟ್ಟು :: ನರ್ಮದಾ ನದಿ - ಸರ್ದಾರ್ ಸರೋವರ ಅಣೆಕಟ್ಟು
43. ಯೂಟ್ರೋಫಿಕೇಶನ್ ಎಂದರೇನು?ನೀರಿನಲ್ಲಿ ಫಾಸ್ಪೇಟ್ ಮತ್ತು ನೈಟ್ರೇಟ್ ಅಂಶ ಹೆಚ್ಚಾಗಿ ಸೂಕ್ಷ್ಮವಾದ ತೇಲುವ ಹಸಿರು ಸಸ್ಯಗಳು ಅಗಾಧ ಪ್ರಮಾಣದಲ್ಲಿ ಬೆಳೆಯುವುದನ್ನು ಯೂಟ್ರೋಫಿಕೇಶನ್ ಎಂದು ಕರೆಯುತ್ತಾರೆ.
44. ಬೃಹತ್ ಅಣೆಕಟ್ಟುಗಳ ನಿರ್ಮಾಣದ ಸಾಮಾನ್ಯ ಸಮಸ್ಯೆಗಳು ಯಾವುವು?
ಉತ್ತರ:- 1. ಸಾಮಾಜಿಕ ಸಮಸ್ಯೆ
2.ಆರ್ಥಿಕ ಸಮಸ್ಯೆ
3. ಪರಿಸರದ ಸಮಸ್ಯೆ
45. ಅರಣ್ಯ ಸಂರಕ್ಷಣೆಯ ಪಾಲುದಾರರು ಯಾರು?
ಉತ್ತರ:- 1.ಸ್ಥಳೀಯ ಜನರು
2. ಅರಣ್ಯ ಇಲಾಖೆ
3. ಕೈಗಾರಿಕೋದ್ಯಮಿಗಳು
4. ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳು
46. ನಾವು ಅರಣ್ಯ ಹಾಗೂ ವನ್ಯಜೀವಿಗಳನ್ನು ಏಕೆ ಸಂರಕ್ಷಿಸಬೇಕು? ಅರಣ್ಯವು ವನ್ಯಜೀವಿಗಳ ತಾಣವಾಗಿದ್ದು ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದೆ. ಅರಣ್ಯಗಳಿಂದ ದೇಶದ ಆರ್ಥಿಕ ಅಭಿವೃದ್ಧಿ ಆಗುವುದರ ಜೊತೆಗೆ ಮಣ್ಣಿನ ಸವೆತವನ್ನು ತಡೆಗಟ್ಟುತ್ತವೆ. ಉತ್ತಮ ಗಾಳಿ ಮಳೆಗೆ ಅರಣ್ಯಗಳು ಕಾರಣವಾಗಿವೆ. ವನ್ಯಜೀವಿಗಳು ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುತ್ತವೆ ಮತ್ತು ಆಹಾರ ಸರಪಳಿಯ ಸಮತೋಲನಕ್ಕೆ ವನ್ಯಜೀವಿಗಳು ಅವಶ್ಯಕ ಆದ್ದರಿಂದ ನಾವು ಅರಣ್ಯ ಮತ್ತು ವನ್ಯ ಜೀವಿಗಳನ್ನು ಸಂರಕ್ಷಿಸಬೇಕು.
47. ನಿಮ್ಮ ಶಾಲೆಯನ್ನು ಪರಿಸರಸ್ನೇಹಿಯಾಗಿ ಸಲು ನೀವು ಕೆಲವು ಬದಲಾವಣೆಗಳನ್ನು ಸೂಚಿಸುವಿರಾ?
ಉತ್ತರ:- ನಮ್ಮ ಶಾಲೆಯು ಪರಿಸರ ಸ್ನೇಹಿಯಾಗಿರಲು ನಾನು ಈ ಕೆಳಗಿನ ಬದಲಾವಣೆಗಳನ್ನು ಸೂಚಿಸುತ್ತೇನೆ.
1. ಶಾಲೆಯಲ್ಲಿ ಕೈತೋಟದ ವ್ಯವಸ್ಥೆ, ಹೂವು, ಹಣ್ಣು, ತರಕಾರಿಗಳನ್ನು ಬೆಳೆಸುವುದು.
2. ಶಾಲೆಯ ಮೈದಾನದ ಸುತ್ತಲೂ ನೆರಳು ನೀಡುವ ಮರಗಳನ್ನು ಬೆಳೆಸುವುದು.
3. ಹಸಿ ತ್ಯಾಜ್ಯ, ಒಣತ್ಯಾಜ್ಯ ಗುಂಡಿಗಳನ್ನು ನಿರ್ಮಿಸಿ ಸಾವಯವ ಗೊಬ್ಬರಕ್ಕೆ ಒತ್ತು ನೀಡುವುದು.
4. ಶಾಲೆಯ ಸುತ್ತ-ಮುತ್ತ ಕಸ, ಕಡ್ಡಿ, ಪ್ಲಾಸ್ಟಿಕ್ ಗಳು ಎಲ್ಲೆಂದರಲ್ಲಿ ಹಾಕದಂತೆ ಸ್ವಚ್ಛತೆಗೆ ಒತ್ತು ನೀಡುವುದು.
48. ಪರಿಸರ ಸ್ನೇಹಿಯಾಗಿರುವಂತೆ ನಿಮ್ಮ ಮನೆಯಲ್ಲಿ ಯಾವ ಬದಲಾವಣೆಗಳು ಆಗಬೇಕೆಂದು ನೀವು ಸಲಹೆ ನೀಡುವಿರಿ?
ಉತ್ತರ:- 1. ಅಗತ್ಯ ಗಿಡಗಳನ್ನು ಬೆಳೆಸುವುದು. 2. ಆಹಾರದ ದುರ್ಬಳಕೆ ತಪ್ಪಿಸುವುದು 3. ಅಗತ್ಯ ಪ್ರಮಾಣದಲ್ಲಿ ಅವಶ್ಯಕತೆಯಿದ್ಗ ಮಾತ್ರ ವಿದ್ಯುತ್ ಬಳಸುವುದು
ನೀರನ್ನು ಮಿತವಾಗಿ ಬಳಸುವುದು ಬಟ್ಟೆ ಪಾತ್ರೆ ತೊಳೆದ ನೀರನ್ನು ಗಿಡಗಳಿಗೆ ಬಳಸುವುದು ಜಾಗದಲ್ಲಿ ತರಕಾರಿ ಬೆಳೆಸುವುದು
ಜೈವಿಕ ವಿಘಟನೆಯಾಗದ ವಸ್ತುಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸುವುದು ಮತ್ತು ಪುನರ್ ಬಳಕೆ ಮಾಡುವುದು ಚರಂಡಿ ನೀರು ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ಮಾಡುವುದು.
49. "ಅಮೃತಾದೇವಿ ಬೀಷ್ಣೋಯಿ ರಾಷ್ಟ್ರೀಯ ಪ್ರಶಸ್ತಿ"ಯನ್ನು ಭಾರತ ಸರ್ಕಾರ ಸ್ಥಾಪಿಸಿದ್ದು ಏಕೆ?
ಉತ್ತರ:- 1731 ರಲ್ಲಿ ಅಮೃತಾ ದೇವಿ ಬೀಷ್ನೋಯಿ ಇವರು ಇತರ 363 ಜನರೊಂದಿಗೆ ರಾಜಸ್ಥಾನದಲ್ಲಿರುವ ಜೋಧಪುರದ ಸಮೀಪದಲ್ಲಿರುವ ಖೇಜ್ರಾಲಿ ಹಳ್ಳಿಯಲ್ಲಿನ ಖೇಜ್ರಿ ಮರಗಳ ಉಳಿವಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದರ ಸ್ಮರಣಾರ್ಥ ಭಾರತ ಸರ್ಕಾರ "ಅಮೃತಾದೇವಿ ಬೀಷ್ಣೋಯಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿತು.
50. ಅಣೆಕಟ್ಟುಗಳ ಎರಡು ಪ್ರಮುಖ ಉಪಯೋಗಗಳನ್ನು ತಿಳಿಸಿ.
ಉತ್ತರ:- 1. ನೀರಾವರಿ ಯೋಜನೆ
2. ವಿದ್ಯುತ್ ಉತ್ಪಾದನೆ
Comments
Post a Comment