1. ಬೆಳೆ ಎಂದರೇನು? ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ. ಉದಾಹರಣೆಗೆ, ಗೋಧಿಯ ಬೆಳೆ ಎಂದರೆ, ಒಂದು ಜಮೀನಿನಲ್ಲಿ ಬೆಳೆಯುವ ಎಲ್ಲ ಸಸ್ಯಗಳು ಗೋಧಿಯ ಸಸ್ಯಗಳು ಎಂದರ್ಥ. 2. ಬೆಳೆಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು? ಬೆಳೆಗಳಲ್ಲಿ ಮೂರು ವಿಧಗಳಿವೆ. ಅವು ಯಾವುವೆಂದರೆ- ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳು. 3. ಯಾವ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು? ಭತ್ತದ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು. 4. ಕೃಷಿ ಪದ್ಧತಿಗಳು ಎಂದರೇನು? ಬೆಳೆಗಳ ಕೃಷಿಗಾಗಿ ರೈತರು ಕೈಗೊಳ್ಳುವ ಚಟುವಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ್ಧತಿಗಳು ಎನ್ನುವರು. 5 ಕೃಷಿ ಪದ್ಧತಿ ಗಳನ್ನು ಹೆಸರಿಸಿ. ಎ. ಮಣ್ಣನ್ನು ಹದಗೊಳಿಸುವಿಕೆ ಬಿ. ಬಿತ್ತನೆ ಸಿ. ಸಾವಯವ ಗೊಬ್ಬರಗಳು ಮತ್ತು ರಸಗೊಬ್ಬರಗಳನ್ನು ಸೇರಿಸುವುದು. ಡಿ. ನೀರಾವರಿ. ಇ. ಕಳೆಗಳಿಂದ ರಕ್ಷಣೆ ಎಫ್. ಕೊಯ್ಲು. ಜಿ. ಸಂಗ್ರಹಣೆ. 6. ಮಣ್ಣು ಒಳಗೊಂಡಿರುವ ಅಂಶಗಳನ್ನು ಹೆಸರಿಸಿ. ಖನಿಜಗಳು, ನೀರು, ಗಾಳಿ ಮತ್ತು ಕೆಲವು ಜೀವಿಗಳನ್ನು ಮಣ್ಣು ಒಳಗೊಂಡಿದೆ. 7. ಕೃಷಿಯ ಮೊದಲ ಹಂತ ಯಾವುದು? ಮಣ್ಣನ್ನು ಹದಗೊಳಿಸುವುದು. 8. ಕೃಷಿಯಲ್ಲಿನ ಬಹು ಮುಖ್ಯ ಕಾರ್ಯ ಯಾವುದು? ಕೃಷಿಯಲ್ಲಿನ ಬಹು ಮುಖ್ಯ ಕಾರ್ಯ ಯಾವುದೆಂದರೆ, ಮಣ್ಣನ್ನು ತಿರುವಿ ಹಾಕುವುದು ಮತ್ತು ಅದನ್ನು ಸಡಿಲಗೊಳಿ...