Posts

ಅಭ್ಯಾಸ ಮಾಡಿ -5

 ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ, ಭದ್ರಾವತಿ-577 245 1.ತಾಮ್ರದ ಕ್ಲೋರೈಡ್ ನ ಬಣ್ಣವೇನು?    ನೀಲಿ-ಹಸಿರು 2. ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎಂದರೇನು? ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎನ್ನುವರು. 3. ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎಂದು ಏಕೆ ಕರೆಯುತ್ತಾರೆ? ಆಮ್ಲಗಳೊಂದಿಗೆ ಲೋಹೀಯ ಆಕ್ಸೈಡ್ ಗಳ ವರ್ತನೆ, ಆಮ್ಲಗಳೊಂದಿಗೆ ಪ್ರತ್ಯಾಮ್ಲಗಳ  ವರ್ತನೆಯಂತೆಯೇ ಇರುವುದರಿಂದ ಲೋಹೀಯ ಆಕ್ಸೈಡ್ ಗಳನ್ನು ಪ್ರತ್ಯಾಮ್ಲೀಯ ಆಕ್ಸೈಡ್ ಗಳು ಎನ್ನುವರು. 4. ಲೋಹಿಯಾ ಆಕ್ಸೈಡ್ ಗಳಿಗೆ ಒಂದು ಉದಾಹರಣೆ ಕೊಡಿ. ತಾಮ್ರದ ಆಕ್ಸೈಡ್. 5. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳನ್ನು ಹೆಸರಿಸಿ. ಲವಣ ಮತ್ತು ನೀರು. 6. ಅಲೋಹದ ಆಕ್ಸೈಡ್ ಗಳು ಆಮ್ಲೀಯ ಗುಣ ಹೊಂದಿವೆ ಎನ್ನಲು ಕಾರಣವೇನು? ಪ್ರತ್ಯಾಮ್ಲವಾದ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಉತ್ಪತ್ತಿ ಮಾಡುತ್ತದೆ. ಇದು ಪ್ರತ್ಯಾಮ್ಲ ಮತ್ತು ಆಮ್ಲಗಳ ನಡುವಿನ ಕ್ರಿಯೆಯಂತೆಯೇ ಆಗಿರುವುದರಿಂದ ಅಲೋಹದ ಆಕ್ಸೈಡ್ ಗಳು ಆಮ್ಲೀಯ ಗುಣ ಹೊಂದಿವೆ ಎನ್ನುವರು. 7. ಆಮ್ಲಗಳು ದ್ರಾವಣದಲ್ಲಿ ಯಾವ ಅಯಾನುಗಳನ್ನು ಉಂಟುಮಾಡುತ್ತವೆ? ಆಮ್ಲಗಳು ದ್ರಾವಣದಲ್ಲಿ ಹೈಡ್ರೋಜನ್ ಅಯಾನುಗಳನ್ನು ಉಂಟುಮಾಡುತ್ತವೆ 8. ಹೈಡ್ರೋನಿಯಂ ಅಯ...

ಅಭ್ಯಾಸ ಮಾಡಿ - 4

 ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ ಭದ್ರಾವತಿ - 577 245 1.ಕ್ಯಾಲ್ಸಿಯಂ ಕಾರ್ಬೋನೇಟ್ ನ ಅಣುಸೂತ್ರ ಬರೆಯಿರಿ, CaCO3 2. ನೀರಿನ ಅಣುಸೂತ್ರ ಬರೆಯಿರಿ. H2O 3. ಕಾರ್ಬನ್ ಡೈಯಾಕ್ಸೈಡ್ ನ ಅಣುಸೂತ್ರ ಬರೆಯಿರಿ. CO2 4. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. Ca(OH)2 5. ಸುಣ್ಣದ ತಿಳಿನೀರಿನ ಅಣುಸೂತ್ರ ಬರೆಯಿರಿ. Ca(OH)2 6. ಸೋಡಿಯಂ ಕ್ಲೋರೈಡ್ ನ ಅಣುಸೂತ್ರ ಬರೆಯಿರಿ. NaCl. 7. ಸೋಡಿಯಂ ಬೈಕಾರ್ಬೋನೇಟ್ ನ ಅಣುಸೂತ್ರ ಬರೆಯಿರಿ. NaHCO3 8. ಕ್ಯಾಲ್ಶಿಯಂ ಕಾರ್ಬೋನೇಟ್ ನ ವಿವಿಧ ರೂಪಗಳನ್ನು ಹೆಸರಿಸಿ. ಸುಣ್ಣದಕಲ್ಲು  ಸೀಮೆಸುಣ್ಣ  ಅಮೃತಶಿಲೆ 9. ತಟಸ್ಥೀಕರಣ ಕ್ರಿಯೆ ಎಂದರೇನು? ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಕ್ರಿಯೆ ಲವಣ ಮತ್ತು ನೀರು ಉಂಟು ಮಾಡುವುದನ್ನು ತಟಸ್ಥೀಕರಣ ಕ್ರಿಯೆ ಎನ್ನುವರು. 10. ಲೋಹೀಯ ಆಕ್ಸೈಡ್ ಗಳು ಆಮ್ಲಗಳೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳನ್ನು ಹೆಸರಿಸಿ. ಲವಣ ಮತ್ತು ನೀರು. ######

ಅಭ್ಯಾಸ ಮಾಡಿ - 3

 ಸರ್ಕಾರಿ ಪ್ರೌಢಶಾಲೆ ಮಾವಿನಕೆರೆ ಕಾಲೋನಿ ಭದ್ರಾವತಿ -577 245 1.ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಯಾವುವು? ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಆಮ್ಲಗಳು. 2. ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಯಾವುವು? ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ರಾಸಾಯನಿಕ ವಸ್ತುಗಳು ಪ್ರತ್ಯಾಮ್ಲಗಳು. 3. ನೈಸರ್ಗಿಕ ಸೂಚಕಗಳಿಗೆ ಎರಡು ಉದಾಹರಣೆ ಕೊಡಿ. ಲಿಟ್ಮಸ್ ಅರಿಷಿಣ 4. ಸಂಶ್ಲೇಷಿತ ಸೂಚಕಗಳಿಗೆ ಎರಡು ಉದಾಹರಣೆ ಕೊಡಿ. ಮೀಥೈಲ್ ಆರೆಂಜ್ ಮತ್ತು ಫೀನಾಫ್ತಲೀನ್ 5. ಹೈಡ್ರೋಕ್ಲೋರಿಕ್ ಆಮ್ಲದ ಅಣುಸೂತ್ರ ಬರೆಯಿರಿ. HCl 6 ಸಲ್ಫ್ಯೂರಿಕ್ ಆಮ್ಲದ ಅಣುಸೂತ್ರ ಬರೆಯಿರಿ. H2SO4 7. ಗಂಧಕಾಮ್ಲದ ಅಣುಸೂತ್ರ ಬರೆಯಿರಿ. H2SO4 8. ನೈಟ್ರಿಕ್ ಆಮ್ಲದ ಅಣುಸೂತ್ರ ಬರೆಯಿರಿ. HNO3 9. ಅಸಿಟಿಕ್ ಆಮ್ಲದ ಅಣುಸೂತ್ರ ಬರೆಯಿರಿ. CH3COOH 10. ಸೋಡಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. NaOH 11. ಪೊಟ್ಯಾಷಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. KOH 12. ಮೆಗ್ನೀಷಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. Mg(OH)2 13. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನ ಅಣುಸೂತ್ರ ಬರೆಯಿರಿ. Ca(OH)2 14. ಪ್ರತ್ಯಾಮ್ಲ ಗಳಿಗೆ ಉದಾಹರಣೆ ಕೊಡಿ. ಕ್ಯಾಲ್ಸಿಯಂ ಹೈಡ್ರಾಕ್ಸೈಡ್  ಸೋಡಿಯಂ ಹೈಡ್ರಾಕ್ಸೈಡ್  ಪೊಟ್...

ಅಭ್ಯಾಸ ಮಾಡಿ -- 2

ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ, ಭದ್ರಾವತಿ. -577 245 1. ಸೌಮ್ಯ ಪ್ರತ್ಯಾಮ್ಲಕ್ಕೆ ಒಂದು ಉದಾಹರಣೆ ಕೊಡಿ. ಮೆಗ್ನೀಷಿಯಂ ಹೈಡ್ರಾಕ್ಸೈಡ್ 2.ನಮ್ಮ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ ಯಾವುದು? ಹೈಡ್ರೋಕ್ಲೋರಿಕ್ ಆಮ್ಲ 3. ಜಠರದಲ್ಲಿ ಅಗತ್ಯಕ್ಕಿಂತ ಅಧಿಕ ಆಮ್ಲ ಯಾವ  ಸಂದರ್ಭದಲ್ಲಿ ಉತ್ಪತ್ತಿಯಾಗುತ್ತದೆ? ಜಠರದಲ್ಲಿ ಅಗತ್ಯಕ್ಕಿಂತ ಅಧಿಕ ಆಮ್ಲ ಅಜೀರ್ಣತೆಯ ಸಂದರ್ಭದಲ್ಲಿ ಉತ್ಪತ್ತಿಯಾಗುತ್ತದೆ 4. 'X' ಎಂಬ ಹೆಸರಿನ ಹೊಟ್ಟೆಬಾಕ ವ್ಯಕ್ತಿಯು ವಿಶೇಷವಾದ ಭೋಜನವನ್ನು ಸೇವಿಸಿದ ನಂತರ ಹೊಟ್ಟೆನೋವು ಮತ್ತು ಹೊಟ್ಟೆಉರಿಯಿಂದ ಬಳಲುತ್ತಿದ್ದಾನೆ. ಏಕೆ? ಅಜೀರ್ಣತೆಯ ಸಂದರ್ಭದಲ್ಲಿ ಜಠರವು ಅಗತ್ಯಕ್ಕಿಂತ ಅಧಿಕ ಆಮ್ಲ ಉತ್ಪಾದಿಸುತ್ತದೆ. ಇದು ಹೊಟ್ಟೆನೋವು ಹಾಗೂ ಹೊಟ್ಟೆ ಉರಿಗೆ ಕಾರಣವಾಗುತ್ತದೆ. 5. ಅಜೀರ್ಣತೆ ಮತ್ತು ಆಮ್ಲೀಯತೆಯಿಂದಾದ ನೋವಿನಿಂದ ಮುಕ್ತಿ ಪಡೆಯಲು ಜನರು ಏನನ್ನು ಬಳಸುತ್ತಾರೆ? ಅಜೀರ್ಣತೆ ಮತ್ತು ಆಮ್ಲೀಯತೆಯಿಂದ ಆದ ನೋವಿನಿಂದ ಮುಕ್ತಿ ಪಡೆಯಲು ಜನರು ಆಮ್ಲ ಶಾಮಕ ಎಂದು ಕರೆಯಲ್ಪಡುವ ಪ್ರತ್ಯಾಮ್ಲಗಳನ್ನು ಬಳಸುತ್ತಾರೆ. 6. ಜೀರ್ಣನಾಳದಲ್ಲಿ ಆಮ್ಲಶಾಮಕಗಳ ಕಾರ್ಯವೇನು? ಆಮ್ಲಶಾಮಕಗಳು ಹೆಚ್ಚುವರಿ ಆಮ್ಲವನ್ನು ತಟಸ್ಥಗೊಳಿಸುತ್ತವೆ. 7. ಆಮ್ಲಶಾಮಕ ಕ್ಕೊಂದು ಉದಾಹರಣೆ ಕೊಡಿ. ಮೆಗ್ನೀಷಿಯಂ ಹೈಡ್ರಾಕ್ಸೈಡ್ 8. ನಮ್ಮ ದೇಹವು ಯಾವ pH ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ? ನಮ್ಮ ದೇಹವು 7.0 ಇಂದ 7.8 pH ವ್ಯಾ...

ಅಭ್ಯಾಸ ಮಾಡಿ - 1

 ಸರ್ಕಾರಿ ಪ್ರೌಢಶಾಲೆ, ಮಾವಿನಕೆರೆ ಕಾಲೋನಿ, ಭದ್ರಾವತಿ. -577 245 1.ನೈಸರ್ಗಿಕವಾಗಿ ದೊರಕುವ ಆಮ್ಲಗಳನ್ನು ಹೆಸರಿಸಿ.  1. ಅಸಿಟಿಕ್ ಆಮ್ಲ, 2. ಸಿಟ್ರಿಕ್ ಆಮ್ಲ, 3. ಟಾರ್ಟಾರಿಕ್ ಆಮ್ಲ,   4. ಆಕ್ಸಾಲಿಕ್ ಆಮ್ಲ, 5. ಲ್ಯಾಕ್ಟಿಕ್ ಆಮ್ಲ, 6. ಮಥೆನಾಯಿಕ್ ಆಮ್ಲ. 2. ವಿನೆಗರ್ ನಲ್ಲಿ ಇರುವ ಆಮ್ಲ ಯಾವುದು? ಅಸಿಟಿಕ್ ಆಮ್ಲ. 3.ಕಿತ್ತಳೆ ಹಣ್ಣಿನ ರಸದಲ್ಲಿರವ ಆಮ್ಲ ಯಾವುದು?  ಸಿಟ್ರಿಕ್ ಆಮ್ಲ. 4. ನಿಂಬೆಹಣ್ಣಿನ ರಸದಲ್ಲಿರುವ ಯಾವುದು?  ಸಿಟ್ರಿಕ್ ಆಮ್ಲ. 5. ಹುಣಿಸೆಹಣ್ಣಿನ ರಸದಲ್ಲಿರುವ ಆಮ್ಲ ಯಾವುದು? ಟಾರ್ಟಾರಿಕ್ ಆಮ್ಲ.  6. ಟೊಮ್ಯಾಟೊ ಹಣ್ಣಿನ ರಸದಲ್ಲಿರುವ ಆಮ್ಲ ಯಾವುದು? ಆಕ್ಸಾಲಿಕ್ ಆಮ್ಲ. 7. ಮೊಸರಿನಲ್ಲಿರುವ ಆಮ್ಲ ಯಾವುದು? ಲ್ಯಾಕ್ಟಿಕ್ ಆಮ್ಲ. 8. ಇರುವೆ ಕಡಿತದಿಂದಾಗುವ ನೋವಿಗೆ ಕಾರಣವಾದ ಆಮ್ಲ ಯಾವುದು? ಮೆಥೆನಾಯಿಕ್ ಆಮ್ಲ. 9. ತುರಿಕೆ ಎಲೆ ಕಡಿತದಿಂದಾಗುವ ನೋವಿಗೆ ಕಾರಣವಾದ ಆಮ್ಲ ಯಾವುದು? ಮೆಥೆನಾಯಿಕ್ ಆಮ್ಲ. 10. ಹಲ್ಲಿನ ಸವೆತ ಯಾವಾಗ ಪ್ರಾರಂಭವಾಗುತ್ತದೆ? ಬಾಯಿಯಲ್ಲಿ pH ಮೌಲ್ಯ 5.5 ಕ್ಕಿಂತ ಕಡಿಮೆಯಾದಾಗ ಹಲ್ಲಿನ ಸವೆತ ಪ್ರಾರಂಭವಾಗುತ್ತದೆ.

8th 1ನೇ ಅಧ್ಯಾಯ

 1.. ಭತ್ತವನ್ನು ಚಳಿಗಾಲದಲ್ಲಿ ಬೆಳೆಯದಿರಲು ಕಾರಣವೇನು? ಭತ್ತದ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು ಆದ್ದರಿಂದ ಇದನ್ನು ಮಳೆಗಾಲದಲ್ಲಿ ಮಾತ್ರ ಬೆಳೆಯಲಾಗುತ್ತದೆ. 2. ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಯಾವುವು? ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಕುರ್ಪಿ, ಕುಡುಗೋಲು ಸಲಿಕೆ, ನೇಗಿಲು ಇತ್ಯಾದಿ. 3. ಬೆಳೆ ಎಂದರೇನು? ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ. 4. ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯ ಇದೆಯೇ? ಹೌದು, ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯವಿದೆ. 5. ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಅಧ್ಯಾಯದಲ್ಲಿ ಬರುವ ಪ್ರಮುಖ ಪದಗಳನ್ನು ಹೆಸರಿಸಿ. ಕೃಷಿ ಪದ್ಧತಿಗಳು, ಪಶುಸಂಗೋಪನೆ ಬೆಳೆ  ರಸಗೊಬ್ಬರಗಳು ಗೋದಾಮುಗಳು  ಕೊಯ್ಲು  ನೀರಾವರಿ  ಖಾರಿಫ್  ಸಾವಯವ ಗೊಬ್ಬರ  ನೇಗಿಲು  ರಬಿ ಬೀಜಗಳು ಸಂಗ್ರಹಾಗಾರ ಬಿತ್ತನೆ  ಸಂಗ್ರಹಣೆ  ಒಕ್ಕಣೆ  ಕಳೆಗಳು  ಕಳೆನಾಶಕ  ತೂರುವಿಕೆ. 6. ಕೃಷಿ ಪದ್ಧತಿಗಳು ಎಂದರೇನು?   ಬೆಳೆಗಳ ಕೃಷಿಯು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ರೈತರು ಕೈಗೊಳ್ಳುವ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ, ಈ ಚಟುವಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ್ಧತಿಗಳು ಎನ್ನುವರು. 7. ಕೃಷಿ ಪದ್ಧತಿಗಳನ್ನು ಪಟ್ಟಿ ಮಾಡಿ. ಮಣ್ಣನ್ನು ಹದಗೊಳಿಸುವಿಕೆ...

ವಿದ್ಯುಚ್ಛಕ್ತಿ

 ವಿದ್ಯುಚ್ಛಕ್ತಿ ಆಧುನಿಕ ಸಮಾಜದಲ್ಲಿ ವಿದ್ಯುಚ್ಛಕ್ತಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಗಳು, ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು ಮತ್ತು ಇನ್ನಿತರ ಸ್ಥಳಗಳಲ್ಲಿ ವಿದ್ಯುಚ್ಛಕ್ತಿ ಬಹು ಅನುಕೂಲಕರವಾದ ಶಕ್ತಿಯ ಒಂದು ರೂಪವಾಗಿದೆ. *** ವಿದ್ಯುಚ್ಛಕ್ತಿಯು ಹೇಗೆ ರೂಪುಗೊಂಡಿದೆ? *** ವಿದ್ಯುನ್ಮಂಡಲದ ಮೂಲಕ ಹರಿಯುವ ವಿದ್ಯುಚ್ಛಕ್ತಿಯನ್ನು ನಿಯಂತ್ರಿಸುವ ಅಂಶಗಳು ಯಾವುವು? *** ವಿದ್ಯುತ್ ಪ್ರವಾಹದ ಉಷ್ಣ ಪರಿಣಾಮ ಗಳು ಮತ್ತು ಅದರ ಅನ್ವಯಗಳು. ಕವನ: ಹರಿಯುವ ನೀರು ನದಿಗಳಲ್ಲಿ ನೀರಿನ ಪ್ರವಾಹವನ್ನು ರೂಪಿಸುತ್ತದೆ.  ಹರಿಯುವ ನೀರು ನದಿಗಳಲ್ಲಿ ನೀರಿನ ಪ್ರವಾಹವನ್ನು ರೂಪಿಸುತ್ತದೆ.  ವ್ಹಾ! ವ್ಹಾ! ವ್ಹಾ! ವ್ಹಾ! ವಿದ್ಯುದಾವೇಶವು ವಾಹಕದ ಮೂಲಕ ಹರಿಯುವಾಗ ವಾಹಕದಲ್ಲಿ ವಿದ್ಯುತ್ ಪ್ರವಾಹವನ್ನು ರೂಪಿಸುತ್ತದೆ. ವಿದ್ಯುದಾವೇಶ ( electric charge) ವಾಹಕ--ಒಂದು ಲೋಹದ ತಂತಿ. (CONDUCTOR) --- A metallic wire. ಟಾರ್ಚ್ ನಲ್ಲಿ ಸೆಲ್ ಗಳನ್ನು (ಶುಷ್ಕಕೋಶ) ಸರಿಯಾದ ಕ್ರಮದಲ್ಲಿ ಇರಿಸಿದಾಗ ಟಾರ್ಚ್ ಬಲ್ಬ್ ಬೆಳಗಲು ಆದೇಶಗಳ ಪ್ರವಾಹಅಥವಾ ವಿದ್ಯುತ್ ಪ್ರವಾಹವನ್ನು ಶುಷ್ಕಕೋಶ ಒದಗಿಸುತ್ತದೆ. ಟಾರ್ಚಿನ ಸ್ವಿಚ್ ಆನ್ ಆಗಿದ್ದಾಗ ಮಾತ್ರ ಟಾರ್ಚ್ ಬೆಳಕನ್ನು ನೀಡುತ್ತದೆ. ***( ಸ್ವಿಚ್, ಕೋಶ ಮತ್ತು ಬಲ್ಬ್ ಗಳು ನಡುವೆ ಸಂಪರ್ಕ ಕೊಂಡಿಯಂತೆ ಕೆಲಸ ಮಾಡುತ್ತದೆ) ***ವಿದ್ಯುತ್ ಮಂಡಲ ಎಂದರೇನು? ವಿದ್ಯುತ್ಪ್ರ...