ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ, ಭದ್ರಾವತಿ. -577 245 1.ನೈಸರ್ಗಿಕವಾಗಿ ದೊರಕುವ ಆಮ್ಲಗಳನ್ನು ಹೆಸರಿಸಿ. 1. ಅಸಿಟಿಕ್ ಆಮ್ಲ, 2. ಸಿಟ್ರಿಕ್ ಆಮ್ಲ, 3. ಟಾರ್ಟಾರಿಕ್ ಆಮ್ಲ, 4. ಆಕ್ಸಾಲಿಕ್ ಆಮ್ಲ, 5. ಲ್ಯಾಕ್ಟಿಕ್ ಆಮ್ಲ, 6. ಮಥೆನಾಯಿಕ್ ಆಮ್ಲ. 2. ವಿನೆಗರ್ ನಲ್ಲಿ ಇರುವ ಆಮ್ಲ ಯಾವುದು? ಅಸಿಟಿಕ್ ಆಮ್ಲ. 3.ಕಿತ್ತಳೆ ಹಣ್ಣಿನ ರಸದಲ್ಲಿರವ ಆಮ್ಲ ಯಾವುದು? ಸಿಟ್ರಿಕ್ ಆಮ್ಲ. 4. ನಿಂಬೆಹಣ್ಣಿನ ರಸದಲ್ಲಿರುವ ಯಾವುದು? ಸಿಟ್ರಿಕ್ ಆಮ್ಲ. 5. ಹುಣಿಸೆಹಣ್ಣಿನ ರಸದಲ್ಲಿರುವ ಆಮ್ಲ ಯಾವುದು? ಟಾರ್ಟಾರಿಕ್ ಆಮ್ಲ. 6. ಟೊಮ್ಯಾಟೊ ಹಣ್ಣಿನ ರಸದಲ್ಲಿರುವ ಆಮ್ಲ ಯಾವುದು? ಆಕ್ಸಾಲಿಕ್ ಆಮ್ಲ. 7. ಮೊಸರಿನಲ್ಲಿರುವ ಆಮ್ಲ ಯಾವುದು? ಲ್ಯಾಕ್ಟಿಕ್ ಆಮ್ಲ. 8. ಇರುವೆ ಕಡಿತದಿಂದಾಗುವ ನೋವಿಗೆ ಕಾರಣವಾದ ಆಮ್ಲ ಯಾವುದು? ಮೆಥೆನಾಯಿಕ್ ಆಮ್ಲ. 9. ತುರಿಕೆ ಎಲೆ ಕಡಿತದಿಂದಾಗುವ ನೋವಿಗೆ ಕಾರಣವಾದ ಆಮ್ಲ ಯಾವುದು? ಮೆಥೆನಾಯಿಕ್ ಆಮ್ಲ. 10. ಹಲ್ಲಿನ ಸವೆತ ಯಾವಾಗ ಪ್ರಾರಂಭವಾಗುತ್ತದೆ? ಬಾಯಿಯಲ್ಲಿ pH ಮೌಲ್ಯ 5.5 ಕ್ಕಿಂತ ಕಡಿಮೆಯಾದಾಗ ಹಲ್ಲಿನ ಸವೆತ ಪ್ರಾರಂಭವಾಗುತ್ತದೆ.