8th 1ನೇ ಅಧ್ಯಾಯ
1.. ಭತ್ತವನ್ನು ಚಳಿಗಾಲದಲ್ಲಿ ಬೆಳೆಯದಿರಲು ಕಾರಣವೇನು? ಭತ್ತದ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು ಆದ್ದರಿಂದ ಇದನ್ನು ಮಳೆಗಾಲದಲ್ಲಿ ಮಾತ್ರ ಬೆಳೆಯಲಾಗುತ್ತದೆ. 2. ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಯಾವುವು? ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಕುರ್ಪಿ, ಕುಡುಗೋಲು ಸಲಿಕೆ, ನೇಗಿಲು ಇತ್ಯಾದಿ. 3. ಬೆಳೆ ಎಂದರೇನು? ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ. 4. ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯ ಇದೆಯೇ? ಹೌದು, ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯವಿದೆ. 5. ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಅಧ್ಯಾಯದಲ್ಲಿ ಬರುವ ಪ್ರಮುಖ ಪದಗಳನ್ನು ಹೆಸರಿಸಿ. ಕೃಷಿ ಪದ್ಧತಿಗಳು, ಪಶುಸಂಗೋಪನೆ ಬೆಳೆ ರಸಗೊಬ್ಬರಗಳು ಗೋದಾಮುಗಳು ಕೊಯ್ಲು ನೀರಾವರಿ ಖಾರಿಫ್ ಸಾವಯವ ಗೊಬ್ಬರ ನೇಗಿಲು ರಬಿ ಬೀಜಗಳು ಸಂಗ್ರಹಾಗಾರ ಬಿತ್ತನೆ ಸಂಗ್ರಹಣೆ ಒಕ್ಕಣೆ ಕಳೆಗಳು ಕಳೆನಾಶಕ ತೂರುವಿಕೆ. 6. ಕೃಷಿ ಪದ್ಧತಿಗಳು ಎಂದರೇನು? ಬೆಳೆಗಳ ಕೃಷಿಯು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ರೈತರು ಕೈಗೊಳ್ಳುವ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ, ಈ ಚಟುವಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ್ಧತಿಗಳು ಎನ್ನುವರು. 7. ಕೃಷಿ ಪದ್ಧತಿಗಳನ್ನು ಪಟ್ಟಿ ಮಾಡಿ. ಮಣ್ಣನ್ನು ಹದಗೊಳಿಸುವಿಕೆ...