ಲೋಹಗಳು ಮತ್ತು ಅಲೋಹಗಳು
ಲೋಹಗಳು ಮತ್ತು ಅಲೋಹಗಳು ಕಲಿಕಾ ಫಲಗಳು
1.ಲೋಹಗಳ ಭೌತ ಗುಣಗಳು
2. ಲೋಹೀಯ ಕಾಂತಿ
3. ಲೋಹಗಳಿಗೆ ಉದಾಹರಣೆಗಳು
4. ಕುಟ್ಯತೆ, ತನ್ಯತೆ
5. ಶಾಬ್ದನ
ಅಲೋಹಗಳು
6.ಲೋಹಗಳ ರಾಸಾಯನಿಕ ಗುಣಗಳು
7. ಲೋಹಗಳನ್ನು ಗಾಳಿಯಲ್ಲಿ ಉರಿಸಿದಾಗ ಏನಾಗುತ್ತದೆ
8. ತಾಮ್ರವನ್ನು ಗಾಳಿಯಲ್ಲಿ ಕಾಸಿದಾಗ ಆಕ್ಸಿಜನ ಜೊತೆ ಸೇರಿ ಆಗುವ ಆಕ್ಸೈಡ್ ಯಾವುದು? 9.ಅಲ್ಯೂಮಿನಿಯಂ ಅನ್ನು ಸಹ ಗಾಳಿಯಲ್ಲಿ ಕಾಸಿದಾಗ ಅದು ಆಕ್ಸಿಜನ್ ಜೊತೆ ಸೇರಿ ಆಗುವ ಆಕ್ಸೈಡ್ ಯಾವುದು?
10. ಉಭಯವರ್ತಿ ಆಕ್ಸೈಡ್ ಗಳು ಎಂದರೇನು?
11.ಉಭಯವರ್ತಿ ಆಕ್ಸೈಡ್ ಗಳಿಗೆ ಉದಾಹರಣೆ ಕೊಡಿ.
12.ಸೋಡಿಯಂ ಅಲ್ಯೂಮಿನೇಟ್ ಹೇಗೆ ಉಂಟಾಗುತ್ತದೆ?
13.ಹೆಚ್ಚಿನ ಲೋಹದ ಆಕ್ಸೈಡ್ ಗಳು ನೀರಿನಲ್ಲಿ ಕರಗುವುದಿಲ್ಲ.
14.ಕೆಲವು ಲೋಹದ ಆಕ್ಸೈಡ್ಗಳು ನೀರಿನಲ್ಲಿ ಕರಗಿ ಕ್ಷಾರಗಳನ್ನು ಉಂಟುಮಾಡುತ್ತವೆ.
15ಸೋಡಿಯಂ ಆಕ್ಸೈಡ್ ಮತ್ತು ಪೊಟ್ಯಾಶಿಯಂ ಆಕ್ಸೈಡ್ ಗಳು ನೀರಿನಲ್ಲಿ ಕರಗಿ ಕ್ಷಾರಗಳನ್ನು ಉಂಟುಮಾಡುತ್ತವೆ.
16.ಲೋಹಗಳು ನೀರಿನ ಜೊತೆ ಪ್ರತಿವರ್ತಿಸಿದಾಗ ಏನಾಗುತ್ತದೆ?
17.ಲೋಹದ ಮೇಲೆ ಹಬೆಯ ವರ್ತನೆಯ ಚಿತ್ರವನ್ನು ಅಭ್ಯಾಸ ಮಾಡಿ.
18.ಲೋಹಗಳು ನೀರಿನ ಜೊತೆ ಪ್ರತಿವರ್ತಿಸಿದಾಗ ಲೋಹದ ಆಕ್ಸೈಡ್ ಉಂಟಾಗುತ್ತದೆ ಮತ್ತು ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ
19.ಲೋಹದ ಆಕ್ಸೈಡ್ ಗಳು ಪುನಃ ನೀರಿನಲ್ಲಿ ಕರಗಿ ಲೋಹದ ಹೈಡ್ರಾಕ್ಸೈಡ್ ಗಳಾಗುತ್ತವೆ.
20.ಎಲ್ಲಾ ಲೋಹಗಳು ನೀರಿನ ಜೊತೆ ಪ್ರತಿವರ್ತಿಸುವುದಿಲ್ಲ.
21. ಪೊಟ್ಯಾಷಿಯಂ ಮತ್ತು ಸೋಡಿಯಂ ನಂತಹ ಲೋಹಗಳು ಅತ್ಯಂತ ರಭಸವಾಗಿ ತಣ್ಣೀರಿನ ಜೊತೆ ಪ್ರತಿವರ್ತಿಸುತ್ತವೆ.
22. ಸೋಡಿಯಂ ಮತ್ತು ಪೊಟ್ಯಾಶಿಯಂ ಗಳ ಪ್ರಕರಣದಲ್ಲಿ ಪ್ರತಿವರ್ತನೆ ಬಹಳ ತೀವ್ರವಾಗಿರುತ್ತದೆ ಮತ್ತು ಬಹಿರುಷ್ಣಕ ಹಾಗಾಗಿ ಬಿಡುಗಡೆಯಾದ ಹೈಡ್ರೋಜನ್ ಅನಿಲವು ತಕ್ಷಣವೇ ಹೊತ್ತಿಕೊಂಡು ಉರಿಯುತ್ತದೆ.
23. ಆದರೆ ನೀರಿನೊಂದಿಗೆ ಕ್ಯಾಲ್ಸಿಯಂ ಪ್ರತಿವರ್ತನೆಯ ತೀವ್ರತೆ ಕಡಿಮೆ. ಬಿಡುಗಡೆಯಾಗುವ ಉಷ್ಣವು ಹೈಡ್ರೋಜನ್ ಹೊತ್ತಿಕೊಳ್ಳಲು ಸಾಕಾಗುವುದಿಲ್ಲ.
24. ಕ್ಯಾಲ್ಸಿಯಂ ನೀರಿನೊಂದಿಗೆ ಪ್ರತಿವರ್ತಿಸಿ ನೀರಿನ ಮೇಲೆ ತೇಲಲು ಕಾರಣ ಹೈಡ್ರೋಜನ್ ಅನಿಲದ ಗುಳ್ಳೆಗಳು ಲೋಹದ ಮೇಲ್ಮೈಗೆ ಅಂಟಿಕೊಂಡಿರುತ್ತವೆ.
25. ತಣ್ಣೀರಿನೊಂದಿಗೆ ಮೆಗ್ನೀಷಿಯಂ ಪ್ರತಿವರ್ತಿಸುವುದಿಲ್ಲ.
26. ಬಿಸಿ ನೀರಿನೊಂದಿಗೆ ಮೆಗ್ನೀಷಿಯಂ ಪ್ರತಿವರ್ತಿಸಿ ಮೆಗ್ನೀಷಿಯಂ ಹೈಡ್ರಾಕ್ಸೈಡ್ ಉಂಟಾಗುತ್ತದೆ. ಹೈಡ್ರೋಜನ್ ಅನಿಲ ಬಿಡುಗಡೆ ಮಾಡುತ್ತದೆ.
ಹೈಡ್ರೋಜನ್ ಅನಿಲದ ಗುಳ್ಳೆಗಳು, ಲೋಹದ ಮೇಲ್ಮೈಗೆ ಅಂಟಿಕೊಳ್ಳುವ ಕಾರಣ ಮೆಗ್ನೀಷಿಯಂ ಕೂಡ ನೀರಿನ ಮೇಲೆ ತೇಲಲು ಪ್ರಾರಂಭಿಸುತ್ತದೆ.
27. ಅಲ್ಯೂಮಿನಿಯಂ, ಕಬ್ಬಿಣ ಮತ್ತು ಸತುವಿನಂತಹ ಲೋಹಗಳು ತಣ್ಣನೆಯ ಅಥವಾ ಬಿಸಿ ನೀರಿನ ಜೊತೆ ಪ್ರತಿವರ್ತಿಸುವುದೇ ಇಲ್ಲ ಆದರೆ ಹಬೆಯ ಜೊತೆ ಪ್ರತಿವರ್ತಿಸಿ ಲೋಹದ ಆಕ್ಸೈಡ್ ಮತ್ತು ಹೈಡ್ರೋಜನ್ ಗಳನ್ನು ಉಂಟುಮಾಡುತ್ತವೆ.
28. ಸೀಸ, ತಾಮ್ರ, ಬೆಳ್ಳಿ, ಚಿನ್ನ ಇಂತಹ ಲೋಹಗಳು ನೀರಿನ ಜೊತೆ ಪ್ರತಿವರ್ತಿಸುವುದೇ ಇಲ್ಲ.
29. ಲೋಹಗಳು ಆಮ್ಲಗಳ ಜೊತೆ ಪ್ರತಿವರ್ತಿಸಿದಾಗ ಏನಾಗುತ್ತದೆ?
ಲೋಹಗಳು ಆಮ್ಲಗಳ ಜೊತೆ ಪ್ರತಿವರ್ತಿಸಿ ಲವಣ ಮತ್ತು ಹೈಡ್ರೋಜನ್ ಅನಿಲ ಉಂಟಾಗುತ್ತದೆ.
ಲೋಹ + ಸಾರರಿಕ್ತ ಆಮ್ಲ –→ ಲವಣ + ಹೈಡ್ರೋಜನ್
30. ಮೆಗ್ನೀಷಿಯಂ, ಅಲ್ಯೂಮಿನಿಯಂ, ಸತು ಮತ್ತು ಕಬ್ಬಿಣವು ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದ ಜೊತೆ ಪ್ರತಿವರ್ತಿಸುವುದರ ರಾಸಾಯನಿಕ ಸಮೀಕರಣ ಬರೆಯಿರಿ.
31. ಲೋಹವು ನೈಟ್ರಿಕ್ ಆಮ್ಲದ ಜೊತೆ ಪ್ರತಿವರ್ತಿಸಿದಾಗ ಹೈಡ್ರೋಜನ್ ಅನಿಲ ಬಿಡುಗಡೆ ಆಗುವುದಿಲ್ಲ ಏಕೆ?
ನೈಟ್ರಿಕ್ ಆಮ್ಲವು ಪ್ರಬಲ ಉತ್ಕರ್ಷಕ. ಇದು ಉತ್ಪತ್ತಿಯಾದ ಹೈಡ್ರೋಜನ್ ಅನ್ನು ಉತ್ಕರ್ಷಿಸಿ ನೀರನ್ನು ಉತ್ಪತ್ತಿ ಮಾಡುತ್ತದೆ. ಮತ್ತು ಸ್ವತಃ ಯಾವುದಾದರೊಂದು ನೈಟ್ರೋಜನ್ ಆಕ್ಸೈಡ್ ಆಗಿ ಅಪಕರ್ಷಣೆ ಹೊಂದುತ್ತದೆ.
32. ಆದರೆ ಮೆಗ್ನೀಷಿಯಂ(Mg) ಮತ್ತು ಮ್ಯಾಂಗನೀಸ್(Mn) ಗಳು ಅತಿ ಸಾರರಿಕ್ತ ನೈಟ್ರಿಕ್ ಆಮ್ಲದ ಜೊತೆ ವರ್ತಿಸಿ ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ.
ಮೆಗ್ನೀಷಿಯಂ(Mg) ನ ಪ್ರಕರಣದಲ್ಲಿ ಅನಿಲದ ಗುಳ್ಳೆಗಳು ಬಿಡುಗಡೆಯಾಗುವ ದರವು ಅತ್ಯಂತ ವೇಗವಾಗಿದೆ. ಈ ಪ್ರಕರಣದಲ್ಲಿ ಪ್ರತಿವರ್ತನೆಯು ಅತಿ ಬಹಿರುಷ್ಣಕವಾಗಿದೆ.
33. ಲೋಹಗಳ ಕ್ರಿಯಾಶೀಲತೆಯು ಈಗ Mg>Al>Zn>Fe ಈ ಶ್ರೇಣಿಯಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ.
34. ತಾಮ್ರದ ವಿಷಯದಲ್ಲಿ ಯಾವುದೇ ಗುಳ್ಳೆಗಳು ಕಂಡುಬರುವುದಿಲ್ಲ ಮತ್ತು ಉಷ್ಣತೆಯು ಯಾವ ಬದಲಾವಣೆ ಹೊಂದದೆ ಹಾಗೆಯೇ ಉಳಿಯುತ್ತದೆ. ಇದರಿಂದ ತಿಳಿಯುವುದೇನೆಂದರೆ ತಾಮ್ರವು ಸಾರರಿಕ್ತ HCl ಜೊತೆ ವರ್ತಿಸುವುದಿಲ್ಲ.
35. ರಾಜದ್ರವ ಲ್ಯಾಟಿನ್ ನಲ್ಲಿ (ಅಕ್ವಾರಿಜಿಯ aquaregia) ಎಂಬುದು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪ್ರಬಲ ನೈಟ್ರಿಕ್ ಆಮ್ಲಗಳ 3:1 ಅನುಪಾತದ ತಾಜಾ ಮಿಶ್ರಣ. ಯಾವ ಆಮ್ಲದಲ್ಲಿಯೂ ಕರಗದ ಚಿನ್ನವನ್ನು ಇದು ಕರಗಿಸುತ್ತದೆ.
ರಾಜದ್ರವವು ಸಂಕ್ಷಾರಕ (Corrosive) ಗುಣವುಳ್ಳ ಹೊಗೆಯಾಡುವ ದ್ರವ. ಚಿನ್ನ ಮತ್ತು ಮತ್ತು ಪ್ಲಾಟಿನಮ್ ಗಳನ್ನು ಕರಗಿಸಬಲ್ಲ ಕೆಲವೇ ಕೆಲವು ಕಾರಕ (agent) ಗಳಲ್ಲಿ ಇದೂ ಒಂದು.
36. ಇತರ ಲೋಹೀಯ ಲವಣದ ದ್ರಾವಣಗಳೊಂದಿಗೆ ಲೋಹಗಳು ಹೇಗೆ ಪ್ರತಿವರ್ತಿಸುತ್ತವೆ?
ರಾಸಾಯನಿಕವಾಗಿ ಕ್ರಿಯಾಪಟುತ್ವ ಹೊಂದಿದ ಧಾತುಗಳು ತಮಗಿಂತ ಕಡಿಮೆ ಕ್ರಿಯಾಪಟುತ್ವ ಹೊಂದಿದ ಧಾತುಗಳನ್ನು ಅವುಗಳ ದ್ರಾವಣ ಅಥವಾ ದ್ರವಿಸಿದ ಸಂಯುಕ್ತದಿಂದ ಸ್ಥಳಾಂತರಿಸುತ್ತವೆ.
37. ಎಲ್ಲಾ ಲೋಹಗಳು ಒಂದೇ ರೀತಿಯ ಕ್ರಿಯಾಪಟುತ್ವವನ್ನು ಹೊಂದಿಲ್ಲ.
ಕ್ರಿಯಾಶೀಲತೆಯ ಸರಣಿ:
38. ಕ್ರಿಯಾಶೀಲತೆಯ ಸರಣಿಯು ಲೋಹಗಳನ್ನು ಕ್ರಿಯಾಕಾರತ್ವದ ಆಧಾರದ ಮೇಲೆ ಇಳಿಕೆ ಕ್ರಮದಲ್ಲಿ ಜೋಡಿಸಿದ ಪಟ್ಟಿಯಾಗಿದೆ.
39. ಪೊಟ್ಯಾಷಿಯಂ ಅತ್ಯಂತ ಕ್ರಿಯಾಶೀಲ ಲೋಹ.
40. ಸೋಡಿಯಂ ಪೊಟ್ಯಾಶಿಯಂ ಗಿಂತ ಕಡಿಮೆ ಕ್ರಿಯಾಶೀಲತೆ ಹೊಂದಿದೆ.
41. ಕ್ಯಾಲ್ಸಿಯಂ ಸೋಡಿಯಂ ಗಿಂತ ಕಡಿಮೆ ಕ್ರಿಯಾಶೀಲತೆ ಹೊಂದಿದೆ.
42.ಜಡ ಅನಿಲಗಳು ಸಂಪೂರ್ಣ ಭರ್ತಿಯಾದ ವೇಲೆನ್ಸಿ ಕವಚಗಳನ್ನು ಹೊಂದಿವೆ ಹಾಗೂ ಕಡಿಮೆ ರಾಸಾಯನಿಕ ಚಟುವಟಿಕೆಯನ್ನು ತೋರುತ್ತವೆ.
43. ಲೋಹಗಳ ಕ್ರಿಯಾಶೀಲತೆ ಎಂದರೆ ಸಂಪೂರ್ಣ ಭರ್ತಿಯಾದ ವೇಲೆನ್ಸ್ ಕವಚಗಳನ್ನು ಹೊಂದುವ ಲೋಹಗಳ ಪ್ರವೃತ್ತಿ.
44. ಜಡ ಅನಿಲಗಳಿಗೆ ಉದಾಹರಣೆ.
ಹೀಲಿಯಂ,
ನಿಯಾನ್,
ಆರ್ಗಾನ್
45. ಹೀಲಿಯಂನ ಪರಮಾಣು ಸಂಖ್ಯೆ 2
46. ನಿಯಾನ್ ನ ಪರಮಾಣು ಸಂಖ್ಯೆ 10
47. ಆರ್ಗಾನ್ ನ ಪರಮಾಣು ಸಂಖ್ಯೆ 18
48. ಹೀಲಿಯಂನ K ಕವಚದಲ್ಲಿ ಎರಡು ಎಲೆಕ್ಟ್ರಾನ್ ಗಳು.
49. ನಿಯಾನ್ ನ K ಕವಚದಲ್ಲಿ ಎರಡು ಎಲೆಕ್ಟ್ರಾನ್ ಗಳು
ನಿಯಾನ್ ನ L ಕವಚದಲ್ಲಿ ಎಂಟು ಎಲೆಕ್ಟ್ರಾನ್ ಗಳು
50. ಆರ್ಗಾನ್ ನ K ಕವಚದಲ್ಲಿ ಎರಡು ಎಲೆಕ್ಟ್ರಾನ್ ಗಳು
ಆರ್ಗಾನ್ ನ L ಕವಚದಲ್ಲಿ ಎಂಟು ಎಲೆಕ್ಟ್ರಾನ್ ಗಳು
ಆರ್ಗಾನ್ ನ M ಕವಚದಲ್ಲಿ ಎಂಟು ಎಲೆಕ್ಟ್ರಾನ್ ಗಳು
51. ಸೋಡಿಯಂನ ಪರಮಾಣು ಸಂಖ್ಯೆ 11.
52. ಮೆಗ್ನೀಷಿಯಂ ನ ಪರಮಾಣು ಸಂಖ್ಯೆ 12
53. ಅಲ್ಯುಮಿನಿಯಂ ನ ಪರಮಾಣು ಸಂಖ್ಯೆ 13.
54. ಪೊಟ್ಯಾಶಿಯಂ ಪರಮಾಣು ಸಂಖ್ಯೆ 19.
55. ಕ್ಯಾಲ್ಸಿಯಂ ನ ಪರಮಾಣು ಸಂಖ್ಯೆ 20
56. ನೈಟ್ರೋಜನ್ ಪರಮಾಣು ಸಂಖ್ಯೆ 7
57. ಆಕ್ಸಿಜನ್ ನ ಪರಮಾಣು ಸಂಖ್ಯೆ 8
58. ಫ್ಲೋರಿನ್ ನ ಪರಮಾಣು ಸಂಖ್ಯೆ 9
59. ಫಾಸ್ಫರಸ್ ನ ಪರಮಾಣು ಸಂಖ್ಯೆ 15.
60. ಸಲ್ಫರ್ ನ ಪರಮಾಣು ಸಂಖ್ಯೆ 16
61. ಕ್ಲೋರಿನ್ ಪರಮಾಣು ಸಂಖ್ಯೆ 17
62. ಸೋಡಿಯಂ ಕ್ಲೋರೈಡ್ ಉಂಟಾಗುವಿಕೆ.
ಮೆಗ್ನೀಷಿಯಂ ಕ್ಲೋರೈಡ್ ಉಂಟಾಗುವಿಕೆ.
63. ಅಯಾನಿಕ ಸಂಯುಕ್ತಗಳು ಎಂದರೇನು?
64. ಅಯಾನಿಕ ಸಂಯುಕ್ತಗಳಿಗೆ ಉದಾಹರಣೆ ಕೊಡಿ
ಅಯಾನಿಕ ಸಂಯುಕ್ತಗಳಿಗೆ ಉದಾಹರಣೆ,
ಸೋಡಿಯಂ ಕ್ಲೋರೈಡ್
ಲಿಥಿಯಂ ಕ್ಲೋರೈಡ್
ಕ್ಯಾಲ್ಸಿಯಂ ಕ್ಲೋರೈಡ್
ಕ್ಯಾಲ್ಸಿಯಂ ಆಕ್ಸೈಡ್
ಮೆಗ್ನೀಷಿಯಂ ಕ್ಲೋರೈಡ್
65. ಅಯಾನಿಕ ಸಂಯುಕ್ತಗಳ ಸಾಮಾನ್ಯ ಗುಣಲಕ್ಷಣಗಳನ್ನು ಬರೆಯಿರಿ.
66. ಲೋಹಗಳ ದೊರೆಯುವಿಕೆ
ಭೂ ತೊಗಟೆಯು ಲೋಹಗಳ ಪ್ರಮುಖ ಆಕರ
ಸಮುದ್ರದಲ್ಲಿಯೂ ಕೂಡ ಸೋಡಿಯಂ ಕ್ಲೋರೈಡ್ ಮೆಗ್ನೀಷಿಯಂ ಕ್ಲೋರೈಡ್ ಇತ್ಯಾದಿಗಳಂತಹ ವಿಲೀನಗೊಂಡ ಲೋಹಗಳಿವೆ.
67. ಭೂತೊಗಟೆಯಲ್ಲಿ ನೈಸರ್ಗಿಕವಾಗಿ ದೊರೆಯುವ ಧಾತು ಅಥವಾ ಸಂಯುಕ್ತಗಳನ್ನು ಖನಿಜಗಳು ಎನ್ನುವರು.
68. ಕೆಲವು ಸ್ಥಳಗಳಲ್ಲಿನ ಖನಿಜಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಿರ್ದಿಷ್ಟ ಲೋಹವನ್ನು ಹೊಂದಿರುತ್ತವೆ. ಮತ್ತು ಇವುಗಳಿಂದ ಅದನ್ನು ಲಾಭದಾಯಕವಾಗಿ ಹೊರ ತೆಗೆಯಬಹುದು. ಈ ಖನಿಜಗಳನ್ನು ಅದಿರುಗಳು ಎನ್ನುವರು.
69. ಯಾವ ಖನಿಜಗಳಿಂದ ನಿರ್ದಿಷ್ಟ ಲೋಹವನ್ನು ಲಾಭದಾಯಕವಾಗಿ ಹೊರತೆಗೆಯಬಹುದೋ ಇಂತಹ ಖನಿಜಗಳನ್ನು ಅದುರುಗಳು ಎನ್ನುವರು.
ಲೋಹೋದ್ಧರಣ
70. ಕೆಲವು ಲೋಹಗಳು ಭೂತೊಗಟೆಯಲ್ಲಿ ಮುಕ್ತ ರೂಪದಲ್ಲಿ ದೊರೆಯುತ್ತವೆ. ಇನ್ನು ಕೆಲವು ಅವುಗಳ ಸಂಯುಕ್ತ ರೂಪದಲ್ಲಿ ದೊರೆಯುತ್ತವೆ.
ಕ್ರಿಯಾಶೀಲತೆಯ ಸರಣಿಯ ಕೆಳಭಾಗದಲ್ಲಿರುವ ಲೋಹಗಳು ಅತಿ ಕಡಿಮೆ ಕ್ರಿಯಾಪಟುತ್ವ ಹೊಂದಿವೆ.
ಹಾಗಾಗಿ ಅವುಗಳು ಕೆಲವೊಮ್ಮೆ ಮುಕ್ತ ರೂಪದಲ್ಲಿ ದೊರೆಯುತ್ತವೆ. ಉದಾಹರಣೆಗೆ ಚಿನ್ನ ಬೆಳ್ಳಿ ಪ್ಲಾಟಿನಂ ಮತ್ತು ತಾಮ್ರಗಳು ಮುಕ್ತ ಸ್ಥಿತಿಯಲ್ಲಿ ದೊರೆಯುತ್ತವೆ.
71. ತಾಮ್ರ ಮತ್ತು ಬೆಳ್ಳಿ ಅವುಗಳ ಸಂಯೋಜಿತ ರೂಪವಾದ ಸಲ್ಫೈಡ್ ಮತ್ತು ಆಕ್ಸೈಡ್ ಅದುರುಗಳ ರೂಪದಲ್ಲಿಯೂ ದೊರೆಯುತ್ತವೆ.
72. ಪೊಟ್ಯಾಷಿಯಂ, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಅಲ್ಯೂಮಿನಿಯಂ ಈ ಲೋಹಗಳು ನಿಸರ್ಗದಲ್ಲಿ ಮುಕ್ತ ಧಾತುಗಳಾಗಿ ಏಕೆ ದೊರೆಯುವುದಿಲ್ಲ?
ಕ್ರಿಯಾಶೀಲ ಸರಣಿಯ ಮೇಲ್ಭಾಗದಲ್ಲಿರುವ ಲೋಹಗಳಾದ ಪೊಟ್ಯಾಷಿಯಂ, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಅಲ್ಯೂಮಿನಿಯಂ ಹೆಚ್ಚು ಕ್ರಿಯಾಪಟುತ್ವ ಹೊಂದಿರುವುದರಿಂದ ನಿಸರ್ಗದಲ್ಲಿ ಮುಕ್ತ ಧಾತುಗಳಾಗಿ ದೊರೆಯುವುದಿಲ್ಲ.
73. ಕ್ರಿಯಾಶೀಲ ಸರಣಿಯ ಮಧ್ಯಭಾಗದಲ್ಲಿರುವ ಸತು, ಕಬ್ಬಿಣ, ಸೀಸ ಇತ್ಯಾದಿ ಲೋಹಗಳು ಮಧ್ಯಮ ಕ್ರಿಯಾಪಟುತ್ವ ಹೊಂದಿವೆ.
ಹಾಗಾಗಿ ಅವು ಭೂ ತೊಗಟೆಯಲ್ಲಿ ಆಕ್ಸೈಡ್ ಗಳು ಸಲ್ಫೈಡ್ ಗಳು ಅಥವಾ ಕಾರ್ಬೋನೇಟ್ ಗಳ ರೂಪದಲ್ಲಿ ದೊರೆಯುತ್ತವೆ. ಏಕೆಂದರೆ ಆಕ್ಸಿಜನ್ ಹೆಚ್ಚಿನ ಕ್ರಿಯಾಶೀಲ ಧಾತುವಾಗಿದ್ದು ಅದು ಭೂ ತೊಗಟೆಯಲ್ಲಿ ಹೇರಳವಾಗಿದೆ.
74. ಕ್ರಿಯಾಶೀಲತೆಯ ಆಧಾರದ ಮೇಲೆ ನಾವು ಲೋಹಗಳನ್ನು ಎಷ್ಟು ಗುಂಪುಗಳಾಗಿ ಮಾಡಬಹುದು?
ಕ್ರಿಯಾಶೀಲತೆಯ ಆಧಾರದ ಮೇಲೆ ನಾವು ಲೋಹಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು.
(i) ಕಡಿಮೆ ಕ್ರಿಯಾಪಟುತ್ವ ಹೊಂದಿರುವ ಲೋಹಗಳು
(ii) ಮಧ್ಯಮ ಕ್ರಿಯಾಪಟುತ್ವ ಹೊಂದಿರುವ ಲೋಹಗಳು
(iii) ಹೆಚ್ಚಿನ ಕ್ರಿಯಾಪಟುತ್ವ ಹೊಂದಿರುವ ಲೋಹಗಳು ಪ್ರತಿಯೊಂದು ಗುಂಪಿನ ಲೋಹಗಳನ್ನು ವಿಭಿನ್ನ ತಂತ್ರಗಳನ್ನು ಬಳಸಿ ಪಡೆಯಲಾಗುತ್ತದೆ
75. ಅದುರುಗಳಿಂದ ಶುದ್ಧ ಲೋಹವನ್ನು ಉದ್ದರಿಸಲು ಅನೇಕ ಹಂತಗಳಿವೆ.
ಹೆಚ್ಚಿನ ಕ್ರಿಯಾಪಟು ಲೋಹಗಳನ್ನು ಅವುಗಳ ದ್ರವಿಸಿದ ಅಧುರಿನ ವಿದ್ಯುತ್ ವಿಭಜನೆಯ/ ವಿದ್ಯುದ್ವಿಭಜನೆಯ ಮೂಲಕ ಶುದ್ಧ ಲೋಹವನ್ನು ಪಡೆಯಲಾಗುತ್ತದೆ.
76. ಮಧ್ಯಮ ಕ್ರಿಯಾಪಟು ಲೋಹಗಳು ಕಾರ್ಬೋನೇಟ್ ಆದರು ಅಥವಾ ಸಲ್ಫೈಡ್ ಅದುರುಗಳ ರೂಪದಲ್ಲಿ ದೊರೆಯುತ್ತವೆ.
ಮಧ್ಯಮ ಕ್ರಿಯಾಪಟು ಲೋಹಗಳನ್ನು ಕಾರ್ಬೋನೇಟ್ ಅದುರಿನಿಂದ ಕಾಸುವಿಕೆಯ ಮೂಲಕ ಉದ್ಧರಿಸಲಾಗುತ್ತದೆ.
77. ಮಧ್ಯಮ ಕ್ರಿಯಾಪಟು ಲೋಹಗಳನ್ನು ಸಲ್ಫೈಡ್ ಅದುರಿನಿಂದ ಹುರಿಯುವಿಕೆಯ ಮೂ
ಲಕ ಉದ್ಧರಿಸಲಾಗುತ್ತದೆ.
78. ಕಾಸುವಿಕೆ ಮತ್ತು ಹುರಿಯುವಿಕೆಯಿಂದ ಲೋಹೀಯ ಆಕ್ಸೈಡ್ ಗಳು ಉಂಟಾಗುತ್ತವೆ. ಅವುಗಳನ್ನು ಅಪಕರ್ಷಿಸಿದಾಗ ಲೋಹ ದೊರೆಯುತ್ತದೆ.
Comments
Post a Comment