Posts

3 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.

  01/05/2021 WINNERS RULE THE WORLD  LOVE CHEMISTRY  BECAUSE  H ydrogen being a highly inflammable gas and oxygen being a supporter of combustion, yet water which is a compound made up of hydrogen and oxygen is used to extinguish fire. I LOVE SCIENCE AND S. S. L. C.   ವಿಜ್ಞಾನ ವಿಷಯ ನಮ್ಮದು! ಎಸ್.‌ ಎಸ್.‌ ಎಲ್.‌ ಸಿ. ಪರೀಕ್ಷೆ ನಮ್ಮದು!  ಧಾತುಗಳ ಆವರ್ತನೀಯ ವರ್ಗೀಕರಣ 1. ಧಾತು ಎಂದರೇನು?  ಉತ್ತರ:-  ಒಂದೇ ರೀತಿಯ ಪರಮಾಣುಗಳಿಂದಾದ ವಸ್ತುವನ್ನು ಧಾತು ಎನ್ನುವರು. 2.  ವೈಜ್ಞಾನಿಕವಾಗಿ ಪರಿಶುದ್ಧ ವಸ್ತುಗಳು ಯಾವುವು? ಉತ್ತರ:- ಧಾತುಗಳು ಅಥವಾ ಮೂಲವಸ್ತುಗಳೆಲ್ಲವೂ ಪರಿಶುದ್ಧ ವಸ್ತುಗಳು. 3. ಧಾತುಗಳಿಗೆ ಉದಾಹರಣೆ ಕೊಡಿ. ಉತ್ತರ:-  ಹೈಡ್ರೋಜನ್‌, ಕಾರ್ಬನ್‌, ಆಕ್ಸಿಜನ್‌, ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ಮೆಗ್ನೀಸಿಯಂ ಇತ್ಯಾದಿ. 4. ಆವರ್ತಕ ಕೋಷ್ಟಕ ಎಂದರೇನು? ಉತ್ತರ:- ಧಾತುಗಳನ್ನು ಅವುಗಳ   ಪ್ರಮುಖ ಗುಣಲಕ್ಷಣಗಳ   ಆಧಾರದ ಮೇಲೆ ವರ್ಗೀಕರಿಸಲ್ಪಟ್ಟಿರುವ ಧಾತುಗಳ ಗುಂಪು. 5. ಡೋಬರೈನರ್ ನ ತ್ರಿವಳಿಗಳ ನಿಯಮ ಬರೆಯಿರಿ. ಉತ್ತರ:- ಮೂರು ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ ಅವುಗಳಲ್ಲಿ ಮಧ್ಯದ ಧಾತುವಿನ ಪರಮಾಣು ರಾಶಿಯು ಉಳಿದೆರಡು ...

2 ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.

                                                  30/04/2021 I LOVE SCIENCE AND S. S. L. C.   ವಿಜ್ಞಾನ ವಿಷಯ ನಮ್ಮದು! ಎಸ್.‌ ಎಸ್.‌ ಎಲ್.‌ ಸಿ. ಪರೀಕ್ಷೆ ನಮ್ಮದು!  1. ವಿದ್ಯುತ್ ಮಂಡಲ ಎಂದರೇನು?  ಉತ್ತರ:- ವಿದ್ಯುತ್ ಪ್ರವಾಹದ  ನಿರಂತರ ಮತ್ತು ಆವೃತ ಮಾರ್ಗವನ್ನು ವಿದ್ಯುತ್ ಮಂಡಲ ಎನ್ನುವರು. 2. ವಿದ್ಯುತ್ ಪ್ರವಾಹ ಎಂದರೇನು?   ಉತ್ತರ:-  ಒಂದು ಏಕಮಾನ ಕಾಲದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಮಾಣ ಅಥವಾ ವಿದ್ಯುದಾವೇಶಗಳ ಪ್ರವಾಹದ ದರವನ್ನು ವಿದ್ಯುತ್ಪ್ರವಾಹ ಎನ್ನುವರು. 3. ವಿದ್ಯುತ್ ಪ್ರವಾಹದ SI ಏಕಮಾನ ಏನು? ಉತ್ತರ:-  ಆಂಪೇರ್ 4 ವಿದ್ಯುತ್ ಪ್ರವಾಹವನ್ನು ಅಳೆಯುವ ಉಪಕರಣ ಯಾವುದು? ಉತ್ತರ:-  ವಿದ್ಯುತ್ ಪ್ರವಾಹವನ್ನು ಅಳೆಯುವ ಉಪಕರಣ ಅಮ್ಮೀಟರ್ 5  ಅಮ್ಮೀಟರ್ ಅನ್ನು  ವಿದ್ಯುನ್ಮಂಡಲದಲ್ಲಿ ಹೇಗೆ ಜೋಡಿಸುತ್ತಾರೆ? ಉತ್ತರ:-  ಅಮ್ಮೀಟರ್ ಅನ್ನು  ವಿದ್ಯುನ್ಮಂಡಲದಲ್ಲಿ  ಸರಣಿಯಲ್ಲಿ ಜೋಡಿಸುತ್ತಾರೆ. 6 ವಿದ್ಯುತ್ ಆವೇಶದ SI ಏಕಮಾನ ಏನು? ಉತ್ತರ:-  ಕೂಲಮ್ (C) 7 ಒಂದು ಕೂಲಮ್ (C) ಎಷ್ಟು ಇಲೆಕ್ಟ್ರಾನ್ ಗಳಿಗೆ ಸಮ? ಉತ್ತ...

1. ನಾನು ಕೂಡ ವಿಜ್ಞಾನ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತೇನೆ.

I LOVE SCIENCE AND S. S. L. C.   ವಿಜ್ಞಾನ ವಿಷಯ ನಮ್ಮದು! ಎಸ್.‌ ಎಸ್.‌ ಎಲ್.‌ ಸಿ. ಪರೀಕ್ಷೆ ನಮ್ಮದು!  1. ನೈಸರ್ಗಿಕ ಸಂಪನ್ಮೂಲಗಳು ಎಂದರೇನು?                                                                           29/04/2021 ಉತ್ತರ:- ಪಕೃತಿಯಲ್ಲಿ ದೊರಕುವ ಮಾನವನಿಗೆ ಉಪಯುಕ್ತವಾದ ವಸ್ತುಗಳನ್ನು ನೈಸರ್ಗಿಕ ಸಂಪನ್ಮೂಲಗಳು ಎನ್ನುವರು. 2. ನೈಸರ್ಗಿಕ ಸಂಪನ್ಮೂಲಗಳಲ್ಲಿ ಎಷ್ಟು ವಿಧ? ಅವು ಯಾವುವು? ಉತ್ತರ:- ನೈಸರ್ಗಿಕ ಸಂಪನ್ಮೂಲಗಳಲ್ಲಿ 2 ವಿಧ.  ಅವು ಯಾವುವೆಂದರೆ- 1. ಮುಗಿದು ಹೋಗುವ ಸಂಪನ್ಮೂಲಗಳು, ಉದಾಹರಣೆ:-                                                      1ಕಲ್ಲಿದ್ದಲು,          2.  ಪೆಟ್ರೋಲಿಯಂ,       ...

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು

 ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ ಎಂದರೇನು? ವಿದ್ಯುತ್ ಪ್ರವಾಹವಿರುವ ವಾಹಕವು ತನ್ನ ಸುತ್ತ ಕಾಂತಕ್ಷೇತ್ರವನ್ನುಂಟು ಮಾಡುವುದು. ಇದನ್ನು ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ ಎನ್ನುವರು.

ಅಭ್ಯಾಸ ಮಾಡಿ -5

 ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ, ಭದ್ರಾವತಿ-577 245 1.ತಾಮ್ರದ ಕ್ಲೋರೈಡ್ ನ ಬಣ್ಣವೇನು?    ನೀಲಿ-ಹಸಿರು 2. ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎಂದರೇನು? ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎನ್ನುವರು. 3. ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎಂದು ಏಕೆ ಕರೆಯುತ್ತಾರೆ? ಆಮ್ಲಗಳೊಂದಿಗೆ ಲೋಹೀಯ ಆಕ್ಸೈಡ್ ಗಳ ವರ್ತನೆ, ಆಮ್ಲಗಳೊಂದಿಗೆ ಪ್ರತ್ಯಾಮ್ಲಗಳ  ವರ್ತನೆಯಂತೆಯೇ ಇರುವುದರಿಂದ ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎನ್ನುವರು. 4. ಲೋಹಿಯಾ ಆಕ್ಸೈಡ್ ಗಳಿಗೆ ಒಂದು ಉದಾಹರಣೆ ಕೊಡಿ. ತಾಮ್ರದ ಆಕ್ಸೈಡ್. 5. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳನ್ನು ಹೆಸರಿಸಿ. ಲವಣ ಮತ್ತು ನೀರು. 6. ಅಲೋಹದ ಆಕ್ಸೈಡ್ ಗಳು ಆಮ್ಲೀಯ ಗುಣ ಹೊಂದಿವೆ ಎನ್ನಲು ಕಾರಣವೇನು? ಪ್ರತ್ಯಾಮ್ಲವಾದ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಉತ್ಪತ್ತಿ ಮಾಡುತ್ತದೆ. ಇದು ಪ್ರತ್ಯಾಮ್ಲ ಮತ್ತು ಆಮ್ಲಗಳ ನಡುವಿನ ಕ್ರಿಯೆಯಂತೆಯೇ ಆಗಿರುವುದರಿಂದ ಅಲೋಹದ ಆಕ್ಸೈಡ್ ಗಳು ಆಮ್ಲೀಯ ಗುಣ ಹೊಂದಿವೆ ಎನ್ನುವರು. 7. ಆಮ್ಲಗಳು ದ್ರಾವಣದಲ್ಲಿ ಯಾವ ಅಯಾನುಗಳನ್ನು ಉಂಟುಮಾಡುತ್ತವೆ? ಆಮ್ಲಗಳು ದ್ರಾವಣದಲ್ಲಿ ಹೈಡ್ರೋಜನ್ ಅಯಾನುಗಳನ್ನು ಉಂಟುಮಾಡುತ್ತವೆ 8. ಹೈಡ್ರೋನಿಯಂ ಅಯ...

ಅಭ್ಯಾಸ ಮಾಡಿ - 4

 ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ ಭದ್ರಾವತಿ - 577 245 1.ಕ್ಯಾಲ್ಸಿಯಂ ಕಾರ್ಬೋನೇಟ್ ನ ಅಣುಸೂತ್ರ ಬರೆಯಿರಿ, CaCO3 2. ನೀರಿನ ಅಣುಸೂತ್ರ ಬರೆಯಿರಿ. H2O 3. ಕಾರ್ಬನ್ ಡೈಯಾಕ್ಸೈಡ್ ನ ಅಣುಸೂತ್ರ ಬರೆಯಿರಿ. CO2 4. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. Ca(OH)2 5. ಸುಣ್ಣದ ತಿಳಿನೀರಿನ ಅಣುಸೂತ್ರ ಬರೆಯಿರಿ. Ca(OH)2 6. ಸೋಡಿಯಂ ಕ್ಲೋರೈಡ್ ನ ಅಣುಸೂತ್ರ ಬರೆಯಿರಿ. NaCl. 7. ಸೋಡಿಯಂ ಬೈಕಾರ್ಬೋನೇಟ್ ನ ಅಣುಸೂತ್ರ ಬರೆಯಿರಿ. NaHCO3 8. ಕ್ಯಾಲ್ಶಿಯಂ ಕಾರ್ಬೋನೇಟ್ ನ ವಿವಿಧ ರೂಪಗಳನ್ನು ಹೆಸರಿಸಿ. ಸುಣ್ಣದಕಲ್ಲು  ಸೀಮೆಸುಣ್ಣ  ಅಮೃತಶಿಲೆ 9. ತಟಸ್ಥೀಕರಣ ಕ್ರಿಯೆ ಎಂದರೇನು? ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಕ್ರಿಯೆ ಲವಣ ಮತ್ತು ನೀರು ಉಂಟು ಮಾಡುವುದನ್ನು ತಟಸ್ಥೀಕರಣ ಕ್ರಿಯೆ ಎನ್ನುವರು. 10. ಲೋಹೀಯ ಆಕ್ಸೈಡ್ ಗಳು ಆಮ್ಲಗಳೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳನ್ನು ಹೆಸರಿಸಿ. ಲವಣ ಮತ್ತು ನೀರು. ######

ಅಭ್ಯಾಸ ಮಾಡಿ - 3

 ಸರ್ಕಾರಿ ಪ್ರೌಢಶಾಲೆ ಮಾವಿನಕೆರೆ ಕಾಲೋನಿ ಭದ್ರಾವತಿ -577 245 1.ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಯಾವುವು? ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಆಮ್ಲಗಳು. 2. ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಯಾವುವು? ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಪ್ರತ್ಯಾಮ್ಲಗಳು. 3. ನೈಸರ್ಗಿಕ ಸೂಚಕಗಳಿಗೆ ಎರಡು ಉದಾಹರಣೆ ಕೊಡಿ. ಲಿಟ್ಮಸ್ ಅರಿಷಿಣ 4. ಸಂಶ್ಲೇಷಿತ ಸೂಚಕಗಳಿಗೆ ಎರಡು ಉದಾಹರಣೆ ಕೊಡಿ. ಮೀಥೈಲ್ ಆರೆಂಜ್ ಮತ್ತು ಫೀನಾಫ್ತಲೀನ್ 5. ಹೈಡ್ರೋಕ್ಲೋರಿಕ್ ಆಮ್ಲದ ಅಣುಸೂತ್ರ ಬರೆಯಿರಿ. HCl 6 ಸಲ್ಫ್ಯೂರಿಕ್ ಆಮ್ಲದ ಅಣುಸೂತ್ರ ಬರೆಯಿರಿ. H2SO4 7. ಗಂಧಕಾಮ್ಲದ ಅಣುಸೂತ್ರ ಬರೆಯಿರಿ. H2SO4 8. ನೈಟ್ರಿಕ್ ಆಮ್ಲದ ಅಣುಸೂತ್ರ ಬರೆಯಿರಿ. HNO3 9. ಅಸಿಟಿಕ್ ಆಮ್ಲದ ಅಣುಸೂತ್ರ ಬರೆಯಿರಿ. CH3COOH 10. ಸೋಡಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. NaOH 11. ಪೊಟ್ಯಾಷಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. KOH 12. ಮೆಗ್ನೀಷಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. Mg(OH)2 13. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. Ca(OH)2 14. ಪ್ರತ್ಯಾಮ್ಲ ಗಳಿಗೆ ಉದಾಹರಣೆ ಕೊಡಿ. ಕ್ಯಾಲ್ಸಿಯಂ ಹೈಡ್ರಾಕ್ಸೈಡ್  ಸೋಡಿಯಂ ಹೈಡ್ರಾಕ್ಸೈಡ್  ಪೊಟ್...