ಅಭ್ಯಾಸ ಮಾಡಿ -5
ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ, ಭದ್ರಾವತಿ-577 245 1.ತಾಮ್ರದ ಕ್ಲೋರೈಡ್ ನ ಬಣ್ಣವೇನು? ನೀಲಿ-ಹಸಿರು 2. ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎಂದರೇನು? ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎನ್ನುವರು. 3. ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎಂದು ಏಕೆ ಕರೆಯುತ್ತಾರೆ? ಆಮ್ಲಗಳೊಂದಿಗೆ ಲೋಹೀಯ ಆಕ್ಸೈಡ್ ಗಳ ವರ್ತನೆ, ಆಮ್ಲಗಳೊಂದಿಗೆ ಪ್ರತ್ಯಾಮ್ಲಗಳ ವರ್ತನೆಯಂತೆಯೇ ಇರುವುದರಿಂದ ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎನ್ನುವರು. 4. ಲೋಹಿಯಾ ಆಕ್ಸೈಡ್ ಗಳಿಗೆ ಒಂದು ಉದಾಹರಣೆ ಕೊಡಿ. ತಾಮ್ರದ ಆಕ್ಸೈಡ್. 5. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳನ್ನು ಹೆಸರಿಸಿ. ಲವಣ ಮತ್ತು ನೀರು. 6. ಅಲೋಹದ ಆಕ್ಸೈಡ್ ಗಳು ಆಮ್ಲೀಯ ಗುಣ ಹೊಂದಿವೆ ಎನ್ನಲು ಕಾರಣವೇನು? ಪ್ರತ್ಯಾಮ್ಲವಾದ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಉತ್ಪತ್ತಿ ಮಾಡುತ್ತದೆ. ಇದು ಪ್ರತ್ಯಾಮ್ಲ ಮತ್ತು ಆಮ್ಲಗಳ ನಡುವಿನ ಕ್ರಿಯೆಯಂತೆಯೇ ಆಗಿರುವುದರಿಂದ ಅಲೋಹದ ಆಕ್ಸೈಡ್ ಗಳು ಆಮ್ಲೀಯ ಗುಣ ಹೊಂದಿವೆ ಎನ್ನುವರು. 7. ಆಮ್ಲಗಳು ದ್ರಾವಣದಲ್ಲಿ ಯಾವ ಅಯಾನುಗಳನ್ನು ಉಂಟುಮಾಡುತ್ತವೆ? ಆಮ್ಲಗಳು ದ್ರಾವಣದಲ್ಲಿ ಹೈಡ್ರೋಜನ್ ಅಯಾನುಗಳನ್ನು ಉಂಟುಮಾಡುತ್ತವೆ 8. ಹೈಡ್ರೋನಿಯಂ ಅಯ...